ಕಾರವಾರ: ಭಾರತ ಸರ್ಕಾರದ ಸಂಗೀತ ಮತ್ತು ನಾಟಕ ವಿಭಾಗ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಆಭಿವೃದ್ದಿ ಸಚೀವಾಲಯ ನವದೆಹಲಿ, ಮಹಿಳಾ ಮತ್ತು ಮಕ್ಕಳ ಆಭಿವೃದ್ದಿ ಇಲಾಖೆ ವಿಜಯಪುರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾರವಾರದ ಶ್ರೀ ಬಂಟದೇವ ಯುವಕ ಸಂಘ (ರಿ) ಅಮದಳ್ಳಿ ಇವರಿಂದ ದಿನಾಂಕ: 13-16 ಅಕ್ಟೋಬರ್ 2017 ತನಕ ” ಬೇಟಿ ಬಚಾವೂ-ಬೇಟಿ ಪಡಾವೋ” ಜನಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಲಾಗಿತ್ತು.

RELATED ARTICLES  Btc Price Flat After Taproot, Lightning Network Continues To Grow

ವಿಜಯಪುರ ಜಿಲ್ಲೆಯ ವಿಯಪುರ ನಗರದ ಅಸಗರಗಲ್ಲಿ, ಹಿಟ್ಟಿನಹಳ್ಳಿ, ಮಹಾಲ ಬಾಗಾಯತ ದರ್ಗಾ, ಭೂತನಾಳ, ಕಂಜರ ಭಾಟ್, ಜಲನಗರ ಮತ್ತು ಬೆಂಡಿಗೇರಿ ಗಲ್ಲಿ ಪೇಠ ಗ್ರಾಮಗಳಲ್ಲಿ ಸ್ತ್ರೀ ಭ್ರೂಣ ಹತ್ಯ, ಲಿಂಗ ತಾರತಮ್ಯ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ದತಿ, ಮಹೀಳಾ ಶಿಕ್ಷಣ, ಮಹಿಳಾ ಶಶಕ್ತೀಕರಣ ಕುರಿತು ಜಾಗೃತಿ ಮೂಡಿಸುವ ” ಬೇಟಿ ಬಚಾವೂ-ಬೇಟಿ ಪಡಾವೋ” ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶ್ರೀ ಬಂಟದೇವ ಯುವಕ ಸಂಘ (ರಿ) ದವರು ಮಂಜುನಾಥ ಮುದ್ಘೇಕರ್ ನಾಯಕತ್ವದಲ್ಲಿ, ಕಲಾವಿದರಾದ ಪುರುಷೋತ್ತಮ ಗೌಡ, ನಾಗರಾಜ ಗೌಡ, ಉಮಾಕಾಂತ ಗೌಡ, ಶ್ರೀನಿವಾಸ ಅಂಬಿಗ, ಉಲ್ಲಾಸ ಗೌಡ, ರಾಜೇಶ ಮಡಿವಾಳ, ಗಜಾನನ ಅಂಬಿಗ, ಮುರಳಿ ಗೌಡ, ಅಜಯ ಮಡಿವಾಳ , ವಿನೋದ ಗೌಡ ಕಲಾ ತಂಡದಲ್ಲಿದ್ದರು, ಜಡೆ ಕೋಲಾಟ, ಜಾಗೃತಿ ಗೀತೆ ಮತ್ತು ಬೀದಿನಾಟಕದ ಮೂಲಕ ನೀಡಿದ ಜನಜಾಗೃತಿ ಕಾರ್ಯಕ್ರಮ ಜನ ಮೆಚ್ಚುಗೆಗೆ ಪಾತ್ರವಾಯಿತು.

RELATED ARTICLES  "ಗೋಕರ್ಣ ಗೌರವ"ಪಡೆದ ಪೂ ಶ್ರೀ ಶ್ರೀ ಮಹಾದೇವ ದೇವರು