ಗೋವು ಹಾಗೂ ಗೋ ರಕ್ಷರಕ ಮೇಲಿನ ಆಕ್ರಮಣ ಖಂಡಿಸಿ ಯುವ ಬ್ರಿಗೇಡ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಬಗ್ಗೆ ಸತ್ವಾಧಾರ ನ್ಯೂಸ್ ಗೆ ಮಾಹಿತಿ ಲಭ್ಯವಾಗಿದ್ದು . ಯುವ ಬ್ರಿಗೆಡ್ ನ ಮಾರ್ಗದರ್ಶಕರಾದ ಚಕ್ರವರ್ತಿ ಸೂಲಿಬೆಲೆಯವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ವಿವರ ಹಂಚಿದ್ದಾರೆ.

ಭಾರತ ಕೃಷಿ ಪ್ರಧಾನ ದೇಶ. ಕೃಷಿಗೆ ಗೋವು ಅಗತ್ಯ. ಹೀಗಾಗಿಯೇ ಇಲ್ಲಿ ಗೋವಿಗೆ ಇತರೆಲ್ಲ ಪ್ರಾಣಿಗಳಿಗಿಂತ ಹೆಚ್ಚು ಬೆಲೆ. ಗೋವಿನ ಹಾಲು ಬಿಡಿ ರೈತನಾದವ ಗೋಮೂತ್ರ ಮತ್ತು ಸಗಣಿಯನ್ನೂ ಕೃಷಿಗೆ ಬಳಸಿಕೊಳ್ಳುವುದರಿಂದ ಅವನು ಅದನ್ನು ದೇವರೆಂದು ಕರೆದು ಆರಾಧಿಸಿದ. ನೇರವಾಗಿ ಹೇಳಬೇಕೆಂದರೆ ಗೋವು ನಮಗೆ ಮಾತೃ ಸ್ವರೂಪಿ. ಭಾರತ ಗೋವಿನ ಕಲ್ಪನೆಯನ್ನು ಬಿಟ್ಟು ಬದುಕಲು ಸಾಧ್ಯವೇ ಇಲ್ಲ. ಗೋವು ಮಾತ್ರವೇ ಅಲ್ಲ, ಗೋವಿನ ಮೂತ್ರವೂ ಪವಿತ್ರತೆಯ ಕಲ್ಪನೆಯೇ. ಹಾಗಾಗಿ ಗೋವನ್ನು ಅಕ್ರಮವಾಗಿ ಸಾಗಣೆ ಮಾಡುವುದು, ಕೇವಲ ಭಕ್ಷಣೆಗಾಗಿ ಗೋವನ್ನು ಕ್ರೂರವಾಗಿ ಕೊಲ್ಲುವುದನ್ನು ನಾವು ಒಪ್ಪಲಾರೆವು.

ಅಕ್ಟೋಬರ್ 15 ರಂದು ಬೆಂಗಳೂರಿನ‌ ನಿವಾಸಿಯಾದ ನಂದಿನಿ ತನ್ನ ಕೆಲಸ‌ ಮುಗಿಸಿ ಸ್ನೇಹಿತರೊಡನೆ ಹೋಗುತ್ತಿದ್ದ ಸಮಯದಲ್ಲಿ ಬೆಂಗಳೂರಿನ ಟಿಪ್ಪು ಸರ್ಕಲ್ನ ಬಳಿ ಅಕ್ರಮ ಗೋ‌ ಸಾಗಣೆಯನ್ನು ನೋಡಿದರು. ಹಲವು ಕಸಾಯಿ ಖಾನಗಳಿರುವ ಸ್ಥಳವದು. ತಕ್ಷಣ ತಾಳಗಟ್ಟ ಪುರದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ ಅದನ್ನು ತಡೆಯುವಂತೆ ಕೋರಿದ್ದರು. ನಂದಿನಿಯೊಡನೆ ಇಬ್ಬರು ಪೊಲೀಸ್ ಕಾನ್ಸ್‌ಟೇಬಲ್ ಕೂಡ ಘಟನೆ‌ ನಡೆಯುವ ಸ್ಥಳಕ್ಕೆ ತೆರಳಿದ್ದರು. ಆದರೆ, ಅಲ್ಲಿಗೆ ಹೋಗುವ ವೇಳೆಗೆ 100 ಜನರ ಗುಂಪೊಂದು‌‌ ನಂದಿನಿಯವರ ಕಾರಿನ ಮೇಲೆ ಕಲ್ಲುಗಳನ್ನು ಎಸೆದು, ಅವರ ಮೇಲೆ‌ ಮಾರಣಾಂತಿಕ ಹಲ್ಲೆ ನಡೆಸಿದೆ. ಮಹಿಳೆಯೊಬ್ಬರ ಮೇಲೆ ಈ ರೀತಿಯ ಮಾರಣಾಂತಿಕ ಹಲ್ಲೆ ನಡೆದಾಗಲೂ ಬುದ್ಧಿಜೀವಿಗಳೆನಿಸಿಕೊಂಡವರು, ಸ್ತ್ರೀ ವಾದ ಪ್ರತಿಪಾದಕರು ಆಕೆ ಸುಳ್ಳು ಹೇಳುತ್ತಿದ್ದಾಳೆ ಎಂದು ಆಕಯನ್ನೇ ಅನುಮಾನಿಸಿದ್ದಾರೆ. ಅಕ್ರಮ ಗೋಹತ್ಯೆಯನ್ನು ಬಯಲಿಗೆಳೆದುದರ ಫಲವಿದು.‌ ಆಕೆಯ ದನಿಯ ಜೊತೆ ನಮ್ಮ ದನಿಯನ್ನು ಸೇರಿಸುವ ಅಗತ್ಯವಿದೆ ಎಂದು ಯುವ ಬ್ರಿಗೇಡ್ ಕಾರ್ಯಕ್ರಮ‌ಹಮ್ಮಿಕೊಂಡಿದೆ.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 16-02-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?

ಅಕ್ಟೋಬರ್ 17 ರಂದು ಯಲಹಂಕಾದಲ್ಲಿ ಕೂಡ ಇದೇ ರೀತಿಯ ಘಟನೆ ನಡೆದಿದೆ. ಪ್ರಾಣಿ ರಕ್ಷಣಾ ಸಂಸ್ಥೆಯ ಕವಿತಾ‌ ಮತ್ತು ಆಂಟನಿ ಹೈಕೋರ್ಟ್ ನೇಮಿಸಿದ್ದ ಕಮೀಷನರ್ ಮತ್ತು ಪೊಲೀಸರ ಜೊತೆಗೂಡಿ ಅಕ್ರಮ ಗೋ ಸಾಗಣೆ ಮಾಡುತ್ತಿದ್ದ ಕಸಾಯಿ ಖಾನೆಯೊಂದಕ್ಕೆ ಭೇಟಿ ನೀಡಿ ಪರಿಶೀಲಿಸಬೇಕೆಂದಿದ್ದರು. ಆದರೆ,‌ ಭೇಟಿ ನೀಡಿದಾಗ ಅಲ್ಲಿ ಸುಮಾರು 200 ಜನರ ಗುಂಪು ಇವರ ಮೇಲೆ ದಾಳಿ ನಡೆಸಿದೆ. ಪೊಲೀಸರ ವಾಹನ ಜಖಂಗೊಂಡಿದೆ. ಯಾವ ಮಾಧ್ಯಮಗಳು ಈ ವಿಚಾರಗಳನ್ನು ಜನರಿಗೆ ತಲುಪಿಸುವಲ್ಲಿ ಆಸಕ್ತಿ ಹೊಂದಿದಂತೆ‌ ತೋರುತ್ತಿಲ್ಲ. ಕೇವಲ ದೇಶದೊಳಗೆ ಮಾತ್ರವಲ್ಲ ಗಡಿಗಳಲ್ಲೂ ಅಕ್ರಮ ಗೋ ಸಾಗಣೆ ಭರದಿಂದ ಸಾಗುತ್ತಿದೆ.

‘ದೇಶದಲ್ಲಿರುವ ನಾಗರಿಕರು ಖುಷಿಯಿಂದ ದೀಪಾವಳಿಯನ್ನು ಆಚರಿಸಲು. ನಾವು ಶತ್ರುಗಳಿಗೆ ತಕ್ಕ ಉತ್ತರವನ್ನು ಕೊಡುವ ಕೆಲಸ ಮಾಡುತ್ತೇವೆ’ ಎಂದಿದ್ದರು ಪೂಂಚ್ ನಲ್ಲಿರುವ ಸೈನಿಕರು ದೀಪಾವಳಿ‌ಆಚರಣೆಯ ಕುರಿತು ಪತ್ರಿಕೆಗಳು ಪ್ರಶ್ನಿಸಿದ್ದಾಗ.‌ ಹೌದು. ನಮ್ಮ‌ ಸೈನಿಕರು ವರ್ಷವಿಡೀ ದೇಶವನ್ನು ಕಾಯುವ ಕೆಲಸದಲ್ಲಿಯೇ ಮಗ್ನರಾಗಿರುತ್ತಾರೆ. ಶತ್ರುಗಳ‌ ನಾಶವೇ ಅವರಿಗೆ ಹಬ್ಬ.

