ಶಿರಸಿ: ಬನವಾಸಿಯ ಸಾರ್ವಜನಿಕ ಸ್ಥಳವಾದ ಬಸ್ ನಿಲ್ದಾಣ, ಕದಂಬ ಸರ್ಕಲ್ ಮತ್ತು ದಾಸನಕೊಪ್ಪ ಸರ್ಕಲ್ ಬಳಿ ಓಸಿ ಆಟ ನಡೆಸುತ್ತಿದ್ದ ನಾಲ್ವರ ಮೇಲೆ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬನವಾಸಿಯ ಹೊಳೆಮಠದ ಮಾಲತೇಶ ನಾರಾಯಣ ಕನ್ನಿ (60), ಸೊರಬ ರಸ್ತೆಯ ವಿವೇಕಾನಂದ ಆರೇರ (46), ಆದರ್ಶನಗರದ ನಂಜುಂಡ ರಾಜಶೇಖರ (70) ಹಾಗೂ ಹೊಳೆಮಠದ ಪುಟ್ಟಪ್ಪ ಶಿವಪ್ಪ ಕನ್ನಿ (32) ವಿರುದ್ಧ ಕೇಸ್ ದಾಖಲಾಗಿದೆ. ಬನವಾಸಿ ಠಾಣೆ ಪಿಎಸ್‌ಐ ಚಂದ್ರಕಲಾ ಪತ್ತಾರ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿ, 900 ರೂ. ನಗದು, 2 ಬಾಲ್ ಪೆನ್ನು ವಶಪಡಿಸಿಕೊಂಡಿದ್ದಾರೆ.