ದಿನೇದಿನೇ ಪೆಟ್ರೋಲ್, ಡಿಸೇಲ್ ಬೆಲೆ ಗಗನಕ್ಕೇರುತ್ತಿರುವುದು ಹಾಗೂ ಅತಿಯಾದ ತೈಲ ಬಳಕೆಯಿಂದ ಪರಿಸರ ಮಲಿನವಾಗುತ್ತಿರುವುದನ್ನು ಮನಗಂಡಿರುವ ಪ್ರಮುಖ ಕಾರು ಕಂಪನಿಗಳು ಇದೀಗ ತಮ್ಮ ಪ್ರಾಡಕ್ಟ್ ವಿಚಾರದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲು ನಿರ್ಧರಿಸಿವೆ.
ಕೆಲವೇ ವರ್ಷಗಳಲ್ಲಿ ಎಲ್ಲವೂ ಎಲೆಕ್ಟ್ರಿಕ್ ಮಯವಾಗುತ್ತದೆ. ಅದರಲ್ಲಿ ಆಟೋಮೊಬೈಲ್ ಕ್ಷೇತ್ರ ಕೂಡ ಒಂದು. ಹೀಗಾಗಿ ಕೆಲವು ಕಾರು ಕಂಪನಿಗಳು ಈಗಿನಿಂದಲೇ ಎಲೆಕ್ಟ್ರಿಕ್ ಕಾರುಗಳ ತಯಾರಿಕೆ ಕುರಿತು ತಲೆಕೆಡಿಸಿಕೊಂಡಿವೆ. ಇದರ ಅಂಗವಾಗಿ ಕೆಲವು ಕಂಪನಿಗಳು ತಮ್ಮ ಫ್ಯೂಚರ್ ಪ್ಲ್ಯಾನನ್ನು ಕೂಡ ಬಹಿರಂಗಪಡಿಸಿವೆ.
ಯೆಸ್…ರೆನಾಲ್ಟ್, ನಿಸಾನ್, ಮಿಸ್ತುಬಿಷಿ (Nissan, Mitsubishi, Renault) ಕಂಪನಿಗಳು 2022ರವೇಳೆಗೆ ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿವೆ. ಇನ್ನು ಆರು ವರ್ಷಗಳಲ್ಲಿ ಈ ಮೂರು ಕಂಪನಿಗಳು 12 ವಿವಿಧ ಮಾದರಿಯ ಕಾರುಗಳನ್ನು ಹೊರತರಲಿವೆಯಂತೆ.
ವಿಶೇಷ ಎಂದರೆ ಈ ಕಂಪನಿಗಳು ಈ ನಿರ್ಧಾರಕ್ಕೆ ಬರಲು ಪ್ರಮುಖ ಕಾರಣ 2011ರಲ್ಲಿ ನಿಸಾನ್ ಬಿಡುಗಡೆ ಮಾಡಿದ್ದ ಎಲೆಕ್ಟ್ರಿಕ್ ಕಾರುಗಳು ಸಾಕಷ್ಟು ಸಂಖ್ಯೆಯಲ್ಲಿ ಸೇಲಾಗಿದ್ದು. 2010ರ ಡಿಸೆಂಬರ್ ನಿಂದೀಚೆಗೆ ನಿಸಾನ್ ಲೀಫ್ ನ 2.8 ಲಕ್ಷ ಎಲೆಕ್ಟ್ರಿಕ್ ಕಾರುಗಳು ಮಾರಾಟವಾಗಿದ್ದು.
ಇದಲ್ಲದೆ ಯೂರೋಪ್ ನಲ್ಲಿ ರೆನಾಲ್ಟ್ ಕಂಪನಿಯ ಎಲೆಕ್ಟ್ರಿಕ್ ಕಾರುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗಿರುವುದು.