ಅಮೃತಧಾರಾ ಗೋಶಾಲೆ, ಬಜಕೂಡ್ಲುವಿನಲ್ಲಿ ಶ್ರೀ ಮದ್ವಾಲ್ಮೀಕಿ ರಾಮಾಯಣ ಪಾರಾಯಣ ನವಾಹ ಕಾರ್ಯಕ್ರಮ ಪ್ರಾರಂಭಗೊಂಡಿತು.

* ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಶ್ರೀ ರಾಮಚಂದ್ರಾಪುರ ಮಠ ಹೊಸನಗರದ ಅಂಗಸಂಸ್ಥೆಯಾದ ಅಮೃತಧಾರಾ ಗೋಶಾಲೆ, ಗೋಲೋಕ ಬಜಕೂಡ್ಲುವಿನಲ್ಲಿ ಗೋಕರ್ಣ ಮಾಹಾಮಂಡಲದ ಮುಳ್ಳೇರಿಯಾ ಹವ್ಯಕ ಮಂಡಲದ ವತಿಯಿಂದ
” ಶ್ರೀ ಮದ್ವಾಲ್ಮೀಕಿ ರಾಮಾಯಣ ಪಾರಾಯಣ ನವಾಹ ” ಕಾರ್ಯಕ್ರಮವು ಇಂದು ಶುಭಾರಂಭಗೊಂಡಿತು.

* ಧಾರ್ಮಿಕ ವಿಧಿ ವಿಧಾನಗಳ ಅಂಗವಾಗಿ ದೀಪ ಜ್ವಲನ, ಸಾಮೂಹಿಕ ಪ್ರಾರ್ಥನೆ, ಧ್ವಜಾರೋಹಣ, ಶಂಖನಾದ , ಗುರುವಂದನೆ, ಗೋವಂದನೆ, ನಾಂದೀ-ಪುಣ್ಯಾಹ, ಪ್ರಧಾನ ಸಂಕಲ್ಪ, ಋತ್ವಿಗ್ವರಣ, ಕಲಶ ಪೂಜೆ, ಗಣಪತಿ ಹವನಗಳೊಂದಿಗೆ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಸಂಕಲ್ಪಿತ ಶ್ರೀ ಮದ್ವಾಲ್ಮೀಕಿ ರಾಮಾಯಣ ಪಾರಾಯಣ ನವಾಹ ಕಾರ್ಯಕ್ರಮವು ಮಹಾ ಮಂಡಲ ಧರ್ಮಕರ್ಮ ವಿಭಾಗ ಪ್ರಧಾನ ವೇ ಮೂ ಕೇಶವಪ್ರಸಾದ ಕೂಟೇಲು ಅವರ ನೇತೃತ್ವದಲ್ಲಿ ಹನ್ನೆರಡು ಮಂದಿ ವೈದಿಕ ವಿಧ್ವಾಂಸರಿಂದ ಆರಂಭವಾಯಿತು.

RELATED ARTICLES  ನಿಮ್ಮ ರಾಶಿಯ ಪ್ರಕಾರ ನಿಮ್ಮ ಇಂದಿನ ದಿನ ಹೇಗಿರಲಿದೆ ಗೊತ್ತಾ? ದಿನಾಂಕ 11-11-2018 ರ ರಾಶಿ ಭವಿಷ್ಯ ಇಲ್ಲಿದೆ

* ಮುಳ್ಳೇರಿಯಾ ಮಂಡಲ ದಿಗ್ದರ್ಶಕರಾದ ಬಿ.ಜಿ ರಾಮ ಭಟ್ ಧ್ವಜಾರೋಹಣ ಮಾಡುವ ಮೂಲಕ ರಾಮಾಯಣ ಪಾರಾಯಣ ನವಾಹಕ್ಕೆ ಚಾಲನೆ ನೀಡಿದರು. ಮಹಾಮಂಡಲ ಅಧ್ಯಕ್ಷ ಈಶ್ವರಿ ಶ್ಯಾಮ ಭಟ್ ಬೇರ್ಕಡವು ದಂಪತಿ ಸಮೇತ ರಾಮಾಯಣ ಪಾರಾಯಣ ಸಂಕಲ್ಪ ಪೂಜೆ ನೆರವೇರಿಸಿದರು.

* ಮೊದಲನೆಯ ದಿವಸ ಪೂರ್ಣ ಬಾಲಕಾಂಡವನ್ನು – ಒಟ್ಟು 77 ಸರ್ಗ = ಅಧ್ಯಾಯ ಪಾರಾಯಣ ನಡೆಸಲಿದ್ದು, ಪಾರಾಯಣದ 73 ನೇ ಸರ್ಗ – ಅಧ್ಯಾಯ – ದಲ್ಲಿ ಸೀತಾಸ್ವಯಂವರದ ಪ್ರಸಂಗದ ಸಂದರ್ಭದಲ್ಲಿ ಸೀತಾರಾಮಚಂದ್ರರಿಗೆ ಷೋಡಶೋಪಚಾರ ಪೂಜೆ ಮಾಡಿ ಮಂಗಲಘೋಷದೊಂದಿಗೆ ಸೀತಾಕಲ್ಯಾಣೋತ್ಸವ ಸಂದರ್ಭದಲ್ಲಿ ಭಕ್ತಜನರಿಂದ ಸೀತಾರಾಮಚಂದ್ರರಿಗೆ ಉಡುಗೊರೆಯ ರೂಪದಲ್ಲಿ ಧನ-ಕನಕ-ವಸ್ತ್ರಾದಿಗಳನ್ನು ಸಮರ್ಪಿಸಲಾಯಿತು.

RELATED ARTICLES  ಉಡುಪಿ: ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣ – ವಿದ್ಯಾರ್ಥಿನಿ ಆತ್ಮಹತ್ಯೆ

* ಮುಂದಿನ ಸತತ ಒಂಬತ್ತು ದಿವಸಗಳ ಕಾಲ ಹನ್ನೆರಡು ಮಂದಿ ವಿದ್ವಾಂಸರಿಂದ ನವಾಹ ವಿಧಿಯಲ್ಲಿ ಪಾರಾಯಣ ಜರಗಿ ತಾ 29/10/2017 ರಂದು ಶ್ರೀ ರಾಮ ಪಟ್ಟಾಭಿಷೇಕ, ಗೋಮಾತಾ ಸಪರ್ಯಾ- ಗೋಪಾಷ್ಟಮಿ ಮಹೋತ್ಸವದೊಂದಿಗೆ ವೈಭವದಿಂದ ಸಂಪೂರ್ಣಗೊಳ್ಳಲಿದೆ.

* ಎಲ್ಲಾ ಹೋಮ ಹವನಗಳನ್ನು ದೇಶೀ ಗೋವಿನ ತುಪ್ಪ, ಸಗಣಿಯಿಂದ ತಯಾರಿಸಿದ ಬೆರಣಿಯಂದ ನಡೆಸುತ್ತಿರುವುದು ಕಾರ್ಯಕ್ರಮದ ವೈಶಿಷ್ಟ್ಯವಾಗಿದೆ.