- ತೃತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ನಾಳೆ ಚಾಲನೆ
- ಕೊನೇ ಹಂತದ ಸಿದ್ಧತೆಗಳ ಪರಿಶೀಲನೆ
ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಐತಿಹಾಸಿಕ ತೃತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ಚಾಲನೆ ದೊರೆಯಲಿದ್ದು, ನಾಡಿನ ಸಂತಶ್ರೇಷ್ಠರ ಸಾನ್ನಿಧ್ಯದಲ್ಲಿ ಹಾಗೂ ದೇಶವಿದೇಶಗಳ ಗಣ್ಯಮಾನ್ಯರ ಸಮ್ಮುಖದಲ್ಲಿ ವಿಶಿಷ್ಟ ಹವ್ಯಕ ಸಂಸ್ಕೃತಿಯ ಅನಾವರಣ ಬೃಹತ್ ರೂಪದಲ್ಲಿ ನಡೆಯಲಿದೆ.
ಶ್ರೀ ಅಖಿಲ ಹವ್ಯಕ ಮಹಾಸಭೆಗೆ 81 ವರ್ಷಗಳು ತುಂಬಿದ ಸಂಭ್ರಮದಲ್ಲಿ ಚಾರಿತ್ರಿಕವಾದ ಸಮ್ಮೇಳನವನ್ನು ೨೩೦೦ ಕಿ.ಮೀ ದೂರದ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಅಹಿಚ್ಛತ್ರದಿಂದ ತರಲಾದ ಜ್ಯೋತಿಯಿಂದ ದೀಪವನ್ನು ಬೆಳಗುವುದರ ಮೂಲಕ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ ಸಿಗಲಿದೆ. ಉದ್ಘಾಟನೆಗೂ ಮುನ್ನ ಸಂತರು ಹಾಗೂ ಗಣ್ಯರಿಗೆ ವೈಭವದ ಸ್ವಾಗತ ನಡೆಯಲಿದ್ದು, 1081 ಮಾತೆಯರಿಂದ ಪೂರ್ಣಕುಂಭ ಸ್ವಾಗತ, 1081 ಮಕ್ಕಳಿಂದ ಪುಷ್ಪವೃಷ್ಟಿ ಸ್ವಾಗತ ಹಾಗೂ 1081 ಪುರುಷರಿಂದ ವೇದಘೋಷ ಸ್ವಾಗತ ವೈಭವದಿಂದ ನಡೆಯಲಿದೆ.
ಸಮ್ಮೇಳನದ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿದ್ದು, 1081 ಜನರ ಪ್ರಧಾನ ಸಮಿತಿ ಹಾಗೂ ಸಂಚಾಲನಾ ಸಮಿತಿ ಮೇಲುಸ್ತುವಾರಿ ವಹಿಸಿದ್ದು, ಸಾವಿರಕ್ಕೂ ಅಧಿಕ ಕಾರ್ಯಕರ್ತರ ಪಡೆ ಸಿದ್ದತೆಯಲ್ಲಿ ನಿರತವಾಗಿದೆ. ವೇದಿಕೆ, ಗಾಯತ್ರೀ ಥೀಮ್ ಪಾರ್ಕ, ವಾಣಿಜ್ಯ ಮಳಿಗೆ, ಪಾರಂಪರಿಕ ವಸ್ತುಪ್ರದರ್ಶನ ಸಿದ್ದವಾಗಿದ್ದು, ಪಾಕೋತ್ಸವ, ಆಲೇಮನೆಗಳು ಹವಿಸವಿಯ ಆಹಾರವನ್ನು ಉಣಬಡಿಸಲಿವೆ. ನೂರಾರು ಬಾಣಸಿಗರ ತಂಡ ಬಗೆಬಗೆಯ ತಿನಿಸುಗಳನ್ನು ಉಣಬಡಿಸಲು ಸಿದ್ದವಾಗಿದೆ.
ಸಮ್ಮೇಳನದ ಗೌರವಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಅಧ್ಯಕ್ಷರಾದ ಡಾ. ಗಿರಿಧರ ಕಜೆ, ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ ಸೇರಿದಂತೆ ಪ್ರಮುಖರು ಕೊನೇ ಕ್ಷಣದ ಸಿದ್ದತೆಗಳನ್ನು ಪರಿಶೀಲಿಸಿದರು.
ಹವ್ಯಕ ಸಮ್ಮೇಳನವು ಎಲ್ಲಾ ಜಾತಿ ಸಮುದಾಯದವರಿಗೂ ಮುಕ್ತವಾಗಿದ್ದು, ಸಮಷ್ಟಿ ಸಮಾಜದವರು ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಈ ಸಮ್ಮೇಳನದಲ್ಲಿ ೬೦ಕ್ಕೂ ಅಧಿಕ ಜಾತಿ-ಉಪಜಾತಿಯ ಸಂಘಸಂಸ್ಥೆಗಳನ್ನು ಗೌರವಿಸಲಾಗುತ್ತಿದ್ದು, ಸಮಾಜಕ್ಕೆ ಸೌಹಾರ್ಧತೆಯ ಸಂದೇಶವನ್ನು ಸಾರಲಾಗುತ್ತಿದೆ.
