ದೆಹಲಿ : ಸಾಮಾಜಿಕ ಜಾಲತಾಣದಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿಯನ್ನು ಹಿಂದಿಕ್ಕಿದ್ದಾರೆ. ದಿನೇ ದಿನೇ ರಾಹುಲ್ ಗಾಂಧಿ ಫಾಲೋಯರ್ಸ್’ಗಳ ಸಂಖ್ಯೆ ಹೆಚ್ಚುತ್ತಿರುವುದು ಬಿಜೆಪಿಗೆ ಸಾವಾಲಾಗಿದೆ.

ರಮ್ಯಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಉಸ್ತುವಾರಿ ವಹಿಸಿಕೊಂಡ ನಂತರ ಪಕ್ಷ ಹಾಗೂ ರಾಹುಲ್ ಗಾಂಧಿ ಬಗ್ಗೆಗಿನ ಟ್ವೀಟ್’ಗಳ ಬಗ್ಗೆ ಹೆಚ್ಚು ಸಕ್ರಿಯಗೊಂಡಿದ್ದಾರೆ. ಅಲ್ಲದೇ ರಾಹುಲ್ ಗಾಂಧಿ ಕೂಡ ಹೆಚ್ಚು ಸಕ್ರಿಯರಾಗಿದ್ದು ಅವರ ಟ್ವೀಟ್’ಗಳು ಹೆಚ್ಚು ರೀ ಟ್ವೀಟ್’ಗೊಳ್ಳುತ್ತಿದೆ. ಈ ರೀತಿ ರೀ ಟ್ವೀಟ್ ಪಡೆಯುತ್ತಿರುವ ಸ್ಥಾನದಲ್ಲಿ ರಾಹುಲ್ ಪ್ರಧಾನಿ ಮೋದಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಹಿಂದಿಕ್ಕಿದ್ದಾರೆ. ಹಿಂದೂಸ್ತಾನ್ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು ಈ ವಿಷಯವನ್ನು ರಮ್ಯ ಕೂಡ ತಮ್ಮ ಟ್ವೀಟರ್ ಖಾತೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಸಿ.ಇ.ಟಿ ಫಲಿತಾಂಶ : ಕೊಂಕಣ ವಿದ್ಯಾರ್ಥಿಗಳ ಅಮೋಘ ಸಾಧನೆ - ವಿಧಾತ್ರಿಯ ಅಕಾಡಮಿಯ ಕಾರ್ಯಕ್ಕೆ ಪಾಲಕರಿಂದ ಮೆಚ್ಚುಗೆ.