ಕಾರವಾರ: ರಕ್ತದಾನವು ಎಲ್ಲಾ ದಾನಗಳಿಗಿಂತಲೂ ಶ್ರೇಷ್ಠದಾನವಾಗಿದೆ. ರಕ್ತದಾನದಿಂದ ನಾವು ಇನ್ನೊಂದು ಜೀವವನ್ನು ಉಳಿಸಲು ಸಾದ್ಯವಾಗುತ್ತದೆ. ಜೀವನದಲ್ಲಿ ಒಂದುಸಲವಾದರೂ ರಕ್ತದಾನ ಮಾಡಬೇಕು. ಸಮಾಜಮುಖಿಯಾಗಿ ಇಂತಹ ಕಾರ್ಯದಲ್ಲಿ ತೊಡಗುವುದರಿಂದ ಇತರರಿಗೆ ಪ್ರೇರಣೆ ಸಿಗುತ್ತದೆ. ರಕ್ತದಾನವು ಜಾತಿ ಧರ್ಮ ಮೀರಿ ಮನುಷ್ಯ ಸಂಬಂಧವನ್ನು ಹೆಚ್ಚಿಸುತ್ತದೆ ಎಂದು ಕಾರವಾರ ತಾಲೂಕಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಗರಾಜ ಹರಪನಹಳ್ಳಿಯವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಆಝಾದ್ ಯುಥ್ ಕ್ಲಬ್ ಕಾರವಾರ, ಸಾರ್ವಜನಿಕ ಶ್ರೀ ಮಹಾ ಕಾಳಿಮಾತಾ ಪೂಜಾ ಕಮಿಟಿ ಕೆ.ಹೆಚ್.ಬಿ.ಕಾಲೋನಿ, ಕಾರವಾರ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಡೆಪ್ಕೋ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಆಸ್ಪತ್ರೆ ಕಾರವಾರರವರ ಸಹಯೋಗದಲ್ಲಿ ಕೆ.ಹೆಚ್.ಬಿ.ಕಾಲೋನಿಯಲ್ಲಿ ಹಮ್ಮಿಕೊಂಡ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಉದ್ಘಾಟಕರಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

RELATED ARTICLES  ರಸಾಯನಶಾಸ್ತ್ರ ರಾಷ್ಟ್ರೀಯ ವೆಬಿನಾರ್ ಕಾರ‍್ಯಕ್ರಮ ಸಂಪನ್ನ

ಇನ್ನೋರ್ವ ಮುಖ್ಯ ಅತಿಥಿಗಳಾಗಿ ರಾಷ್ಟ್ರ ಹಾಗೂ ರಾಜ್ಯೋತ್ಸವ ಪ್ರಶಸ್ತಿವಿಜೇತರಾದ ನಜೀರ್ ಅಹಮದ್ ಯು.ಶೇಖ್‍ರವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗಾಗಿ ಶುಭಹಾರೈಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ನಗರಸಭಾ ಸದಸ್ಯರಾದ ಪ್ರದೀಪ್ ಗುನಗಿರವರು ಮಾತನಾಡಿ ರಕ್ತದಾನ ಮಾಡುವುದು ಒಂದು ಒಳ್ಳೆಯ ಕಾರ್ಯಕ್ರಮ. ಸಂಘಟನೆಯ ಮೂಲಕ ಯಾವುದೇ ಕಾರ್ಯಕ್ರಮವನ್ನು ಮಾಡುವುದರಿಂದ ಸಾರ್ವಜನಿಕರಿಗೆ ಸಹಾಯವಾಗುತ್ತದೆ. ಪ್ರತಿಯೊಬ್ಬರೂ ಇಂತಹ ರಕ್ತದಾನಕ್ಕೆ ಮುಂದೆ ಬರಬೇಕು ಎಂದು ಹೇಳಿದರು. ಪ್ರಾರಂಭದಲ್ಲಿ ಕ.ಸಾ.ಪ.ಸದಸ್ಯೆ ಫೈರೋಜಾ ಬೇಗಂ ಶೇಖ್‍ರವರು ಪ್ರಾಸ್ತವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

