ಶಿರಸಿ: ಇಲ್ಲಿನ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಯಜ್ಞೇಶ್ವರ ಆರ್ ನಾಯ್ಕ (56)ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಮೃತರು ಪತ್ನಿ ಈರ್ವರು ಪುತ್ರಿಯರು ಮತ್ತು ಅಪಾರ ವಿದ್ಯಾರ್ಥಿ ಸಮೂಹ ಮತ್ತು ಶಿಕ್ಷಕ ವೃಂದದವರನ್ನು ಬಂದು ಬಳಗ ಅಗಲಿದ್ದಾರೆ.
ಮೂಲತಃ ಸಿದ್ದಾಪುರ ತಾಲೂಕಿನ ಬೇಡ್ಕಣಿಯವರಾಗಿದ್ದ ಅವರು ಹಾವೇರಿಯಲ್ಲಿ ಮುಖ್ಯೋಪಧ್ಯಾಯರಾಗಿ ಸೇವೆ ಸಲ್ಲಿಸಿದ ಬಳಿಕ ಶಿರಸಿ ಮಾರಿಕಾಂಬಾ ಪ್ರೌಢ ಶಾಲೆಯಲ್ಲಿ ಉಪ ಪ್ರಾಂಶುಪಾಲರಾಗಿ ಕಳೆದ ಒಂದು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು.
ಮೃತ ದೇಹವನ್ನು ಮಾರಿಕಾಂಬಾ ಶಾಲೆಗೆ ತಂದು ಬಳಿಕ ಅವರ ಹೂಟ್ಟೂರಿಗೆ ಸಾಗಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ನೆಚ್ಚಿನ ಉಪ ಪ್ರಾಂಶುಪಾಲರಿಗೆ ಕಣ್ಣೀರಿನಲ್ಲಿ ಅಂತಿಮ ದರ್ಶನ ಪಡೆದರು. ಯಜ್ಞೇಶ್ವರ ನಾಯ್ಕ ಇನ್ನಿಲ್ಲ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಭೀಮಣ್ಣ ನಾಯ್ಕ ಅವರು ಟಿ ಎಸ್ ಎಸ್ ಆಸ್ಪತ್ರಗೆ ತೆರಳಿ ಅಂತಿಮ ದರ್ಶನ ಪಡೆದು ಯಜ್ಞೇಶ್ವರ ನಾಯ್ಕ ಮಾರಿಕಾಂಬಾ ಶಾಲೆಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.