ಯಲ್ಲಾಪುರ : ಕುಂದರಗಿ ಉಮಾಮಹೇಶ್ವರ ದೇವಸ್ಥಾನದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸ್ಥಳೀಯ ಕಲಾವಿದರಾದಂತಹ ಶ್ರೀ ಶ್ರೀ ರಾಜರಾಜೇಶ್ವರಿ ಯಕ್ಷ ಕೂಟ ಉಮ್ಮಚಗಿ ಇವರಿಂದ ನಡೆದ “ಸುಭದ್ರ ರಾಯಭಾರ” ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ಯಶಸ್ವಿಯಾಯಿತು. ಕುಂದರಗಿ ಉಮಾಮಹೇಶ್ವರ ಟ್ರಸ್ಟನ ಗೌರವಾಧ್ಯಕ್ಷರಾದ ಎನ್.ಎಸ್.ಹೆಗಡೆ ಕುಂದರಗಿ ಉದ್ಘಾಟಿಸಿದರು.ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ನಾರಾಯಣ ಭಾಗ್ವತ ಉಮ್ಮಚಗಿ,ಅರ್ಥದಾರಿಗಳಾಗಿ
ಶ್ರೀ ಕೃಷ್ಣನಾಗಿ ಮಂಜುನಾಥ ಹೆಗಡೆ ಉಮ್ಮಚಗಿ ,ನಾರದನಾಗಿ ವೇ.ಮೂ ಪದ್ಮನಾಭ ಲ ಭಟ್ ಕುಂದರಗಿ,ಅರ್ಜನನಾಗಿ ಸುಭ್ರಾಯ ಹೆಗಡೆ ಕೆರೆಕೊಪ್ಪ,ಸುಭದ್ರೆಯಾಗಿ ಶ್ರೀಪಾದ ಹೆಗಡೆ ಭಟ್ರಕೇರಿ, ರುಕ್ಮಿಣಿಯಾಗಿ ಶ್ರಿ ನಾಗರಾಜ ಹೆಗಡೆ ಉಮ್ಮಚಗಿ,ಯುವ ಕಲಾವಿದರಾದ ಕುಮಾರ ವಿವೇಕ ಹೆಗಡೆ ಭಟ್ರಕೇರಿ ಭೀಮನಾಗಿ ,ವಿಕ್ರಮ ಹೆಗಡೆ ಭಟ್ರಕೇರಿ ಅಭಿಮನ್ಯುವಾಗಿ ನೆರೆದಿದ್ದ ಜನರಿಗೆ ಮುದನೀಡಿದರು.

RELATED ARTICLES  ಕ್ರಿಮ್ಸ್ ಆಸ್ಪತ್ರೆಯಿಂದ 6 ಕೊರೊನಾ ಸೋಂಕಿತರು ಡಿಶ್ಚಾರ್ಜ

ಗೌರವಾಧ್ಯಕ್ಷರಾದ ಎನ್ ಎಸ್ ಹೆಗಡೆಯವರು ಮಾತನಾಡಿ ಸುಂಸ್ಕ್ರತನನ್ನಾಗಿ ಸಮಾಜವನ್ನು ಮಾಡಬೇಕು.ಯಕ್ಷಗಾನ ಹಾಗೂ ತಾಳಮದ್ದಲೆ ಜನರಿಗೆ ಒಂದು ಲೋಕಕ್ಕೆ ಕೊಂಡುಯುತ್ತದೆ.ಇಂದಿನ ಯುವಕರು ಮೊಬೈಲ್ ಇನ್ನಿತರ ದಾಸಿಗಳಾಗುತ್ತಿದ್ದಾರೆ.ಇಂಥಹ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ತೊಡಗಬೇಕೆಂದು ಹೇಳಿದರು.ರಾಮಕೃಷ್ಣ ಹೆಗಡೆ ನಿರ್ವಹಿಸಿದರು.ಶ್ರೀ ವೇ .ಮೂ ಪದ್ಮನಾಭ ಭಟ್ ಸಂಯೋಜಿಸಿದರು.

RELATED ARTICLES  ಕಂಗೊಳಿಸುತ್ತಿದೆ ಮಿರ್ಜಾನ್ ಕೋಟೆ: ಸೂಕ್ತ ರಸ್ತೆ ನಿರ್ಮಾಣವಾಗಲೆಂದು ಆಶಿಸುತ್ತಿದೆ ಜನತೆ.