ಕುಮಟಾ:ಅಕ್ಟೋಬರ್ 31ರಿಂದ ಲೈಫ್ ಲೈನ್ ಎಕ್ಸಪ್ರೆಸ್ ಮೂಲಕ ನಡೆಯುವ ಆರೋಗ್ಯ ಕಾರ್ಯಕ್ರಮದ ಪೂರ್ವಬಾವಿಯಾಗಿ ಇಂದು ಕುಮಟಾದಲ್ಲಿ ಕಾರ್ಯಕ್ರಮ‌ನಡೆಯಿತು.

ತಾಲೂಕಿನ ನಾದಶ್ರೀ ಕಲಾಕೇಂದ್ರದಲ್ಲಿ ಉಚಿತ ಮೊಬೈಲ್ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ರೈಲ್ ಕುಮಟಾಕ್ಕೆ ಆಗಮಿಸುವ ಬಗೆಗೆ ಸಚಿವ ಅನಂತ ಕುಮಾರ ಹೆಗಡೆಯವರು ಮಾಹಿತಿ ನೀಡಿದರು.ಕೇಂದ್ರ ಸರ್ಕಾರದ ವತಿಯಿಂದ ದಿನಾಂಕ ಅಕ್ಟೋಬರ್ 31 ರಿಂದ ನವೆಂಬರ್ 18 ರವರೆಗೆ ಉತ್ತರಕನ್ನಡದ ಕುಮಟಾ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಮೊಬೈಲ್ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ರೈಲು ಬಂದು ನಿಲ್ಲುತ್ತಿದ್ದು, ಯಾವುದೇ ಓಪರೆಷನ್, ಯಾವುದೇ ಖಾಯಿಲೆಗಳಿದ್ದರು ಉಚಿತವಾದ ಚಿಕಿತ್ಸೆ ಮಾಡಿಸಿ ಕೊಳ್ಳಬಹುದಾಗಿದೆ ಎಂಬುದಾಗಿ ಮಾಹಿತಿ ನೀಡಿದರು.

RELATED ARTICLES  ಹೊನ್ನಾವರದಲ್ಲಿ ೧, ಯಲ್ಲಾಪುರದಲ್ಲಿ ೧ ಕೊರೋನಾ ಪ್ರಕರಣ ದೃಢ.

ಇಲ್ಲಿ ಏಕಕಾಲದಲ್ಲಿ ಒಂದು ಸಾವಿರ ಜನರಿಗೆ ಚಿಕಿತ್ಸೆ ನೀಡಬಹುದಾದ ಅತ್ಯಂತ ಸುಸಜ್ಜಿತ ವ್ಯವಸ್ಥೆ ಅದರಲ್ಲಿದ್ದು ಬಡವರು ಇದರ ಉಪಯೋಗ ಪಡೆಯಿರಿ ಎಂದರು.ದೇಶದ ಪ್ರಸಿದ್ದ ವೈದ್ಯರು ಇಲ್ಲಿ ಇರುತ್ತಾರೆ ಸಾರ್ವಜನಿಕರು ಈ ಯೋಜನೆಯ ಪ್ರಯೋಜನವನ್ನು ತೆಗೆದುಕೊಳ್ಳಬೇಕೆಂದು ಅವರು ತಿಳಿಸಿದರು.

RELATED ARTICLES  ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಮಾಡಿದ ನಟ ಕಮಲಹಾಸನ್

ಕಾರ್ಯಕ್ರಮದಲ್ಲಿ ನಾಗರಾಜ ನಾಯ್ಕ ತೊರ್ಕೆ,ವೆಂಕಟೇಶ ನಾಯ್ಕ,ವಿನೋದ ಪ್ರಭು, ಸೂರಜ್ ಸೋನಿ,ದಿನಕರ ಶೆಟ್ಟಿ,ಮಾರ್ಕಾಂಡೇಯ,ಬಿ.ಜೆ.ಪಿ ಮುಖಂಡ ಸುನಿಲ್ ನಾಯ್ಕ, ಡಾ. ಜಿ ಜಿ ಹೆಗಡೆ,ಎಂ ಜಿ ಭಟ್,ಹಾಗೂ ಬಿ.ಜೆ.ಪಿ ಕಾರ್ಯಕರ್ತರು. ಹಾಗೂ ಸಾರ್ವಜನಿಕರು ಹಾಜರಿದ್ದರು.