ಸಿದ್ದಾಪುರ : ಇತ್ತೀಚಿಗೆ ತಾಲೂಕಿನ ಕುಳ್ಳೆ ಗ್ರಾಮದಲ್ಲಿ ಶ್ರೀದೇವಿ ಚೌಡೇಶ್ವರಿ ವಾರ್ಷಿಕ ಸಮಾರಾಧನೆ ಹಾಗೂ ಸನ್ಮಾನ ಸಮಾರಂಭನಡೆಯಿತು. ಕಲಾವಿದ ಮತ್ತು ಸಮಾಜ ಸೇವಕ ಈಶ್ವರ ಗೌಡ, ನಾಟಿ ವೈದ್ಯ ಮಂಜುನಾಥ್ ಗೌಡ ಹಾಗೂ ಇನ್ನುಳಿದವರಿಗೆ ಸನ್ಮಾನಿಸಲಾಯಿತು.
ನಂತರ ವಸುಂಧರಾ ಸಮೂಹ ಸೇವಾ ಸಂಸ್ಥೆ ಶಿರಸಿ ಇವರ ಸಂಯೋಜನೆಯಲ್ಲಿ ಕದಂಬ ಕೌಶಿಕೆ ಯಕ್ಷಗಾನ ತಾಳಮದ್ದಲೆ ನಡೆಯಿತು. ಹಿಮ್ಮೇಳದ ಭಾಗವತರು ಗಜಾನನ ಭಟ್ ತುಳಗೆರೆ ಮದ್ದಲೆವಾದನದಲ್ಲಿ ಗಜಾನನ ಹೆಗಡೆ ಕಂಚಿಕೈ, ಚಂಡೇ ವಾದನ ರಘುಪತಿ ಹೆಗಡೆ ಹುಡೆಹದ್ದ ರಂಜಿಸಿದರೆ, ಮುಮ್ಮೇಳದಲ್ಲಿ ಆರ್ ಟಿ ಭಟ್ಟ ಕಬ್ದಾಲ ಶುಂಭಾಸುರನಾಗಿ, ಎಮ್ ವಿ ಹೆಗಡೆ ಅಮ್ಮಿಮನೆ ರಕ್ತಬೀಜಾಸುರನಾಗಿ, ಮಾಬ್ಲೆಶ್ವರ್ ಭಟ್ ಇಟಗಿ ಶ್ರೀದೇವಿಯಾಗಿ, ಈಶ್ವರ ಗೌಡ ಕುಳ್ಳೆ ಸುಗ್ರೀವನಾಗಿ, ರಘುಪತಿ ನಾಯ್ಕ ಹೆಗ್ಗರಣಿ ಚಂಡಾಸುರನಾಗಿ ಅಭಿನಯಿಸಿ ಜನ ಮೆಚ್ಚುಗೆ ಗಳಿಸಿದರು.
ಈ ಕಾರ್ಯಕ್ರಮಗಳು ಸೀತಾರಾಮ ಗೌಡ ಕುಳ್ಳ ಹುತ್ತಾರ ಹಾಗೂ ಅವರ ಕುಟುಂಬದವರ ಹಿರಿತನ ದಲ್ಲಿ ನೆರವೇರಿತು. ವೇ. ಮೂ. ವಿ ಕೆ ಜೋಶಿ ಶಿವಳಮನೆ, ಉಂಚಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಮ್ ಎಲ್ ಭಟ್, ಎಸ್ ಕೆ ಭಾಗವತ್ ಶಿರಸಿಮಕ್ಕಿ, ಸಿ.ಎಂ. ನಾಯಕ್ ಹೆಗ್ಗರಣಿ, ಪದ್ಮಾವತಿ ಗೌಡ ಉಪಸ್ಥಿತರಿದ್ದರು.