ಶ್ರೀ ಭಾರತಿ ಸ್ವಾಸ್ಥ್ಯ ಮಂದಿರ ಮುಜುಂಗಾವು
ಉಚಿತ ಆಯುರ್ವೇದ ಚಿಕಿತ್ಸೆ ಹಾಗೂ ಗವ್ಯ ಚಿಕಿತ್ಸಾ ಶಿಬಿರ ನಡೆಯಿತು.

* ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿಗ್ದರ್ಶನದಲ್ಲಿರುವ ಮುಜುಂಗಾವು ಶ್ರೀ ಭಾರತೀ ಸ್ವಾಸ್ಥ್ಯ ಮಂದಿರದಲ್ಲಿ ಉಚಿತ ಆಯುರ್ವೇದ ಚಿಕಿತ್ಸೆ ಹಾಗೂ ಗವ್ಯ ಚಿಕಿತ್ಸಾ ಶಿಬಿರವು ಯಶಸ್ವಿಯಾಗಿ ಜರಗಿತು. ಸಮಿತಿಯ ಕಾರ್ಯದರ್ಶಿ ಇ.ಕೃಷ್ಣ ಮೋಹನ ಭಟ್ಟರು ಪ್ರಾಸ್ತಾವಿಕ ಮಾತುಗಳನ್ನಾಡಿ ಡಾಕ್ಟರ್ ಗಳ ಪರಿಚಯ ಹಾಗೂ ಚಿಕಿತ್ಸೆಯ ಮಾಹಿತಿಗಳನ್ನು ವಿವರಿಸಿದರು.

RELATED ARTICLES  ದಕ್ಷಿಣ ಕಾಶ್ಮೀರದ ಪುಲ್ವಾಮಾನಲ್ಲಿ ಗುಂಡಿನ ದಾಳಿ : ಸೇನೆಯಿಂದ ಮೂವರು ಉಗ್ರರ ಹತ್ಯೆ.

* ಬೆಂಗಳೂರಿನ ಡಾ // ಡಿ.ಪಿ.ರಮೇಶ್ ಅವರು ದೀಪ ಪ್ರಜ್ವಲನಗೊಳಿಸಿ ಶಿಬಿರವನ್ನು ಉದ್ಘಾಟಿಸಿದರು. ಡಾ // ರಾಜೇಶ್ ಪಾದೆಕ್ಕಲ್ಲು ಹಾಗೂ ಡಾ// ಕಾರ್ತಿಕ್ ಅವರು ಸಮನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು.

* ಶ್ರೀ ಭಾರತೀ ವಿದ್ಯಾಪೀಠದ ಆಡಳಿತಾ ಸಮಿತಿ ಹಾಗೂ ಮುಖ್ಯ ನಿರ್ವಹಣಾಧಿಕಾರಿ ಶ್ಯಾಮ್ ಭಟ್ ದರ್ಭೆ ಮಾರ್ಗ, ಕುಂಬಳೆ ವಲಯಾಧ್ಯಕ್ಷ ಬಾಲಕೃಷ್ಣ ಶರ್ಮ, ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಸೇಡಿಗುಮ್ಮೆ, ಸೇವಾ ಪ್ರಧಾನ ಸೂರ್ಯನಾರಾಯಣ ಬೊಳುಂಬು, ಮಾತೃ ಪ್ರಧಾನೆ ಶಿವಕುಮಾರಿ ಕುಂಚಿನಡ್ಕ, ಶಾಮ ಭಟ್ ದರ್ಭೆ ಮಾರ್ಗ, ಶಿವನಾರಾಯಣ ಶರ್ಮ ಸೇಡಿಗುಮ್ಮೆ, ಯಸ್ ಯನ್ ಭಟ್ ಅರ್ಜುನಗುಳಿ ಮತ್ತು ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ತಿತರಿದ್ದರು.

RELATED ARTICLES  ಶ್ರೀರಾಮಚಂದ್ರಾಪುರಮಠಕ್ಕೆ ಮತ್ತೊಂದು ಜಯ… ಬಿಬಿಎಂಪಿಗೆ ಮತ್ತೊಮ್ಮೆ ಮುಖಭಂಗ!

* ಈ ಸಂದರ್ಭದಲ್ಲಿ ಮಾಗೋ ಪ್ರಾಡಕ್ಟ್ ನ ಗವ್ಯೋತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ವ್ಯವಸ್ಥೆ ಏರ್ಪಡಿಸಲಾಗಿತ್ತು.