ಉಡುಪಿ ; ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ವಿರೋಧ ವ್ಯಕ್ತಪಡಿಸಿರುವ ಪೇಜಾವರ ಶ್ರೀಗಳು, ಲಿಂಗಾಯತ ವೀರಶೈವರು ಹಿಂದುಗಳು ಒಂದಾಗಿರಬೇಕು. ಹೊರಗಿನವನಾಗಿ ನಾನು ಸಲಹೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಉಡುಪಿಯಲ್ಲಿ ಇಂದು ಪ್ರತ್ಯೇಕ ಲಿಂಗಾಯತ ಧರ್ಮ ಕುರಿತು ಮಾತನಾಡಿದ ಪೇಜಾವರಶ್ರೀಗಳು, ಅವರ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಹೊರಗಿನವನಾಗಿ ಸಲಹೆ ನೀಡುತ್ತಿದ್ದೇನೆ. ನಮ್ಮನ್ನು ಬಿಟ್ಟು ಬೇರೆ ಹೋಗಬೇಡಿ, ಸಹೋದರರಂತೆ ಬಾಳೋಣ. ಲಿಂಗಾಯತರು ಹಿಂದೂಗಳಲ್ಲ ಎಂದರೆ, ಇನ್ಯಾರು ಹಿಂದೂಗಳು…? ಎಂದು ಪ್ರಶ್ನಿಸಿದರು.

RELATED ARTICLES  ನಾಡಹಬ್ಬ 407ನೇ ದಸರಾ ಮಹೋತ್ಸವಕ್ಕೆ ಅರಮನೆ ನಗರಿ ಮೈಸೂರು ಸಜ್ಜು

ಒಂದಾಗಿದ್ದರೆ ಲಿಂಗಾಯತ ಸಮಾಜಕ್ಕೆ ಬಲ. ಬ್ರಾಹ್ಮಣರಿಂದ, ಮಾಧ್ವರಿಂದ ಬಸವಣ್ಣಗೆ ಅನ್ಯಾಯ ಆಗಿಲ್ಲ. ಪ್ರೇಮದ ಸಲಹೆ, ನಮ್ಮನ್ನು ಬಿಟ್ಟು ಹೋಗಬೇಡಿ.ಎಲ್ಲರೂ ಸಹೋದರರಂತೆ ಬಾಳೋಣ ಎಂದು ಪೇಜಾವರ ಶ್ರೀ ಮನವಿ ಮಾಡಿದರು.

RELATED ARTICLES  ಪೂರ್ಣ ಬಜೆಟ್ ಮಂಡನೆಗೆ ತಗಾದೆ ತೆಗೆದಿರುವ ಸಿದ್ದರಾಮಯ್ಯ.!