ಈ ಶಿಬಿರದಲ್ಲಿ ಸುಮಾರು 30ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಪ್ರಾರಂಭದಲ್ಲಿ ಸಾರ್ವಜನಿಕ ಶ್ರೀ ಮಹಾ ಕಾಳಿಮಾತಾ ಪೂಜಾ ಕಮಿಟಿಯ ಅಧ್ಯಕ್ಷರಾದ ತಪನ್ ಭುನಿಯಾ ರವರು ರಕ್ತದಾನ ಮಾಡಿದರು ನಂತರ ಅಸಿಶ್ ದಾಸ್, ಆರ್.ಎನ್.ಶೆಟ್ಟಿ, ಕೋಮಲ್ ಸಾವಂತ್, ಸರ್‍ಬೇಶ್ವರ್ ಮಂಡಲ್, ಮಹಾಸ್ ಜಾನಾ, ಕಾರ್ತಿಕ್ ಮೋದಿ, ಬಿಷ್ಣುಪಾಡಾ ಪೋರಿಯಾ, ಸರ್‍ಜೋತ್ ಬೇರಾ, ಸುತಿಪ್ ಭುನಿಯಾ, ಸುಭಾಸ್ ಪತ್ರಾ ಮೊದಲಾದವರು ಕ್ರಮವಾಗಿ ರಕ್ತದಾನ ಮಾಡಿದರು. ಪ್ರಾರಂಭದಲ್ಲಿ ಕೆಲವು ರಕ್ತದಾನಿಗಳಿಗೆ ಆಝಾದ್ ಯುಥ್ ಕ್ಲಬ್ ವತಿಯಿಂದ ರಕ್ತದಾನದ ಸಂದೇಶ ಸಾರುವ ಟಿ-ಶರ್ಟ್‍ಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಹಾಕಾಳಿಮಾತಾ ಪೂಜಾ ಕಮಿಟಿಯ ಅಧ್ಯಕ್ಷರಾದ ತಪನ್ ಭುನಿಯಾ, ಕಾರ್ಯದರ್ಶಿಯಾದ ಬಿಸ್ವನಾಥ ಮಂಡಲ್, ಕೋಶಾಧ್ಯಕ್ಷರಾದ ಬಿರಾಸ್ವರ್ ಮಂಡಲ್, ಕಾಲಿಪಾಡಾ ಸಾಮಂತಾ, ಸ್ವದೇಶ್ ಬೇರಾ, ವೈದ್ಯಾಧಿಕಾರಿ ಡಾ.ರಿಜ್ವಾನಾ ತಬಸ್ಸುಮ್, ಸಿಸ್ಟರ್ ಎಮಿಲಿಯಾ ಮಿರಾಂಡಾ, ಸಿಸ್ಟರ್ ವಿದ್ಯಾ ಮಾಲ್ವಾಣ್‍ಕರ್, ಸಿಸ್ಟರ್ ಸುವರ್ಣಾ ಮತ್ತಿತರರು ಉಪಸ್ಥಿತರಿದ್ದರು. ಕ್ಲಬ್‍ನ ಕಾರ್ಯದರ್ಶಿಯಾದ ಮೊಹಮ್ಮದ್ ಉಸ್ಮಾನ್ ಶೇಖ್‍ರವರು ಈ ಕಾರ್ಯಕ್ರಮವನ್ನು ಸಂಘಟಿಸಿದ್ದರು.

RELATED ARTICLES  ಏಳನೆವರ್ಷದ ತಾಳಮದ್ದಲೆ ಮತ್ತು ಸನ್ಮಾನ ಕಾರ್ಯಕ್ರಮ ಸಂಪನ್ನ.