ಕುಮಟಾ : ಜಿಲ್ಲೆಯ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿರುವ ಅನುಭವ ಆಗಿದ್ದು, ಜನರು ಭಯಗೊಳ್ಳುವಂತಾಗಿದೆ. ಭಾನುವಾರ ಮಧ್ಯಾಹ್ನ11.50ರ ಆಸುಪಾಸಿನಲ್ಲಿ ಮೂರು ಸೆಕೆಂಡ್ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ.

ಶಿರಸಿ ವ್ಯಾಪ್ತಿಯ ದೇವಿಮನೆ ಘಟ್ಟ, ರಾಗಿ ಹೊಸಳ್ಳಿ, ಕಸಗೆ, ಬಂಡಳ ಮೊದಲಾದ ಪ್ರದೇಶದ ಜನ ತಮಗಾದ ಅನುಭವದ ಬಗ್ಗೆ ಮಾತನಾಡಿದ್ದಾರೆ. ತಟ್ಟಿಕೈ, ಹೆಗ್ಗರಣಿ, ವಾನಳ್ಳಿ, ಮತ್ತಿಘಟ್ಟ, ಸಂಪಖoಡ ಭಾಗದಲ್ಲಿಯೂ ಭೂಮಿ ಕಂಪಿಸಿದೆ. ಸಿದ್ದಾಪುರದ ಕಾನಸೂರು, ಯಲ್ಲಾಪುರದ ಚೌವತ್ತಿ ಭಾಗದಲ್ಲಿಯೂ ಕಂಪನದ ಅನುಭವವಾಗಿದೆ. ಕೆಲವರು ತಮ್ಮ ಮನೆಯೂ ಕಂಪನವಾದ ಅನುಭವವನ್ನು ಹಂಚಿಕೊoಡಿದ್ದಾರೆ.

RELATED ARTICLES  ಕುಮಟಾ ಯುವಮೋರ್ಚಾ ಕಾರ್ಯಕಾರಿಣಿ : ಹಾಗೂ ವಿವೇಕ ಬ್ಯಾಂಡ್ ಧಾರಣೆ ಕಾರ್ಯಕ್ರಮ ಯಶಸ್ವಿ.

ಭೂ ಕಂಪನದ ಜೊತೆ ಕೆಲವರು ಗುಡುಗಿದ ಶಬ್ದವನ್ನು ಕೇಳಿದ್ದಾರೆ. ಎರಡು ಬಾರಿ ದೊಡ್ಡ ಪ್ರಮಾಣದಲ್ಲಿ ಶಬ್ದವಾಗಿದೆ. ಹಿಂದೂ ಮಹಾಸಾಗರದ 10 ಕಿಲೋಮೀಟರ್ ಆಳದಲ್ಲಿ ಇದೇ ವೇಳೆ ಭೂ ಕಂಪನ ಆಗಿರುವುದು ಖಚಿತವಾಗಿದೆ.
ಉತ್ತರ ಕನ್ನಡ ಜಿಲ್ಲಾಡಳಿತದ ವಿಪತ್ತು ನಿರ್ವಹಣಾ ಕೋಶದವರು ಬೆಂಗಳೂರು ಕಚೇರಿಗೆ ಭೂ ಕಂಪನದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನಲೆ ಜಿಐಸಿ ತಂಡ ಅಧ್ಯಯನ ನಡೆಸುತ್ತಿದ್ದು, ರೇಡಾರ್ ಮ್ಯಾಪಿನಿಂದ ತೀವೃತೆ ಬಗ್ಗೆ ಅಂದಾಜಿಸಲಾಗುತ್ತಿದೆ.

RELATED ARTICLES  ವಾಟ್ಸ್ಅಪ್ ನ್ಯೂಸ್ ಗ್ರುಪ್‍ಗಳ ಹಾವಳಿ ನಿಯಂತ್ರಿಸಲು ದೂರು! ಸೂಕ್ತ ಕ್ರಮದ ಭರವಸೆ.