~~~~~
ಭವ್ಯ ಸ್ವಾಗತ:
1081 ಮಾತೆಯರಿಂದ ಪೂರ್ಣಕುಂಭ ಸ್ವಾಗತ
1081 ಮಕ್ಕಳಿಂದ ಪುಷ್ಪವೃಷ್ಟಿ ಸ್ವಾಗತ
1081 ಪುರುಷರಿಂದ ವೇದಘೋಷ ಸ್ವಾಗತ
ದಿವ್ಯ ಸಾನ್ನಿಧ್ಯ:
- ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು
ಶ್ರೀರಾಮಚಂದ್ರಾಪುರ ಮಠ
★ ಪರಮಪೂಜ್ಯ ಶ್ರೀಶ್ರೀ ಸುಬುಧೇಂದ್ರ ತೀರ್ಥ ಮಹಾಸ್ವಾಮಿಗಳು
ಶ್ರೀರಾಘವೇಂದ್ರ ಮಠ, ಮಂತ್ರಾಲಯ
★ ಪರಮಪೂಜ್ಯ ಶ್ರೀಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು ಆದಿಚುಂಚನಗಿರಿ ಮಠ
★ ಪರಮಪೂಜ್ಯ ಶ್ರೀಶ್ರೀ ವಿಶ್ವಪ್ರಸನ್ನ ತೀರ್ಥ ಮಹಾಸ್ವಾಮಿಗಳು
ಪೇಜಾವರ ಮಠ
★ ಪರಮಪೂಜ್ಯ ಶ್ರೀಶ್ರೀ ಯತಿರಾಜ ಜೀಯರ್ ಮಹಾಸ್ವಾಮಿಗಳು
ಯದುಗಿರಿ ಯತಿರಾಜ ಮಠ
★ ಪರಮಪೂಜ್ಯ ಶ್ರೀಶ್ರೀ ವಿದ್ಯಾಪ್ರಸನ್ನ ತೀರ್ಥ ಮಹಾಸ್ವಾಮಿಗಳು
ಸುಬ್ರಹ್ಮಣ್ಯ ಮಠ
ಉದ್ಘಾಟನೆ : ಶ್ರೀ ಪ್ರಹ್ಲಾದ್ ಜೋಷಿ – ಕೇಂದ್ರ ಸಚಿವರು
ಮುಖ್ಯ ಅಭ್ಯಾಗತರು:
◆ ಶ್ರೀ ಸದಾನಂದ ಗೌಡ – ಮಾಜಿ ಮುಖ್ಯಮಂತ್ರಿಗಳು
◆ ಶ್ರೀ ಮಂಕಾಳು ವೈದ್ಯ – ಸಚಿವರು
◆ ಶ್ರೀ ಕೋಟ ಶ್ರೀನಿವಾಸ ಪೂಜಾರಿ – ಮಾಜಿ ಸಚಿವರು, ಸಂಸದರು
◆ ಶ್ರೀ ವಿಜಯೇಂದ್ರ – ಶಾಸಕರು
◆ ಡಾ. ಅಶ್ವತ್ಥನಾರಾಯಣ – ಮಾಜಿ ಉಪ ಮುಖ್ಯಮಂತ್ರಿಗಳು, ಶಾಸಕರು
◆ ಶ್ರೀ ಶಿವರಾಮ ಹೆಬ್ಬಾರ್ – ಮಾಜಿ ಸಚಿವರು, ಶಾಸಕರು
◆ ಶ್ರೀ ಭೀಮಣ್ಣ ನಾಯ್ಕ- ಶಾಸಕರು
◆ ಶ್ರೀ ಅಸಗೋಡು ಜಯಸಿಂಹ – ಅಧ್ಯಕ್ಷರು, ಬ್ರಾಹ್ಮಣ ಅಭಿವೃದ್ಧಿ ನಿಗಮ
◆ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ – ಗೌರವಾಧ್ಯಕ್ಷರು, ತೃತೀಯ ವಿಶ್ವ ಹವ್ಯಕ ಸಮ್ಮೇಳನ
ವಿಶೇಷತೆಗಳು :
- ಹವ್ಯಕ ಪಾಕೋತ್ಸವ : ಮಲೆನಾಡು – ಕರಾವಳಿ ಭಾಗಗಳ ಹವ್ಯಕರ ಪಾರಂಪರಿಕ ತಿನಿಸುಗಳ ಉತ್ಸವ
- ಆಲೆಮನೆ : ರಾಜಧಾನಿಯಲ್ಲಿ ಹಳ್ಳಿ ಸೊಗಡಿನ ಆಲೆಮನೆ.
- ಅಡಿಕೆ ಸಂಸ್ಕೃತಿಯ ಸಮಗ್ರ ದರ್ಶನ
- ಪಾರಂಪರಿಕ ವಸ್ತುಗಳ ಪ್ರದರ್ಶನ
- ನಾಡಿನ ಶ್ರೇಷ್ಠ ವಿದ್ವಾಂಸರುಗಳಿಂದ ಗೋಷ್ಠಿಗಳು
- ೮೧ ಸಾಧಕರಿಗೆ ಹಾಗೂ ಶ್ರೇಷ್ಠ ಕೃಷಿಕರಿಗೆ ಸನ್ಮಾನ
- ಕನ್ನಡದ ಪ್ರಥಮ ನಾಟಕ ‘ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ’ ಪ್ರದರ್ಶನ
- ಖ್ಯಾತ ಕಲಾವಿದರಿಂದ ಸಂಗೀತ ಸಂಗಮ – ಶಾಸ್ತ್ರೀಯ ಸಂಗೀತ
- ವಿವಿಧ ಸಮಾಜದವರಿಗೆ ಸೌಹಾರ್ಧ ಸನ್ಮಾನ.
ಮಾಧ್ಯಮ ಸಂಪರ್ಕ: ಸಂದೇಶ ತಲಕಾಲಕೊಪ್ಪ
8970228945