ಇಡಿಯ ದೇಶ ದೀಪಾವಳಿಯ ಸಂಭ್ರಮದಲ್ಲಿ ಮುಳುಗಿದ್ದರೆ, ಅತ್ತ ಸೈನಿಕರು ತಮ್ಮ‌ ಕುಟುಂಬದ ಚಿಂತೆಯನ್ನೂ ಬದಿಗೊತ್ತಿ ಗಡಿಗಳಲ್ಲಿ ದೇಶದ ರಕ್ಷಣೆಯ ಕೆಲಸ ಮಾಡುತ್ತಿದ್ದರು. ಅಂತರಾಷ್ಟ್ರೀಯ ಗಡಿಗಳಲ್ಲಿ ನಡೆಯುವ ಅಕ್ರಮವನ್ನು ತಡೆಯುವ ಕೆಲಸದಲ್ಲಿ ನಿಯೋಜಿತರಾಗಿದ್ದರು. ಅದೇ ಕೆಲಸದಲ್ಲಿ ನಿರತರಾಗಿದ್ದ ಸೈನಿಕನೊಬ್ಬನ ಮೇಲೆ ಗೋ ಕಳ್ಳ ಸಾಗಣೆ‌‌ ಮಾಡುತ್ತಿದ್ದ ಗುಂಪೊಂದು ಅಕ್ಟೋಬರ್ 16 ರಂದು ದಾಳಿ‌ ಮಾಡಿತ್ತು. ಆ ಸೈನಿಕ‌ ಈಗ ಮೃತಪಟ್ಟಿದ್ದಾರೆ.

ದೀಪಕ್ ಮಂಡಲ್ ಅವರು ಬಿ.ಎಸ್.ಎಫ್ ನ 145 ನೇ ಬಟಾಲಿಯನ್ ನ‌ ಉಸ್ತುವಾರಿ ಅಧಿಕಾರಿ. ತ್ರಿಪುರಾದ ಸಿಪಾಹಿಜಲ್ ಜಿಲ್ಲೆಯ ಬೆಲಾರ್‌ದೆಪ್ಪದ ಗಡಿ ಭಾಗದಲ್ಲಿ ತಮ್ಮ ತಂಡದೊಂದಿಗೆ ಅಂತರಾಷ್ಟ್ರೀಯ ಗಡಿಗಳಲ್ಲಿ ಗೋ ಕಳ್ಳ ಸಾಗಣೆ ಮಾಡುವವರನ್ನು ಮತ್ತು ಅಕ್ರಮ ಕೆಲಸಗಳನ್ನು ಕೈಗೊಳ್ಳುವವರನ್ನು ತಡೆಯುವ ಕೆಲಸದಲ್ಲಿ ನಿರತರಾಗಿದ್ದರು. ಅಕ್ಟೋಬರ್ 16 ರ ಬೆಳಗ್ಗಿನ ಜಾವ 2 ಗಂಟೆಯ ಹೊತ್ತಿಗೆ 25 ಜನ ಗೋ ಸಾಗಾಣೆ ಮಾಡುವವರ ಗುಂಪೊಂದು ಬಂತು. ಅವರನ್ನು ತಡೆಯಲು ಪ್ರಯತ್ನಿಸಿದಾಗ ಸಾಧ್ಯವಾಗಲಿಲ್ಲ.‌ ಗೋ ಸಾಗಾಣೆ‌ ಮಾಡುತ್ತಿದ್ದವರು ತಮ್ಮ ನಾಲ್ಕು‌ ಚಕ್ರದ ವಾಹನದಿಂದ ದೀಪಕ್‌‌‌ ಮಂಡಲ್ ಅವರಿಗೆ ಹಿಂಬದಿಯಿಂದ‌ ಗುದ್ದಿದ್ದಾರೆ. ಅವರ ತಲೆ ಮತ್ತು ಕಾಲುಗಳಿಗೆ ತೀವ್ರವಾಗಿ ಪೆಟ್ಟುಗಳಾಗಿವೆ.‌ ‘ಅವರು ಲಾಠಿ, ಇಟ್ಟಿಗೆಗಳು, ಮಚ್ಚುಗಳನ್ನು ತಮ್ಮೊಡನೆ ತೆಗೆದುಕೊಂಡು ಬಂದಿದ್ದರು’ ಎನ್ನುತ್ತಾರೆ ದೀಪಕ್ ಅವರೊಡನಿದ್ದ ಮತ್ತೊಬ್ಬ ಸೈನಿಕ.
ದೀಪಕ್‌ ಅವರ ಪರಿಸ್ಥಿತಿ ಗಂಭೀರವಾದ ಕಾರಣ‌ ಅವರನ್ನು ಕಲ್ಕತ್ತಾದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.‌ ಆದರೆ, ತೀವ್ರವಾಗಿ ಗಾಯಗೊಂಡದ್ದರಿಂದ ಅಕ್ಟೋಬರ್ 20ರಂದು ದಿಪಕ್ ಅವರು ಮರಣ‌‌ ಹೊಂದಿದ್ದಾರೆ. ಜಾತ್ಯತೀತ, ಬುದ್ಧಿಜೀವಿಗಳು,‌ ಮಾತು- ಮಾತಿಗೂ ಮಾನವತಾವಾದವನ್ನು ಮುಂದಿಡುವ ಜನ ಇವರ ಸಾವಿಗೆ ಕಣ್ಣೀರು ಬಿಡಿ,‌‌ ಸೈನಿಕರಿಗೆ ತೋರಿಸಬೇಕಾದ ಗೌರವದ ಒಂದು‌ ಮಾತನ್ನೂ ಆಡಿಲ್ಲ. ಅಕ್ರಮವಾಗಿ ಸಾಗಣೆಯಾಗುತ್ತಿದ್ದ ಗೋವುಗಳನ್ನು ರಕ್ಷಸುತ್ತಿದ್ದುದಲ್ಲವೇ, ಹಾಗಾಗಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ ಎಂಬುದನ್ನೂ ಮರೆತು ಮೌನದಿಂದಿದ್ದಾರೆ.

