ಶಿರಸಿ : ತಾಲೂಕಿನ ಬಿಸಲಕೊಪ್ಪ ಸಮೀಪದ ಶಿರಸಿ-ಹುಬ್ಬಳ್ಳಿ ರಸ್ತೆಯ ಪಕ್ಕದಲ್ಲಿರುವ ವಡಗೇರಿ ಗ್ರಾಮಕ್ಕೆ 5-6 ಕಾಡಾನೆಗಳುಳ್ಳ ಹಿಂಡೊಂದು ಹಠಾತ್ ನುಗ್ಗಿ ಬಂದು ಕೃಷಿ ಜಮೀನಿನಲ್ಲಿ ರಾತ್ರಿಯಿಡೀ ಲೂಟಿಗೈದು, ಬೆಳೆದು ನಿಂತ ಭತ್ತದ ಗದ್ದೆ ಹಾಗೂ ಅಡಿಕೆ ತೋಟದಲ್ಲಿನ ಅಡಿಕೆ ಗಿಡ,ಬಾಳೆ ಮರಗಳನ್ನು ನಾಶ ಪಡಿಸಿದ ಹೃದಯವಿದ್ರಾವಕ ದುರ್ಘಟನೆ ಶುಕ್ರವಾರ ಸಂಜೆ ಜರುಗಿದೆ.

ಸಮೀಪದ ಅರಣ್ಯ ಪ್ರದೇಶದಲ್ಲಿ ಕಂಡು ಬಂದ ಆನೆಗಳ ಗುಂಪೊಂದನ್ನು ಚದುರಿಸುವ ಪ್ರಯತ್ನ ನಡೆಸಿದ್ದರಿಂದ
ಈ ಆನೆಗಳು ಎಲ್ಲೆಂದರಲ್ಲಿ ಓಡಲು ಪ್ರಾರಂಭಿಸಿ, ಪಟಾಕಿ-ಗರ್ನಾಲು ಶಬ್ದ ಕೇಳಿದಕೂಡಲೇ ತಮ್ಮ ರಕ್ಷಣೆಗೋಸ್ಕರ ಕೃಷಿತೋಟಕ್ಕೆ ನುಗ್ಗಿರಬಹುದೆಂದೂ,
ಆನೆಗಳು ತೋಟಕ್ಕೆ ನುಗ್ಗಿದ್ದನ್ನು ಕಂಡು ಅವನ್ನು ಚದುರಿಸುತ್ತ ಬಂದವರು ಅಲ್ಲಿಂದ ಕಾಲ್ಕಿತ್ತಿರಬಹುದಾಗಿಯೂ ಶಂಕಿಸಲಾಗಿದೆ.

RELATED ARTICLES  ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಉಪಾಧ್ಯಕ್ಷರಾಗಿ ಅನಂತಮೂರ್ತಿ ಹೆಗಡೆ ಆಯ್ಕೆ

ನುಗ್ಗಿದ ಈ ಆನೆಗಳು ರಾತ್ರಿಯಿಡಿ ಭತ್ತದ ಗದ್ದೆಯಲ್ಲಿ ಹೊರಳಾಡಿ ಗದ್ದೆಯನ್ನು ಕೆರೆಯಂತೆ ಮಾಡಿ ಬೆಳೆ ನಾಶಪಡಿಸಿರುವ ದೃಶ್ಯಾವಳಿ ಹಾಗೂ
ತೋಟದಲ್ಲಿ ಬೆಳೆದು ನಿಂತ ಅಡಿಕೆ ಗಿಡಗಳು,ಬಾಳೆ ಮರಗಳನ್ನು ಈ ಮದಗಜಗಳು ನಾಶಪಡಿಸಿರುವ ದೃಶ್ಯಾವಳಿಯ ವಿಡಿಯೋ ತುಣುಕುಗಳು ವೈರಲ್ ಆಗಿವೆ.
ಈ ವಿಡಿಯೋವು ಕೃಷಿಕರ ಸಂಕಟಗಳನ್ನು ಹೆಚ್ಚಿಸುತ್ತಿದ್ದು,ಇತರ ನೋಡುಗರ ಮನಗಳನ್ನೂ ಕರಗಿಸುವಂತಿದೆ.

RELATED ARTICLES  ಸುಬ್ರಹ್ಮಣ್ಯ ಭಟ್ಟ CA ಪರೀಕ್ಷೆಯಲ್ಲಿ ಉತ್ತೀರ್ಣ.

1000301295

ಕಾಡಾನೆಗಳ ಹಾವಳಿ ಕುರಿತು ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಕೂಡಲೇ ಜೀವ ಹಾಗೂ ಬೆಳೆ ರಕ್ಷಣೆ ಬಗ್ಗೆ ಮುಂಜಾಗೃತಾ ಕ್ರಮಕೈಕೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕೃಷಿಕರಿಗಾದ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಿ,ಸಾಂತ್ವಾನ ನೀಡಬೇಕಾಗಿಯೂ ನೊಂದ ಸ್ಥಳೀಯ ಕೃಷಿಕ ಮಹೇಂದ್ರ ಎಸ್.ಹೆಗಡೆ ಬಳಗಂಡಿ ಸರಕಾರವನ್ನು ಆಗ್ರಹಿಸಿದ್ದಾರೆ.