ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ನಾವು ಒಂದಿಷ್ಟು ಕನಸು ಕಂಡಿದ್ದೇವೆ. ಜಿಲ್ಲೆಯು ಶೈಕ್ಷಣಿಕವಾಗಿ ಬೆಳೆಯಬೇಕು ಎಂಬುದಕ್ಕಾಗಿ ಕಾರ್ಯ ಮಾಡುತ್ತಿದ್ದೇವೆ. ಅದಕ್ಕೆ ಏಕ ಮನಸ್ಸಿನ ಅನೇಕರು ಕೈಜೋಡಿಸಬೇಕಾಗಿದೆ ಎಂದು ಡಾ.ಎ.ವಿ.ಬಾಳಿಗಾ ಕಲಾ-ವಿಜ್ಞಾನ ಪದವಿ ಕಾಲೇಜು ಅಲ್ಯುಮ್ನಿ ಟ್ರಸ್ಟ್‌ ಅಧ್ಯಕ್ಷ ಎಚ್‌. ಜಿ. ವಿಜಯಕುಮಾರ ಹೇಳಿದರು. ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಭಾಭವನದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಸಾಧಕ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಿ ಅವರು ಮಾತನಾಡಿದರು.

ನಾವು ಕಂಡ ಕನಸನ್ನು ಸವಾಲಾಗಿ ಎದುರಿಸುವ ಧೈರ್ಯ ತೋರುವಂಥ ವಿಭಿನ್ನ ಶೈಕ್ಷಣಿಕ ಹಾಗೂ ಔದ್ಯೋಗಿಕ ವಾತಾವರಣ ಜಿಲ್ಲೆಯಲ್ಲಿ ನಿರ್ಮಾಣವಾಗಲು ಸಮಾನ ಮನಸ್ಕರು ಕೈ ಜೋಡಿಸಬೇಕು ಎಂದು ವಿನಂತಿಸಿದ ಅವರು, ಡಾ.ಎ.ವಿ.ಕಾಲೇಜಿನ ವಿವಿಧ ಅಂಗ ಸಂಸ್ಥೆಗಳಿಗೆ ಇದುವರೆಗೆ ಬೇರೆ ಉದ್ಯಮಿಗಳ ದಾನಿಗಳ ಸಿ.ಎಸ್.ಆರ್ ನಿಧಿ ಸೇರಿ ಅಲ್ಯುಮ್ಮಿ ಟ್ರಸ್ಟ್ ಅಂದಾಜು ಎರಡು ಕೋಟಿ ದೇಣಿಗೆ ನೀಡಿದೆ. ನಾವು ಓದಿದ ಕಾಲೇಜಿನಲ್ಲಿ ಶೈಕ್ಷಣಿಕ ಅಭಿವೃದ್ಧಿಯನ್ನು ಟ್ರಸ್ಟ್ ಮೂಲಕ ಮಾಡುವ ಗುರಿ ಹೊಂದಲಾಗಿದೆ. ಜೊತೆಗೆ ಉತ್ತರ ಕನ್ನಡದ ಇತರ ಸಂಸ್ಥೆಗಳು ಶಿಕ್ಷಣದಲ್ಲಿ ಹಿಂದೆ ಬೀಳಬಾರದು ಅಗತ್ಯ ಇರುವ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಹಾಗೂ ಶೈಕ್ಷಣಿಕ ಪ್ರಕ್ರಿಯೆ ಅಗತ್ಯವಾದ ವಸ್ತುಗಳನ್ನು ನೀಡುವುದರ ಮೂಲಕ ಶಾಲೆಗಳಿಗೆ ನೆರವಾಗುತ್ತಿದ್ದೇವೆ ಎಂದರು.

RELATED ARTICLES  ಬಂದ್ ಆಗಲಿದೆ ಕುಮಟಾ ಶಿರಸಿ ರಸ್ತೆ.

ಬಾಳಿಗಾ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳೆಲ್ಲ ಸೇರಿಕೊಂಡು ಈ ಟ್ರಸ್ಟನ್ನು ಹುಟ್ಟು ಹಾಕಿದ್ದು ಈ ಮೂಲಕ ಜಿಲ್ಲೆಯ ಅಭಿವೃದ್ಧಿಯ ಕನಸು ಕಾಣುತ್ತಿದ್ದೇವೆ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಕೊಂಕಣ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಮುರಳಿಧರ ಪ್ರಭು ಮಾತನಾಡಿ, ‘ನೆರೆಯ ಹುಬ್ಬಳ್ಳಿ, ಧಾರವಾಡ, ಇನ್ನೊಂದೆಡೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಹೆಚ್ಚಿನ ಶಿಕ್ಷಣ ಸಂಸ್ಥೆಗಳಿಗಿಂತ 5 ಪಟ್ಟು ಹಳೆಯದಾದ ಶಿಕ್ಷಣ ಸಂಸ್ಥೆಗಳು ಉತ್ತರ ಕನ್ನಡದಲ್ಲಿ ಇದ್ದರೂ ಉತ್ತರ ಕನ್ನಡದಲ್ಲಿ ಶೈಕ್ಷಣಿಕವಾಗಿ ನಾವು ಇನ್ನಷ್ಟು ಕಾರ್ಯ ಮಾಡಬೇಕಾಗಿದೆ. ಮಳೆಯ ಜಿಲ್ಲೆಯವರು ಉತ್ತರ ಕನ್ನಡಕ್ಕೆ ಬಂದು ಶಿಕ್ಷಕರನ್ನು ಮೊದಲು ಕರೆದೊತ್ತಿದ್ದರು ಆದರೆ ಇದೀಗ ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಜಿಲ್ಲೆಗೆ ಬಂದು ಲಕ್ಷ ಲಕ್ಷ ರೂಪಾಯಿಗಳ ವಿದ್ಯಾರ್ಥಿ ವೇತನ ನೀಡುವುದಾಗಿ ಘೋಷಣೆ ಮಾಡುತ್ತಾರೆ ನಮ್ಮ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬೇರೆಡೆಗೆ ಹೋಗುವ ಅವಶ್ಯಕತೆ ಇದೆಯೇ? ನಮ್ಮ ಮಕ್ಕಳು ನಮ್ಮಲ್ಲಿಯೇ ಕಲಿಯುವ ವ್ಯವಸ್ಥೆಯನ್ನು ನಾವೇಕೆ ಹುಟ್ಟು ಹಾಕಬಾರದು? ಎಂದು ಪ್ರಶ್ನಿಸಿದರು.

