ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಭಟ್ಕಳದ ಸೋಡಿಗದ್ದೆ ಮಹಾಸತಿ ಜಾತ್ರೆಯ ಮೊದಲ ದಿನ ಗುರುವಾರ ರಾತ್ರಿ ಶ್ರೀ ಮಹಾಸತಿ ಅಮ್ಮನವರ ಭಕ್ತಿಗೀತೆ ಅಲ್ಬಮ್ ಬಿಡುಗಡೆಗೊಂಡಿತು.
ಶ್ರೀ ಶರಣು ದುರ್ಗಾ ಕ್ರಿಯೇಷನ್ಸ್ ಭಟ್ಕಳ ಅವರು ಈ ಭಕ್ತಿಗೀತೆ ಅಲ್ಬಮ್ ನಿರ್ಮಾಣ ಮಾಡಿದ್ದು.
ರಾಜ್ಯ ಪ್ರಶಸ್ತಿ ಪುರಸ್ಕೃತ ಜಿಲ್ಲೆಯ ಸುಗಮಸಂಗೀತ ಗಾಯಕ ಭಾವಕವಿ ಉಮೇಶ ಮುಂಡಳ್ಳಿ ಅವರು ಸಾಹಿತ್ಯ ಬರೆದು ಸ್ವರಸಂಯೋಜಿಸಿ ತಾವೇ ಹಾಡಿರುತ್ತಾರೆ.
“ಬೆಳಗಿಹುದು ಬೆಳಗಿಹುದು ಬೆಳಗಿಹುದು ಜ್ಯೋತಿ ,ಸೋಡಿಗದ್ದೆಯ ತಾಯಿ ಮಹಾಸತಿಯ ಖ್ಯಾತಿ ” ಎನ್ನುವ ಈ ಸುಮಧುರ ಗೀತೆಗೆ ಕೀಬೋರ್ಡ್ ನಲ್ಲಿ ವಿಘ್ನೇಶ್ ಗೌಡ ಹಾಗೂ ತಬಲ ದಲ್ಲಿ ಆದಿತ್ಯ ದೇವಾಡಿಗ ಸಹಕರಿಸಿದ್ದಾರೆ.
ತಾಯಿ ಶ್ರೀ ಮಹಾಸತಿ ದೇವಿಯ ಎದುರಿನಲ್ಲಿ ಭಕ್ತಜನರ ಸಮ್ಮುಖದಲ್ಲಿ ಈ ಅಲ್ಬಮ್ ಬಿಡುಗಡೆಗೊಂಡಿದ್ದು. ಈ ಸಂದರ್ಭದಲ್ಲಿ ಯಲ್ವಡಿಕವೂರ ಪಂಚಾಯತ ಸದಸ್ಯರು ಊರಿನ ಪ್ರಮುಖರಾದ ನಾರಾಯಣ ನಾಯ್ಕ, ಗಾಯಕ ಉಮೇಶ ಮುಂಡಳ್ಳಿ, ಕವಯಿತ್ರಿ ರೇಷ್ಮಾ ಉಮೇಶ, ನಿನಾದ ಹಾಗೂ ಉತ್ಥಾನ ಹಾಜರಿದ್ದರು.