ಹೊನ್ನಾವರ : ತಾಲೂಕಿನ ಪೋಟೋಗ್ರಾಫರ್ಸ ಮತ್ತು ವೀಡಿಯೋಗ್ರಾಫರ್ಸ್ ಸಂಘದ ದಶಮಾನೋತ್ಸವದ ಉದ್ಘಾಟನಾ ಸಮಾರಂಭದ ಉದ್ಘಾಟನೆಯನ್ನು ಎಮ್.ವಿ ಚಂದ್ರಶೇಕರ ರೆಡ್ಡಿ ಹಿರಿಯ ಸಿವಿಲ್ ನ್ಯಾಯಾಧೀಶರು ಉದ್ಘಾಟಿಸಿದರು. ನಂತರ ಮಾತನಾಡಿದ ಇವರು ನಮ್ಮ ಭಾವನೆಗಳನ್ನು ಸೆರೆಹಿಡಿಯಲು ಫೋಟೋಗ್ರಾಫರ್ಸ ಅತ್ಯಂತ ಮುಖ್ಯ. ನೆನಪುಗಳನ್ನು ಹಸಿರಾಗಿ ಇಡುವ ಕಾರ್ಯ ಅವರಿಂದ ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಾಗರಾಜ ನಾಯಕ್ ತೊರ್ಕೆ ಭಾಗವಹಿಸಿ ಮಾತನಾಡಿ ಛಾಯಾಗ್ರಹಣ ಅತ್ಯುತ್ತಮ ಕಲೆ. ಎಲ್ಲರಿಗೂ ಅದು ಒಲಿಯುವುದಿಲ್ಲ. ಬದುಕಿನ ಕೆಲ ಸನ್ನಿವೇಶಗಳಗಳನ್ನು ಸೆರೆಹಿಡಿದು ಸದಾ ಜಗತ್ತಿಗೆ ತೋರುವಲ್ಲಿ ಅವರ ಕಾರ್ಯ ಅವಿಸ್ಮರಣೀಯ ಎಂದರು.
ಇದೇ ಸಂದರ್ಭದಲ್ಲಿ ದಶಮಾನೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಿ.ಪಿ.ಐ ರಾಮಚಂದ್ರನ್ ಆನಂದಮೂರ್ತಿ, ಸುರೇಶ್ ಹೊನ್ನಾವರ, ಪಿ.ಕೆ ಹೆಗಡೆ ಇನ್ನಿತರರು ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.