ಶಿರಸಿ : ಟಿಪ್ಪು ಜಯಂತಿಗೆ ಕಳೆದ ಬಾರಿಯಂತೆ ಈ ಬಾರಿ ಸಹ ವಿರೋದ ವ್ಯಕ್ತಪಡಿಸುತ್ತೇನೆಂದು ಶಿರಸಿ ಶಾಸಕ ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಶಿರಸಿಯಲ್ಲಿ ಹೇಳಿಕೆ ನೀಡಿರುವ ಕಾಗೇರಿಯವರು ಟಿಪ್ಪು ಓರ್ವ ವಿವಾದಿತ ವ್ಯಕ್ತಿತ್ವ ಹೊಂದಿದ ವ್ಯಕ್ತಿ. ಸರ್ಕಾರ ಅನವಶ್ಯಕವಾಗಿ ಟಿಪ್ಪು ಜಯಂತಿ ಕಾರ್ಯಕ್ರಮ‌ ಮಾಡುತ್ತಿದೆ ಎಂದಿದ್ದಾರೆ. ಟಿಪ್ಪು ಜಯಂತಿ ಮಾಡಿ ಎಂದು ಮುಸ್ಲಿಂ ಸಮುದಾಯದವರು ಕೇಳಿಲ್ಲ. ಆದರೂ ಸರ್ಕಾರ ಅಲ್ಪಸಂಖ್ಯಾತರ ಮತ ಒಲೈಸಲು ಟಿಪ್ಪು ಜಯಂತಿ ಮಾಡುತ್ತಿದೆ. ಎರಡು ವರ್ಷದಿಂದ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ವಿರೋದಿಸುತ್ತಾ ಬಂದಿದ್ದು ಈ ಬಾರಿ ಸಹ ವಿರೋದಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಕಾಗೇರಿ ಹೇಳಿಕೆ ನೀಡಿದ್ದಾರೆ.

RELATED ARTICLES  ಹೆಬಳೆ ನಾಮಧಾರಿ ಸೇವಾ ಸಂಘದ ವತಿಯಿಂದ ಶಾಸಕ ಸುನೀಲ್ ನಾಯ್ಕರಿಗೆ ಸನ್ಮಾನ

ಈ ಹೇಳಿಕೆಯ ಮೂಲಕ ಟಿಪ್ಪು ಜಯಂತಿ ವಿರೋಧಿಸಿ ಕಾರ್ಯಕ್ರಮ ಬಹಿಷ್ಕರಿಸುವ ಬೀಜೇಪಿಗರ ಸಂಖ್ಯೆ ಹೆಚ್ಚಿದಂತಾಗಿದೆ.