ಸಿದ್ದಾಪುರ: ಪಟ್ಟಣದ ಬಸ್ ನಿಲ್ದಾಣದ ಹತ್ತಿರವಿರುವ ಅಂಗಡಿಯೊಂದಕ್ಕೆ ಬೆಂಕಿ ತಗುಲಿದ್ದರ ಪರಿಣಾಮವಾಗಿ ಅಂಗಡಿಯಲ್ಲಿರುವ ಎಲ್ಲಾ ವಸ್ತುಗಳು ಸುಟ್ಟುಹೋಗಿರುವ ದುರ್ಘಟನೆ ಗುರುವಾರ ತಡರಾತ್ರಿ ಸಂಭವಿಸಿದೆ.

   ಅಂಗಡಿಯ ಮಾಲೀಕರಾದ ತೋಟಪ್ಪ ನ್ಯಾಸಣಗಿ ಗುರುವಾರ ರಾತ್ರಿ ಮಹಾಲಕ್ಷ್ಮೀ ಪೂಜೆ ನೆರವೇರಿಸಿ ಹೋಗಿದ್ದರು. ರಾತ್ರಿ ಮೂರು ಗಂಟೆಯ ಸುಮಾರಿಗೆ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್‍ರಿಗೆ ಅಂಗಡಿಯ ಮೇಲ್ಮಹಡಿಯಿಂದ ಹೊಗೆ ಬರುತ್ತಿರುವುದು ಕಂಡುಬಂದಿದ್ದು, ತಕ್ಷಣ ಅಗ್ನಿಶಾಮಕದವರಿಗೆ ತಿಳಿಸಿದ ಪೊಲೀಸ್‍ರು ಅಂಗಡಿಯ ಮಾಲಿಕರಿಗೆ ತಿಳಿಸಿ ಮೇಲ್ಮಹಡಿಯ ಮೂಲಕ ನೀರು ಹಾರಿಸಿ ಬೆಂಕಿ ನಂದಿಸಲಾಗಿದೆ. ಜರಾಕ್ಸ್ ಮಷಿನ್ ಸೇರಿದಂತೆ ಸುಮಾರು ಎರಡು ಲಕ್ಷರೂ. ನಷ್ಟವಾಗಿರಬಹುದು ಎಂದು ಪೊಲೀಸ್‍ರು ಅಂದಾಜಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
RELATED ARTICLES  ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದವರ ಮೇಲೆ  ಮೊಟ್ಟೆಯಿಂದ ಹಲ್ಲೆ : ಓರ್ವನಿಗೆ ಬಿತ್ತು ಧರ್ಮದೇಟು.