ಶಿರಸಿ: ತಾಲೂಕಿನ ಕಲಗಾರ ಒಡ್ಡು ಬಳಿ ಬೈಕ್‌ಗಳ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸವಾರರು ಗಾಯಗೊಂಡಿದ್ದಾರೆ. ಕಲಗಾರಿನ ಮಂಜುನಾಥ ಗಣಪತಿ ಭಟ್ಟ ಹಾಗೂ ಇನ್ನೊಂದು ಬೈಕ್ ಸವಾರ ಕಡಬಾಳ ಸಮೀಪದ ಆಲದಮನೆಯ ಮಂಜುನಾಥ ನಾರಾಯಣ ಗೌಡ ಗಾಯಗೊಂಡವರಾಗಿದ್ದಾರೆ. ಹುಲೇಕಲ್ ಕಡೆಯಿಂದ ಶಿರಸಿ ಕಡೆಗೆ ಮಂಜುನಾಥ ಗಣಪತಿ ಭಟ್ ಬೈಕ್‌ನ್ನು ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸುತ್ತಿರುವಾಗ ಅದೇ ವೇಳೆ ಇನ್ನೊಂದು ಬೈಕ್ ಸವಾರ ಮಂಜುನಾಥ ನಾರಾಯಣ ಗೌಡ ಶಿರಸಿ ಕಡೆಯಿಂದ ಹುಲೇಕಲ್ ಕಡೆಗೆ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ, ಶಿರಸಿ-ಹುಲೇಕಲ್ ರಸ್ತೆಯ ಕಲಗಾರ ಒಡ್ಡು ಬಳಿ ಮುಖಾಮುಖಿ ಡಿಕ್ಕಿಪಡಿಸಿಕೊಂಡಿದ್ದಾರೆ. ಅಪಘಾತಕ್ಕೆ ಕಾರಣರಾದ ಇಬ್ಬರೂ ಬೈಕ್ ಸವಾರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ದೀಪಕ ಮಂಜು ಮುಕ್ರಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