ಭಟ್ಕಳ : ಭಟ್ಕಳ ನಗರ ಠಾಣೆ ಪೊಲೀಸರು ಇಂದು (ಭಾನುವಾರ) ಭರ್ಜರಿ ಗಾಂಜಾ ಭೇಟೆ ನಡೆಸಿದ್ದು 4,50,000 ಮೊತ್ತದ ಗಾಂಜಾ ಸಹಿತ ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಇವತ್ತು (ಭಾನುವಾರ, 10/11/2024) ಸಂಜೆ 5.30ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ತೆಂಗಿನಗುಡಿ ಕ್ರಾಸ್ ಬಳಿ ಹುಂಡೈ ಕಂಪನಿಯ ಬಿಳಿ ಬಣ್ಣದ ಎಸೆಂಟ್ ಕಾರಿನಲ್ಲಿ 9 ಕೆ.ಜಿ. 170 ಗ್ರಾಂ ತೂಕದ ನಿಷೇಧಿತ ಗಾಂಜಾ ಸಾಗಿಸಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಪಡೆದ ಭಟ್ಕಳ ನಗರ ಪೊಲೀಸರು ಕಾರು, ಗಾಂಜಾ ಸಹಿತ ಮೂವರನ್ನು ವಶಕ್ಕೆ ಪಡೆದು ಕೋರ್ಟಿಗೆ ಹಾಜರು ಪಡಿಸಿದ್ದಾರೆ.

RELATED ARTICLES  ಮುರ್ಡೇಶ್ವರದ ಕಡಲ ತೀರದಲ್ಲಿ ಕುಸಿದು ಬಿದ್ದು ಮೃತಳಾದ ವಿದೇಶಿ ಪ್ರಜೆ.

ವಶ ಪಡಿಸಿಕೊಂಡ 9 ಕೆ.ಜಿ. 170 ಗ್ರಾಂ ಗಾಂಜಾ ಬೆಲೆ 4,50,000 ರೂಪಾಯಿ ಮತ್ತು ವಶ ಪಡಿಸಿಕೊಂಡ ಕಾರಿನ ಬೆಲೆ 6 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

RELATED ARTICLES  ಮಳೆ, ಗಾಳಿಯ ಅಬ್ಬರಕ್ಕೆ‌ ಮುಳುಗಿದ ಬೋಟ್.

ಸಯ್ಯದ್ ಅಕ್ರಂ (24), ಅಬ್ದುಲ್ ರೆಹಮಾನ್ (27), ಅಜರುದ್ದೀನ್ (41) ಇವರು ಬಂಧಿತ ಆರೋಪಿಗಳಾಗಿದ್ದಾರೆ. ಇವರ ಜೊತಗಿದ್ದ ಖಾಸಿಂ ಎನ್ನುವಾತ ತಪ್ಪಿಸಿಕೊಂಡಿದ್ದು, ಈತನನ್ನು ವಶಕ್ಕೆ ಪಡೆಯಲು ಪೊಲೀಸರು ಬಲೆ ಬೀಸಿದ್ದಾರೆ.

ಭಟ್ಕಳ ಪೊಲೀಸರ ಈ ಕಾರ್ಯಾಚರಣೆಯನ್ನು ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ಎಂ. ನಾರಾಯಣ ಅವರು ಶ್ಲಾಘಿಸಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.