ಇಮಾ ಕೈಥಲ್ ಅಂದೊಡನೆ ಥಟ್ ಅಂತ ನೆನಪಾಗೋದೇ ಮದರ್ಸ್ ಮಾರ್ಕೆಟ್…

ಮಣಿಪುರದ ಇಂಪಾಲದ ಹೃದಯಭಾಗದಲ್ಲಿರುವ ಏಷ್ಯಾದ ಅತಿ ದೊಡ್ಡ ಮಹಿಳಾ ಮಾರ್ಕೆಟ್ ನಲ್ಲಿ ಪುರಷರು ವ್ಯಾಪಾರ ನಡೆಸೋ ಆಗಿಲ್ಲ. ಸುಮಾರು 500 ವರ್ಷಗಳಿಂದಲ್ಲೂ ಇಲ್ಲಿ ಮಹಿಳೆಯರೇ ವ್ಯಾಪಾರ ನಡೆಸೋದು.

ಅಂದಾಜು ನಾಲ್ಕು ಸಾವಿರಕ್ಕೂ ಅಧಿಕ ಮಹಿಳೆಯರು ಇಲ್ಲಿ ತಮ್ಮ ವ್ಯವಹಾರಗಳನ್ನು ನಡೆಸುತ್ತಾ ಬಂದಿದ್ದಾರೆ. ತರಕಾರಿಯಿಂದ ಹಿಡಿದು ಮೀನು, ಕರಕಶುಲ ವಸ್ತುಗಳು ಸೇರಿದಂತೆ ಬಗೆ ಬಗೆಯ ವಸ್ತುಗಳ ಮಾರಾಟದಲ್ಲಿ ಮಹಿಳೆಯರು ತೊಡಗಿದ್ದಾರೆ.

ವಿಶೇಷ ಎಂದರೆ ಇಂಫಾಲದ ರಾಜಕೀಯ ಮತ್ತು ಸಾಮಾಜಿಕ ವಿಚಾರಗಳು ಕೂಡ ಇಲ್ಲೇ ಪ್ರಮುಖವಾಗಿ ಚರ್ಚೆಯಾಗುತ್ತದೆ. ಇಂತಹ ಹಲವು ವಿಶೇಷತೆಗಳನ್ನು ಒಳಗೊಂಡಿರುವ ಈ ಮಾರ್ಕೆಟ್ ಮಹಿಳೆಯರ ಸ್ವಾವಲಂಬನೆ ಬದುಕಿಗೆ ಕೈಗನ್ನಡಿಯಾಗಿ ನಿಂತಿದೆ.

RELATED ARTICLES  ಕೈ ಹೊರಹಾಕಿದ್ದ ಪ್ರಯಣಿಕನ ಕೈ ತುಂಡು.?

ಅಂದಹಾಗೆ ಇಲ್ಲಿ ಮಹಿಳೆಯರೇ ವ್ಯಾಪಾರ ನಡೆಸೋದಕ್ಕೂ ಒಂದು ಐತಿಹಾಸಿಕ ಕಾರಣವಿದೆ. ಶತಮಾನದ ಹಿಂದೆ ಮಣಿಪುರದಲ್ಲಿ ರಾಜರ ಆಳ್ವಿಕೆ ಇದ್ದಾಗ ಇಲ್ಲಿನ ಗಂಡಸರನ್ನು ರಾಜ ತನ್ನ ಸೇವೆಗೆ ಬಳಸಿಕೊಳ್ಳುತ್ತಿದ್ದ. ದಿನಪೂರ್ತಿ ಆತನ ಸೇವೆಯಲ್ಲೇ ಗಂಡಸರು ನಿರತರಾದ್ದರಿಂದ ಮನೆಯ ಜವಾಬ್ದಾರಿ ಮಹಿಳೆಯರ ಮೇಲೆ ಬಿತ್ತು. ಆಗ ಸಣ್ಣದಾಗಿ ಸಂತೆ ರೀತಿಯಲ್ಲಿ ಮಹಿಳೆಯರೇ ವ್ಯಾಪಾರ ನಡೆಸಲಾರಂಭಿಸಿದರು.

ನಂತರದ ದಿನಗಳಲ್ಲಿ ಮಹಿಳೆಯರ ಸಂತೆಯಾಗಿ ರೂಪಾಂತರಗೊಂಡು ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳಾ ಸಂಘಟನೆಗಳು ಉದಯವಾಯಿತು. ಸ್ವಾತಂತ್ತ್ಯ ನಂತರ ಈ ಮಾರುಕಟ್ಟೆಯನ್ನು ಕೆಡವಲು ಮುಂದಾದಾಗ ಮಹಿಳೆಯರು ಪ್ರತಿಭಟನೆ ನಡೆಸಿದರು. ಈಗ ಈ ಜಾಗದಲ್ಲಿ ನೂತನ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ. ಆದರೆ ವ್ಯಾಪಾರ ಮಾತ್ರ ಮಹಿಳೆಯರೇ ಮಾಡಬೇಕು ಎಂಬ ಅಘೋಷಿತ ನಿಯಮವನ್ನು ಇಲ್ಲಿನ ಮಹಿಳೆಯರು ಜಾರಿ ಮಾಡಿದ್ದಾರೆ.

RELATED ARTICLES  Ocena Doradców Forex

ದೇಶಾದ್ಯಂತ ಮಹಿಳೆಯರಿಗೆ ಮೀಸಲಾತಿ ಬೇಕು ಎಂದು ಕೂಗಿಕೊಳ್ಳುತ್ತಿದ್ದಾರೆ ಇಮಾ ಕೈಥಲ್ ನಲ್ಲಿ ಮಾತ್ರ ವ್ಯಾಪಾರ ಮಾಡೋಕೆ ಪುರುಷರಿಗೂ ಮೀಸಲಾತಿ ಕಲ್ಪಿಸಿಕೊಡಿ ಎಂದು ಅಲ್ಲಿನ ಗಂಡಸರು ಗೋಗರೆಯುತ್ತಿದ್ದಾರೆ. ಆದರೆ ಅಲ್ಲಿನ ಪ್ರಬಲ ಮಹಿಳಾ ಸಂಘ ಮಾತ್ರ ರಾಜ್ಯ ಸರ್ಕಾರವನ್ನೇ ಅಲುಗಾಡಿಸುವಷ್ಟರ ಮಟ್ಟಿಗೆ ಬೆಳೆದಿದ್ದು ಗಂಡಸರ ಕೂಗಿಗೆ ಕ್ಯಾರೆ ಎನ್ನುತ್ತಿಲ್ಲ.