RELATED ARTICLES  ಶ್ರೀ ಮದ್ವಾಲ್ಮೀಕಿ ರಾಮಾಯಣ ಪಾರಾಯಣ ನವಾಹ ಕಾರ್ಯಕ್ರಮ ಪ್ರಾರಂಭ

ಈ ರೀತಿಯ ಹಲವು ಘಟನೆಗಳು‌ ನಡೆಯುತ್ತಲೇ ಇರುತ್ತವೆ. ಬೆಳಕಿಗೆ ಬರುವ ಘಟನೆಗಳು ಮಾತ್ರ ಅತ್ಯಂತ ಕಡಿಮೆ. ಅಕ್ರಮವಾಗಿ ಗೋವನ್ನು ಕಸಾಯಿ ಖಾನೆಗೆ ಸಾಗಿಸುತ್ತಿದ್ದವರನ್ನು ಥಳಿಸಿದರೆ ‘ನಮ್ಮ‌ ಹಕ್ಕು, ಅಸಹಿಷ್ಣುತೆ, ನಾಟ್ ಇನ್ ಮೈ ನೇಮ್, ಮಾನವೀಯತೆಯಿಲ್ಲ’ ಎಂದೆಲ್ಲ ಅರಚಿಕೊಳ್ಳುತ್ತಾರೆ. ಗೋ ರಕ್ಷಣೆ ಮಾಡಲು ಹೋದವರ ಮೇಲೆ ಮಾರಣಾಂತಿಕ ಹಲ್ಲೆಯಾದಾಗಲೂ,‌ ಅಷ್ಟೆ ಏಕೆ, ಮರಣವೇ ಹೊಂದಿದಾಗಲೂ ಉಸಿರೆತ್ತುವುದಿಲ್ಲ ಸೋಗಲಾಡಿ ಬುದ್ಧಿಜೀವಿಗಳು. ಆದರೆ, ನಾವು ಸುಮ್ಮನೆ ಕೂರುವವರಲ್ಲ. ಗೋ ಹಂತಕರ ವಿರುದ್ಧ ಎದ್ದು ನಿಂತವರೊಡನೆ ನಾವಿದ್ದೇವೆ. ಅವರ ದನಿಯ ಜೊತೆ ನಮ್ಮೆಲ್ಲರ ದನಿ ಸೇರಿಸಿ ಆಗುತ್ತಿರುವ ಅನ್ಯಾಯವನ್ನು ಜನರ ಮುಂದಿಡುವ ಕೆಲಸ ನಾವು ಮಾಡುತ್ತೇವೆ. ಈ ಎಲ್ಲ ಘಟನೆಗಳನ್ನು ಖಂಡಿಸಿ #ಬದುಕುವ_ಹಕ್ಕು_ನಮಗೂ_ಇದೆ‌ ಎನ್ನುವ ಜೀವಪರ ಹೋರಾಟಕ್ಕೆ ನಮ್ಮೊಡನೆ ಕೈ ಜೋಡಿಸಿ ಎಂದು ವಿನಂತಿಸಿ. ಪ್ರಾಣವನ್ನೇ ಪಣಕ್ಕಿಟ್ಟು ಈ ಅನ್ಯಾಯದ ವಿರುದ್ಧ ಹೋರಾಡಿದವರ ನೆನಪಿನಲ್ಲಿ ಹಣತೆ ಹಿಡಿದು ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.