ಬರವಣಿಗೆ : ಶಿಶಿರ ಅಂಗಡಿ.

ಅಂತರಾಷ್ಟ್ರೀಯ ಗಡಿಯಲ್ಲಿ ಗೋಸಾಗಾಣಿಕೆ ತಡೆದುದಕ್ಕಾಗಿ ಹತ್ಯೆಗೊಂಡ ಬಿಎಸ್ಎಫ್ ಕಮಾಂಡರ್‌‌ ದೀಪಕ್‌ ಮಾಂಡೇಲ್, ಕುಂದಾಪುರದಲ್ಲಿ ಅಕ್ರಮ ಗೋಸಾಗಾಣಿಕೆ ತಡೆದ ಪೋಲಿಸ್ ನಾಗಣ್ಣ, ಕಸಾಯಿಖಾನೆಯ ಅಕ್ರಮವನ್ನು ಬಯಲಿಗೆಳೆದ ನಂದಿನಿಯವರು, ‌ಅಕ್ರಮ ಕಸಾಯಿಖಾನೆಯನ್ನು ಮುಚ್ಚಿಸಲು ನ್ಯಾಯಾಲಯದಿಂದ ನಿರ್ದೇಶಿತರಾಗಿ‌ ಹೋದ ಕೋರ್ಟ್ ಕಮಿಷನರ್, ಪೋಲೀಸ್ ಅಧಿಕಾರಿಗಳು ಮತ್ತು ದೂರುದಾರರಾದ‌ ಕವಿತಾ ಜೈನ್ ಮತ್ತು ಆಂಥೋನಿಯವರು; ಹೀಗೆ ದಾಳಿಗೆ ಒಳಪಟ್ಟ ಈ ಎಲ್ಲ ವ್ಯಕ್ತಿಗಳು ಸಮಾಜದ ಬೇರೆ ಬೇರೆ ‌ಸ್ಥರದವಾರದರೂ, ಕಾರಣ ಮಾತ್ರ ಒಂದೇ ಎನ್ನುವುದು ಆತಂಕಕಾರಿ. ಹೌದು ಇವರು ಗೋರಕ್ಷಣೆ ಮಾಡುವವರು, ಕಸಾಯಿಖಾನೆಯ ಅಕ್ರಮವನ್ನು ಬಯಲಿಗೆಳೆಯುತ್ತಾರೆ ಎಂಬ ಒಂದೇ ಒಂದು ಕಾರಣಕ್ಕೆ ಇವರನ್ನು ಟಾರ್ಗೆಟ್ ಮಾಡಲಾಗಿದೆ.!

ಗೋಹತ್ಯೆ ಮಾಡಿ ಗೋಮಾಂಸವನ್ನು ಭಕ್ಷಿಸುವುದಕ್ಕಿಂತ ಗೋರಕ್ಷಣೆಯಲ್ಲಿ‌ ತೊಡಗುವುದು ತಪ್ಪೆ? ಗೋಹಂತಕರಿಗೆ ಇರುವ ಬದುಕುವ ಹಕ್ಕು – ಗೋವುಗಳಿಗೆ, ಗೋರಕ್ಷಕರಿಗೆ ಇಲ್ಲವೇ? ಜೀವನ ಪರ್ಯಂತ ನಮ್ಮನ್ನು ಪೋಷಿಸುವ ಗೋವುಗಳು ಕೇವಲ ತಿನ್ನುವ ಸರಕನ್ನಾಗಿ ಮಾಡಿದ್ದಾರೆ, ಅದಕ್ಕಾಗಿ ಮನುಷ್ಯರ ಜೀವ ತೆಗೆಯಲೂ ಹೇಸುತ್ತಿಲ್ಲ! ಪ್ರಜಾಪ್ರಭುತ್ವ ಬದುಕಿದೆಯಾ ಎಂಬ ಪ್ರಶ್ನೆಯನ್ನು ಕೇಳಬೇಕು ಎಂದೆನಿಸುತ್ತದೆ.

RELATED ARTICLES  ನಾಳೆ ಮಲ್ಲೇಶ್ವರದಲ್ಲಿ ಗೋಸ್ವರ್ಗ ಸಂವಾದ - ಗೋಸಂಪದ ಸಮರ್ಪಣೆ

ದುರಂತ ಅಂದ್ರೆ ದೇಶದ್ರೋಹಿಗಳನ್ನು ಬಂಧಿಸಿದಾಗ, ಸಮಾಜ ಘಾತುಕರ ವಿಷಯ ಬಂದಾಗ ಅಥವಾ ಅಕ್ರಮ ಗೋ/ಗೋಮಾಂಸ ಸಾಗಾಟಕರ ಸುದ್ದಿಗೆ ಬಂದಾಗ #NotInMyName ಗಳು, #ನಾನು ಗ್ಯಾಂಗಿನವರು, ಮನುಷ್ಯನ ಹಕ್ಕಿನ ಕುರಿತು ಮಾತನಾಡುತ್ತಾ ಮಾನವತಾವಾದದ ಹೆಸರಲ್ಲಿ ಬೊಬ್ಬೆಯಿಡುವ ಯಾವುದೇ ಶೋಆಫ್ ಬುದ್ಧಿಜೀವಿಗಳು ನಿಜವಾದ ಮಾನವೀಯತೆ ಮೆರೆಯುವ ಇಂತಹ ವಿಷಯಗಳಿಗೆ ಬರುವುದಿಲ್ಲ!

