ಭಟ್ಕಳ: ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (AITM) ನ 2022-24ರ ಬ್ಯಾಚ್ MBA ವಿದ್ಯಾರ್ಥಿಗಳ ಪದವಿ ದಿನದ ಸಮಾರಂಭವು ಜ. 21ರಂದು PG ಬ್ಲಾಕ್‌ನಲ್ಲಿ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಂಜುಮನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯೂನಸ್ ಕಾಜಿಯಾ ಮಾತನಾಡಿ, ತಮ್ಮ ಅಧ್ಯಾಪಕರನ್ನು ಸದಾ ಗೌರವಿಸುವಂತೆ ಮತ್ತು ಉನ್ನತ ಗುರಿಗಳನ್ನು ಹೊಂದಲು ಕಠಿಣ ಪರಿಶ್ರಮ ಪಡುವಂತೆ ಕರೆ ನೀಡಿದರು.

RELATED ARTICLES  ಸಾವಿಷ್ಕಾರ್ ಫೆಸ್ಟ್‌ನಲ್ಲಿ ಭಾಗವಹಿಸಿ ಓವರಾಲ್ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಹೆಸರು ಗಳಿಸಿದ ವಿದ್ಯಾರ್ಥಿಗಳು

ಮುಖ್ಯ ಅತಿಥಿ ಸಾದ್ ದಾಮುದಿ ಅವರು ತಮ್ಮ ಉದ್ಯಮಶೀಲತೆಯ ಕುರಿತು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ಬದುಕಿನಲ್ಲಿ ಯಶಸ್ಸನ್ನು ಹೇಗೆ ಪಡೆಯಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಪ್ರಾಂಶುಪಾಲ ಡಾ. ಫಝಲುರ್ ರಹಮಾನ್ ಕೆ ಅವರು ಬಾಹ್ಯ ಜಗತ್ತಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಹಾಗೂ ತಮ್ಮ ವೃತ್ತಿಪರ ಜೀವನವನ್ನು ರೂಪಿಸಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

MBA ವಿಭಾಗದ ಮುಖ್ಯಸ್ಥ ಪ್ರೊ. ಜಾಹಿದ್ ಹಸನ್ ಖರೂರಿ ಅವರ ನೇತೃತ್ವದಲ್ಲಿ ಪ್ರಮಾಣ ವಚನ ಸ್ವೀಕಾರ ನಡೆಯಿತು. ಈ ವೇಳೆ MBA ಪದವೀಧರರು ನೈತಿಕತೆ, ಸಮಗ್ರತೆ ಮತ್ತು ಶ್ರೇಷ್ಠತೆಯ ಮೌಲ್ಯಗಳನ್ನು ಅನುಸರಿಸುವುದಾಗಿ ಪ್ರತಿಜ್ಞೆ ಗೈದರು. ನಿಮ್ರಾ ಮತ್ತು ಸಮನ್ ಕಾರ್ಯಕ್ರಮ ನಿರ್ವಹಿಸಿದರು.

RELATED ARTICLES  ವಿದ್ಯಾರ್ಥಿಗಳ ಪಾಲಿನ ಉದ್ಯೋಗದಾತ ಭಟ್ಕಳದ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಅಂಜುಮನ್ ಹಮಿ-ಎ-ಮುಸ್ಲಿಮೀನ್ ಉಪಾಧ್ಯಕ್ಷ ಡಾ. ಜುಬೈರ್ ಕೋಲಾ, ಪ್ರಧಾನ ಕಾರ್ಯದರ್ಶಿ ಇಸಾಕ್ ಶಾಬಂದ್ರಿ, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಜುಕಾಕು, ಕಾಲೇಜು ಕಾರ್ಯದರ್ಶಿ ಮೊಹಿದ್ದೀನ್ ರುಕ್ನುದ್ದೀನ್ ಉಪಸ್ಥಿತರಿದ್ದರು.