ಕುಮಟಾ : ಬಾಡದ ಸುಂದರ ಸಮುದ್ರ ಕಿನಾರೆಯಲ್ಲಿ ಮಕ್ಕಳಿಗೆ ಆಡಲು ಆಟಿಕೆಗಳನ್ನೊಳಗೊಂಡ ಚಿಕ್ಕ ಉದ್ಯಾನವನ ಮಾಡಿ ಕೊಡುವಂತೆ ಯುವ ಮುಖಂಡ ರವಿಕುಮಾರ್ ಶೆಟ್ಟಿಯವರಿಗೆ ಸಾರ್ವಜನಿಕರು ಮನವಿ ನೀಡಿದರು.

ಸುಂದರ ಪ್ರಕೃತಿಯ ಸಿರಿ ಇರುವ ಈ ಪ್ರದೇಶದಲ್ಲಿ ಚಿಕ್ಕ ಉದ್ಯಾನವನ ಮಾಡಿದರೆ ಜನರಿಗೆ ಉಪಯುಕ್ತವಾಗುವುದು. ಮಕ್ಕಳಿಗೆ ಆಟವಾಡಲು ಅಗತ್ಯ ಪರಿಕರ ಒದಗಿಸಿ ಸುಂದರ ಉದ್ಯಾನ ನಿರ್ಮಿಸಿ ಇದನ್ನು ಪ್ರವಾಸಿ ತಾಣವಾಗಿಸುವಂತೆ ಮನವಿಯಲ್ಲಿ ವಿನಂತಿಸಲಾಗಿದೆ.

RELATED ARTICLES  ಉತ್ತರಕನ್ನಡ ಜಿಲ್ಲೆಯು ಹೈನುಗಾರಿಕೆಗೆ ಹೇಳಿ ಮಾಡಿಸಿದ ಪ್ರದೇಶ : ಕಾಗೇರಿ

ಮನವಿಗೆ ಸ್ಪಂದಿಸುವುದಾಗಿ ಕಾಂಗ್ರೇಸ್ ಮುಖಂಡರಾದ ಸೂರಜ ನಾಯ್ಕ ಸೋನಿ ಹೇಳಿದರು. ಯಾವ ರೀತಿಯಲ್ಲಿ ಸಾಧ್ಯವೋ ಆ ರೀತಿಯಲ್ಲಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

RELATED ARTICLES  ಮಿರ್ಜಾನಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಗುರುಪೂರ್ಣಿಮೆ ಆಚರಣೆ

ಈ ಸಮಯದಲ್ಲಿ ಉರಿನವರಾದ ವಸಂತ ನಾಯ್ಕ್ ಬಾಡ,ವಾಸುದೇವ ನಾಯ್ಕ್, ಚಂದ್ರಕಾಂತ ಪಟಗಾರ,ಮಂಜುನಾಥ ಪಟಗಾರ ಮತ್ತು ಗೋವಿಂದ ಹರಿಕಂತ್ರ ಉಪಸ್ಥಿತರಿದ್ದರು.