ಅಂಕೋಲಾ : ತಾಲೂಕಿನ ಹಾಲಕ್ಕಿ ಸಭಾಭವನ ದಲ್ಲಿ ಹಾಲಕ್ಕಿ ನೌಕರರ ಸಂಘದಿಂದ ಏರ್ಪಡಿಸದ Learn to Learn ಕಾರ್ಯಕ್ರಮ ನಡೆಯಿತು. ಉದ್ಘಾಟಕರಾಗಿ ಜಿಲ್ಲಾ ಹಾಲಕ್ಕಿ ಸಂಘದ ಅಧ್ಯಕ್ಷರಾದ ಶ್ರೀ ಹನುಮಂತ ಗೌಡ ಆಗಮಿಸಿದ್ದರು. ನಮ್ಮ ಸಮಾಜದ SSLC/PUC/Degree ವಿದ್ಯಾರ್ಥಿಗಳಿಗೆ ಹಾಲಕ್ಕಿ ನೌಕರರ ಸಂಘ ಸಂಘಟಿಸಿದ ಈ ಮಾರ್ಗದರ್ಶಿ ಕಾರ್ಯಗಾರ ಅತೀ ಉಪಯುಕ್ತವಾದುದು. ಇದರ ಪ್ರಯೋಜನ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಹೇಳಿದರು.
ಮುಖ್ಯಅತಿಥಿಯಾಗಿ ಆಗಮಿಸಿದ ನಾಡೋಜ, ಪದ್ಮಶ್ರೀ ಸುಕ್ರಿ ಬೊಮ್ಮ ಗೌಡರವರು ಸಮಾಜದ ಶಾಲಿ ಮಕ್ಳು ಶಾಲಿಗೆ ಹೋಗುವಾಗ ಮೊಬೈಲ್ ಬಿಡಿ. ಚೋಲೋ ಮಾಡಿ ಓದಿ. ಆಗ ನೌಕರಿನೂ ಸಿಗ್ತದೆ ಎಂದು ಹೇಳಿದರು.
ಉದ್ಯಮಿ ಗೋವಿಂದ ಗೌಡ. ಓಂ ಬೀಚ್ ಗೋಕರ್ಣ ವಿದ್ಯಾರ್ಥಿಗಳು ನೌಕರಿಗಾಗಿ ಓದದೇ ಜ್ಣಾನಕ್ಕಾಗಿ ಓದಬೇಕೆಂದರು. ಅಂಕೋಲಾ ತಾಲೂಕು ಹಾಲಕ್ಕಿ ಸಂಘದ ಗೌರವ ಅಧ್ಯಕ್ಷ ಪ್ರಕಾಶ ಗೌಡ ಮಾತನಾಡಿ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಶಿಬಿರದ ಪ್ರಯೋಜನ ಪಡೆದು ಭವಿಷ್ಯವನ್ನು ಉಜ್ವಗೋಳಿಸಿಕೋಳ್ಳಲು ತಿಳಿಸಿದರು.
ಅಧ್ಯಕ್ಷ ತೆ ವಹಿಸಿದ ನೌಕರರ ಸಂಘದ ಅಧ್ಯಕ್ಷ ಡೌ. ಶ್ರೀಧರ ಗೌಡ ನಮ್ಮ ವಿದ್ಯಾರ್ಥಿ ಜೀವನದಲ್ಲಿ education career and job opportunites ಬಗ್ಗೆ ಸರಿಯಾದ ತಿಳುವಳಿಕೆ ಮುಖ್ಯವಾಗಿರುತ್ತದೆ. ಇಲ್ಲದೇ ಹೋದಲ್ಲಿ ಯಾವುಯಾವುದು ಕೋರ್ಸ ಆಯ್ದು ನಂತರ ಗೊಂದಲದಲ್ಲಿ ಸಿಲುಕಬೇಕಾಗುತ್ತದೆ . ಈ ಉದ್ದೇಶದಿಂದ ನಮ್ಮ ಸಂಘ ಈ ಕಾರ್ಯಾಗಾರ ಹಮ್ಮಿಕೊಂಡಿದೆ ಎಂದರು.
ಸಂಘದ ಕಾರ್ಯದರ್ಶಿ ಜಂಗಾ ಗೌಡ, ಸಂಪನ್ಮೂಲ ವ್ಯಕ್ತಿಗಳಾದ ಉಡುಪಿಯ ಸುಧಾಕರ ಕಾರ್ಕಳ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಆರ್.ಪಿ.ಗೌಡ ಪ್ರಾಸ್ತಾವಿಕ ಮಾತನ್ನಾಡಿದರು. ಖಜಾಂಚಿ ಲೋಕು ಗೌಡ ಸ್ವಾಗತಿಸಿದರು. B.S.ಗೌಡ ಕಾರ್ಯಕ್ರಮ ನಿರೂಪಿಸಿದರು.K.M.ಗೌಡ ಸಹಕರಿಸಿದರು.ಸಂಘದ ಪದಾಧಿಕಾರಿಗಳು , ಸದಸ್ಯರುಗಳು, ಹಾಲಕ್ಕಿ ಸಮಾಜದ ಹಲವು ಮುಖಂಡರುಗಳು ಹಾಜರಿದ್ದರು.