ಗೋವುಗಳನ್ನು ಉಳಿಸುತ್ತಾರೆಂಬ ಕಾರಣಕ್ಕೆ ಮನುಷ್ಯತ್ವಹೀನವಾಗಿ ಆಕ್ರಮಣ ಮಾಡುತ್ತಿದ್ದಾರಲ್ಲ, ಇನ್ನೂ ಎಷ್ಟು ಅಂತ ಸುಮ್ಮನಿರೋದು ನೀವೇ ಹೇಳಿ? ನಾಳೆ ದಿನ ನಾವು ದೇವಸ್ಥಾನಗಳಿಗೆ ಹೋಗುತ್ತೇವೆಂಬ ಕಾರಣಕ್ಕೆ ನಮ್ಮನ್ನು ಹತ್ಯೆ ಮಾಡುವ ದಿನ ಬರಬಹುದು, ಅಷ್ಟೊರಳಗೆ ನಾವು ಎಚ್ಚೆತ್ತು, ಸರ್ಕಾರ ಹಾಗೂ ಸಮಾಜವನ್ನು ಎಬ್ಬಿಸಬೇಕಿದೆ.

ನಮ್ಮ ದೇಶವನ್ನು ರಕ್ಷಿಸುವ ಸೈನಿಕರು, ನಮ್ಮನ್ನು ರಕ್ಷಿಸುವ ಪೋಲೀಸರು ಅಥವಾ ಗೋವು~ಧರ್ಮ‌ ರಕ್ಷಣೆಗಾಗಿ ಶ್ರಮಿಸುತ್ತಿರುವವರ ಮೇಲೆ ದಾಳಿ ಮಾಡಿದರೆ ನಾವು ಸುಮ್ಮನೇ ಕೂರಲ್ಲ ಎಂಬ ಬೆಳಕಿನ ಸಂದೇಶವನ್ನು ಕೊಡಬೇಕಿದೆ. ಯಾವುದೇ ಕಾರಣಕ್ಕೂ ನಾವು ಅವರ ಜೊತೆ ನಿಂತು ಧೈರ್ಯ ತುಂಬಬೇಕಿದೆ. ಈ ಮೂಲಕ ಗೋರಕ್ಷಣೆಗಾಗಿ ಹುತಾತ್ಮರಾದ ಕಮಾಂಡರ್ ದೀಪಕ್ ಮಾಂಡಲ್ ಅವರ ಆತ್ಮಕ್ಕೆ ಸದ್ಗತಿ‌ ಕೋರುವುದರೊಂದಿಗೆ, ಗೋರಕ್ಷಕರ‌ ಮೇಲಿನ ನಿರಂತರ ದಾಳಿಯನ್ನು ಎಲ್ಲ ಸಂಘಟನೆಗಳು ಖಂಡಿಸಿವೆ. ಈ ಕಾರಣಗಳ ನಿಟ್ಟಿನಲ್ಲಿ ಯುವಾ ಬ್ರಿಗೇಡ್ ಇಂದು ಭಾನುವಾರ ಸಂಜೆ ರಾಜ್ಯಾದ್ಯಂತ “ಮೊಂಬತ್ತಿ ಮೆರವಣಿಗೆ”ಯನ್ನು ಹಮ್ಮಿಕೊಂಡಿದೆ.

RELATED ARTICLES  ಸೆ.15 ರಂದು ಕಿತ್ತೂರಿನ ಆಟೋ ರಿಕ್ಷಾ, ಹಾಗೂ ಗೂಡ್ಸ್ ರಿಕ್ಷಾ ಚಾಲಕ ಮತ್ತು ಮಾಲಕರಿಗೆ, ಉಚಿತ ಪಾಸಿಂಗ್ ಯೋಜನೆ ಹಾಗೂ ಔತಣಕೂಟ, ಸಮವಸ್ತ್ರ ಮತ್ತು ಪ್ರಿಂಟಿಂಗ್ ಹುಡ್ ವಿತರಣಾ ಕಾರ್ಯಕ್ರಮ.

ಮೆರವಣಿಗೆಯು ರಾಜ್ಯದ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರಮುಖ ಬೀದಿಗಳಲ್ಲಿ ವಿವಿಧ ಸಂಘಟನೆಗಳ‌ ಸಹಕಾರದೊಂದಿಗೆ ಮೆರವಣಿಗೆ ನಡೆಯಲಿದ್ದು, ಭಾರತೀಯ ಗೋಪರಿವಾರ ಸಂಘಟನೆ ಸಂಪೂರ್ಣವಾಗಿ ಕೈಜೋಡಿಸಲಿದೆ. ಇದೇ ಕಾರ್ಯಕ್ರಮವನ್ನು ಬೆಂಗಳೂರಲ್ಲಿ ಬುಧವಾರ ನಿಗಧಿಪಡಿಸಲಾಗಿದ್ದು, ಬೃಹತ್ ಮಟ್ಟದಲ್ಲಿ ‌ಆಯೋಜಿಸಲು ತೀರ್ಮಾನಿಸಲಾಗಿದೆ. ಮನುಷ್ಯತ್ವ ಇರುವ ಎಲ್ಲರೂ ತಮ್ಮ ತಮ್ಮ ಸ್ಥಳಗಳಲ್ಲಿ ನಡೆಯುವ ಮೆರವಣಿಗೆಯಲ್ಲಿ ಭಾಗವಹಿಸಲು ಕೋರಿದೆ.