ಕಾರವಾರ: ನವೆಂಬರ್ 10 ರಂದು ರಾಜ್ಯಾದ್ಯಂತ ನಡೆಯಲಿರುವ ಟಿಪ್ಪು ಜಯಂತಿಯ ಕಾರ್ಯಕ್ರಮದ ಯಾವುದೇ ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರಕ್ಕಾಗಿ ತಮ್ಮ ಹೆಸರನ್ನು ನಮೂದಿಸಬಾರದು ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವ ಹಾಗು ರಾಜ್ಯ ಬಿಜೆಪಿ ಉಪಾಧ್ಯಕ್ಷ ಅನಂತಕುಮಾರ ಹೆಗಡೆ ಪತ್ರಮುಖೇನ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಹಾಗು ರಾಜ್ಯ ಸರ್ಕಾರಕ್ಕೆ ತಿಳಿಸಿದ್ದಾರೆ.

RELATED ARTICLES  ಅಮಿತ ಆನಂದದಿಂದ ವಂಚಿತರಾದ ಕಾರ್ಯಕರ್ತರು: ಉತ್ತರ ಕನ್ನಡದ ೬ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ಭರವಸೆ ನೀಡಿದ ಅನಂತ್ ಕುಮಾರ್ ಹೆಗಡೆ.

ಕಳೆದ ವರ್ಷವೂ ಟಿಪ್ಪು ಜಯಂತಿಯ ಯಾವುದೇ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸದಂತೆ ಹಾಗು ಯಾವುದೇ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಹಾಕದಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು. ಮತ್ತು ಕಳೆದ ವರ್ಷದ ಟಿಪ್ಪು ಜಯಂತಿಯನ್ನು ಸಂಸದ ಹೆಗಡೆ ಪ್ರಬಲವಾಗಿ ವಿರೋಧಿಸಿದ್ದರು.

RELATED ARTICLES  ಹಿರೇಗುತ್ತಿ ಸೊಸೈಟಿಯಲ್ಲಿ ಆಶಾಕಾರ್ಯಕರ್ತೆಯರಿಗೆ ಸನ್ಮಾನ.