ಗೋಕರ್ಣ : ಕಡಲ ತೀರದಲ್ಲಿ ಈಜುವ ವೇಳೆ ಓರ್ವ ಪ್ರವಾಸಿಗ ಸಮುದ್ರ ಸುಳಿಗೆ ಸಿಲುಕಿ ಅಸ್ವಸ್ಥನಾದ ವೇಳೆ ಕರ್ತವ್ಯದಲ್ಲಿದ ಲೈಫ್ ಸೇಫ್‌ಗಾರ್ಡ್ ಗಳು ರಕ್ಷಸಿದ್ದಾರೆ.
ಪಂಜಾಬ ಮೂಲದ ದೌಲತ್ ಎನ್ನುವ ಪ್ರವಾಸಿಗ ತನ್ನ ಮೂರುಜನ ಗೆಳೆಯರೊಂದಿಗೆ ಗೋಕರ್ಣ ಪ್ರವಾಸಕ್ಕೆಂದು ಬಂದಿದ್ದ ಸಮಯದಲ್ಲಿ ಶನಿವಾರ ಸಮುದ್ರದಲ್ಲಿ ಈಜುವಾಗ ಸುಳಿಗೆ ಸಿಕ್ಕಿ ಸಹಾಯಕ್ಕಾಗಿ ಅಂಗಲಾಚುತಿದ್ದಾಗ ಗಮನಿಸಿದ ಜೀವ ರಕ್ಷಕ ಸಿಬ್ಬಂದಿಗಳಾದ ಮಂಜುನಾಥ್ ಹರಿಕಂತ್ರ, ನಾಗೇಂದ್ರ ಕುರ್ಲೆ ಮತ್ತು ಪ್ರದೀಪ ಅಂಬಿಗ ಹಾಗೂ ಮೈ ಸ್ಟಿಕ್ ಗೋಕರ್ಣ ಅಡ್ಡೆಂಚರ್ಸ್ ನ ಸಿಬ್ಬಂದಿ ತಕ್ಷಣ ರಕ್ಷಣೆಗೆ ಧಾವಿಸಿ ಪ್ರವಾಸಿಗನನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.