ದಾಂಡೇಲಿ: ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕುಳಗಿ ವನ್ಯಜೀವಿ ವಲಯದ ಜಮಗಾ ಶಾಖೆಯ ಅಂಬಿಕಾನಗರದ ಅಯ್ಯಪ್ಪ ದೇವಸ್ಥಾನದ ಹತ್ತಿರ ಚಿರತೆ ಚರ್ಮ ಮಾರಾಟ ಮಾಡಲೆತ್ನಿಸುತ್ತಿದ್ದ ತಂಡವನ್ನು ಚರ್ಮ ಸಹಿತ ಬಂಧಿಸಿರುವ ಅರಣ್ಯ ಇಲಾಖಾ ಅಧಿಕಾರಿಗಳು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಜೋಯಿಡಾ ತಾಲೂಕಿನ ಬಾಮಣಗಿಯ ಚಂದ್ರಕಾಂತ ರವಿದಾಸ ಪೂಲಕರ , ಆಕಾಶ ದತ್ತು ಬಾದ್ವನಕರ, ರಮೇಶ ದತ್ತು ಬಾದ್ವನಕರ, ದಾಂಡೇಲಿಯ ಸುಭಾಸ ನಗರದ ಬಶೀರ ಅಹ್ಮದ ಬಾಬೂಸಾಬ ಮಸನಕಟ್ಟಿ., ಜೋಯಿಡಾ ಬಿರಿಂಪಾಲಿಯ ಶ್ರೀಕಾಂತ ರಾಮಾ ನುಜ್ಜಕರ ಇವರೇ ಬಂದಿತ ಆರೋಪಿಗಳಾಗಿದ್ದಾರೆ. ನ್ಯಾಯಾಲಯ ಆರೋಪಿಗಳನ್ನು ಅಕ್ಟೋಬರ್ 26ರರವೆಗೆ ನ್ಯಾಯಾಂಗ ಬಂದನಕ್ಕೊಪ್ಪಿಸಿದೆ.

RELATED ARTICLES  ಶಿರಸಿಯಲ್ಲಿ ಸಂಪನ್ನವಾದ ಪಾರಂಪರಿಕ ವೈದ್ಯರ ಸಮಾವೇಶ: ಶಾಸಕ ಕಾಗೇರಿಯವರಿಗೆ ಸರಕಾರದ ಮಟ್ಟದಲ್ಲಿ ಕೆಲ ಕಾರ್ಯ ಯೋಜನೆಗೆ ಒತ್ತಾಯ.

ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾದ ಓ. ಪಾಲಯ್ಯಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವೈ.ಎನ್. ಮುನವಳ್ಳಿ ಮಾರ್ಗದರ್ಶನದಲ್ಲಿ ಕುಳಗಿ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿಗಳಾದ ಡಾ. ಸಂತೋಷ ಚವ್ಹಾಣ ನೇತ್ರತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ನೂರಂದಪ್ಪಾ ಟಿ. ಲಮಾಣಿ, ಅರಣ್ಯ ರಕ್ಷಕ ಎಮ್.ಪಿ. ಪಾಟೀಲ್, ಶ್ವಾನದಳ ನಿರ್ವಾಹಕ ವೆಂಕಟೇಶ ವಾಹನ ಚಾಲಕ ವೀರಯ್ಯ ಗಡ್ಡದೇವರಮಠ ಮುಂತಾದವರು ಭಾಗವಹಿಸಿದ್ದರು.

RELATED ARTICLES  ದಿನಕರ ಶೆಟ್ಟಿಯವರಿಗೆ ಸುಧಾಗೌಡರ ಸಂಪೂರ್ಣ ಬೆಂಬಲ.