Satwadhara News

ನಿಲ್ಲಿಸಿಟ್ಟ ಸ್ಕೂಟರ್ ತೆಗೆಯುವ ವೇಳೆಗೆ ಬಂದು ನಿಂತ ಜವರಾಯ

ಭಟ್ಕಳ : ವ್ಯಕ್ತಿಯೊಬ್ಬರು ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ತಮ್ಮ ಸ್ಕೂಟರನ್ನು ತೆಗೆಯುತ್ತಿದ್ದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಭಟ್ಕಳದಲ್ಲಿ ನಡೆದಿದೆ.

ನಗರದ ಹಾಶಿಮ್ ಬೇಕರಿ ಸಮೀಪ ಈ ಘಟನೆ ನಡೆದಿದ್ದು ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಮೃತ ವ್ಯಕ್ತಿಯನ್ನು ಫಜ್ಯೂ‌ರ್ ರೆಹಮಾನ್ ಶೇಕ್ (54) ಎಂದು ಗುರುತಿಸಲಾಗಿದೆ.

ಹೋಟಲ್ ನಿಂದ ಹೊರ ಬಂದು ತಾನು ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಸ್ಕೂಟರನ್ನು ತೆಗೆಯುತ್ತಿದ್ದ ವೇಳೆ ಹಠಾತ್ ಸ್ಕೂಟರ್ ಸಮೇತ ಅಲ್ಲೇ ಕುಸಿದು ಬಿದ್ದಿದ್ದಾರೆ. ಬಳಿಕ ಅಲ್ಲಿದ್ದ ಸಾರ್ವಜನಿಕರು ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದರಾದರೂ, ಆಸ್ಪತ್ರೆಗೆ ಬರುವ ಮುನ್ನವೆ ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.