1000301295

ತಾಲೂಕಿನಲ್ಲಿರುವ ಎಲ್ಲಾ ಸಂಸ್ಥೆಗಳು ಒಂದಾಗಿ ಒಂದು ಚಿಂತನ ಸಭೆಯನ್ನು ನಡೆಸಬೇಕು. ಆ ಮೂಲಕ ಎಲ್ಲರೂ ಒಂದಾಗಿ ಕುಮಟಾವನ್ನು ಇಡೀ ಜಿಲ್ಲೆಯ ಶೈಕ್ಷಣಿಕ ಗುರುಕುಲವಾಗಿ ರೂಪಿಸಲು ಸಾಧ್ಯವಿದೆ. ಕಾಡುಗಳು ಹೆಚ್ಚಿರುವ ಉತ್ತರ ಕನ್ನಡ ಜಿಲ್ಲೆ, ನಿಜವಾಗಿಯೂ ಶೈಕ್ಷಣಿಕ ಗುರುಕುಲವಾಗಿ ಬೆಳೆಯಬೇಕು ಎಂಬುದು ನಮ್ಮ ಆಶಯ ಇದಕ್ಕೆ ಇಂತಹ ಟ್ರಸ್ಟ್ ಗಳು ಕಾರ್ಯೋನ್ಮುಖವಾದಲ್ಲಿ ನಾವೆಲ್ಲರೂ ಜೊತೆಗಿದ್ದೇವೆ ಎಂದು ಅವರು ಅಭಿಪ್ರಾಯಪಟ್ಟರು.

RELATED ARTICLES  ಗೋರೆಯ ರಥೋತ್ಸವ ಸಂಪನ್ನ.

‘ತಾಲ್ಲೂಕಿನ ಹೆಚ್ಚಿನ ಸರ್ಕಾರಿ ಶಾಲೆಗಳಿಗೆ ಪ್ರತೀ ವರ್ಷ ಮೂಲ ಸದ ಸೌಲಭ್ಯ, ಶಿಕ್ಷಕರನ್ನು ನೀಡುತ್ತಿರುವ ಕೆ ಅಲ್ಯುಮ್ಮಿ ಟ್ರಸ್ಟ್ ಮಾದರಿಯಾಗುವಂಥ ಕೆಲಸಗಳನ್ನು ಮಾಡುತ್ತಿದೆ. ಇಲ್ಲಿ ಶೈಕ್ಷಣಿಕ ಕ್ರಾಂತಿ ಆರಂಭಿಸುವ ಬಗ್ಗೆ ಟ್ರಸ್ಟ್ ಸಮಾನ ಮನಸ್ಕರೊಂದಿಗೆ ಚಿಂತನೆ ನಡೆಸಬೇಕಿದೆ’ ಎಂದರು.

ಡಾ. ಎ.ವಿ.ಬಿ ಕಲಾ-ವಿಜ್ಞಾನ ಪದವಿ ಕಾಲೇಜು ನಿವೃತ್ತ ಪ್ರಾಧ್ಯಾಪಕ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಎಂ.ಡಿ.ಸುಭಾಶ್ಚಂದ್ರನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಟ್ರಸ್ಟ್ ಕಾರ್ಯದರ್ಶಿ ಜ್ಯೋತಿ ಪೈ, ಉಪಾಧ್ಯಕ್ಷ ಅರುಣ ಪ್ರಭು, ಖಜಾಂಚಿ ಉಲ್ಲಾಸ ಅಬ್ಬಿಮನೆ, ಜಂಟೀ ಕಾರ್ಯದರ್ಶಿ ಜಯಶ್ರೀ ಶಿವಕುಮಾರ್ ವೇದಿಕೆಯಲ್ಲಿ ಇದ್ದರು.

ಡಾ. ಎ.ವಿ.ಬಾಳಿಗಾ ಸಂಸ್ಥೆಯ ಸಂಸ್ಥೆಯ ಎಲ್ಲ ಕಾಲೇಜುಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 151 ವಿದ್ಯಾರ್ಥಿಗಳಿಗೆ ಹಾಗೂ ತಾಲೂಕಿನ ವಿವಿಧ ಶಾಲೆಗಳ ಅರ್ಹ ಬಡ ವಿದ್ಯಾರ್ಥಿಗಳಿಗೆ ಒಟ್ಟೂ ರೂ. 9 ಲಕ್ಷಕ್ಕೂ ಅಧಿಕ ಮೊತ್ತದ ನಗದಿನ ಜೊತೆ ಸಾಧಕರಿಗೆ ಟ್ರೋಫಿ ನೀಡಿ ಪ್ರೋತ್ಸಾಹಿಸಲಾಯಿತು.

Vinayak Rexin