ಮುಂಡಗೋಡ: ಬೀದಿ ವ್ಯಾಪಾರಸ್ಥರು ಸ್ವಚ್ಚತೆಗೆ ಆದ್ಯತೆ ನೀಡಿದರೆ ಗ್ರಾಹಕರ ಆರೋಗ್ಯದ ಜೊತೆಜೊತೆಗೆ ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಎಂದು ವೈದಾಧಿಕಾರಿ ಎಸ್.ವಿ.ಸುಳ್ಳದ ಹೇಳಿದರು.

ಅವರು ಮುಂಡಗೋಡ ಪಟ್ಟಣದ ನಗರ ಸಭಾ ಭವನದಲ್ಲಿ ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ನಗರಾಭಿವೃದ್ಧಿ ಕೋಶ ಉತ್ತರ ಕನ್ನಡ ಕಾರವಾರ, ಪಟ್ಟಣ ಪಂಚಾಯಿತಿ ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ದೀನ್ ದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಅಭಿಯಾನದಡಿಯಲ್ಲಿ ನಗರ ಬೀದಿ ಬದಿ ವ್ಯಾಪಾರಸ್ಥರಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೀದಿಗಳಲ್ಲಿ ವ್ಯಾಪಾರಸ್ಥರು ದೋಷಿತ ವಾತವರಣದಲ್ಲಿರುವುದರಿಂದ ಅವರು ಬೀದಿಯಲ್ಲಿ ವ್ಯಾಪಾರ ಮಾಡಬೇಕಾದರೆ ಮೂಗಿಗೆ ಮಾಸ್ಕ್ ಧರಿಸುವುದರಿಂದ ಅಸ್ತಮಾ, ಅಲರ್ಜಿ ಪುಪ್ಪುಸ ಸಂಬಂಧಿ ಕ್ಷಯ ಹಾಗೂ ಕುಷ್ಟ ರೋಗಗಳನ್ನು ತಡೆಗಟ್ಟಬಹುದು . ಕೆಲಸದ ಒತ್ತಡದಿಂದ ಕಲುಷಿತ ನೀರು ಕುಡಿಯುವುದು, ಗುಟಕಾ ಸೇವನೆಯಿಂದ ಆರೋಗ್ಯ ಹದಗೆಡುತ್ತದೆ. ಸರಿಯಾದ ಸಮಯಕ್ಕೆ ಊಟ, ನಿದ್ರೆ ಮಾಡಬೇಕು. ಗ್ರಾಹಕರಿಗೆ ನೀಡುವ ಆಹಾರ ಕೂಡ ಶುದ್ದವಾಗಿರಬೇಕಲ್ಲದೇ, ಸ್ವಚ್ಚತೆ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕೆಂದು ಬೀದಿ ವ್ಯಾಪಾರಸ್ಥರಿಗೆ ತಿಳಿಸಿದ ಅವರು, ಒಂದು ಮಗುವಿನ ನಂತರ ಕನಿಷ್ಟ ಮೂರು ವರ್ಷಗಳ ಅಂತರವಿರಲಿ. ಈ ತರಬೇತಿಗೆ ತಮ್ಮೆಲ್ಲರ ಸಹಕಾರದ ಅತ್ಯಗತ್ಯವಿದೆ ಎಂದು ವಾಪಾರಸ್ಥರಿಗೆ ತಿಳಿಸಿದರು.
ಪ.ಪಂ. ಅವಲಂಬನೆಯಾಗಬೇಡಿ: ಸ್ವಚ್ಚತೆಗೆ ಪಟ್ಟಣ ಪಂಚಾಯಿತಿ ಅವಲಂಬನೆಯಾಗಬೇಡಿರಿ ನಮ್ಮ ಮನೆ, ನಮ್ಮ ಓಣಿ, ನಮ್ಮ ಊರು, ನಮ್ಮ ದೇಶ ಎಂದು ಸ್ವಯಂಪ್ರೇರಿತರಾಗಿ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಕರೆ ನೀಡಿದರು.

RELATED ARTICLES  ಉತ್ತರ ಕನ್ನಡದಲ್ಲಿಯೂ ಭೂಕಂಪನ ಅನುಭವ : ಡೈನಮೈಟ್ ಸ್ಪೋಟದ ಪರಿಣಾಮವೇ?

ಮುಖ್ಯ ಅತಿಥಿಗಳಾಗಿ ಪೊಲೀಸ ಇಲಾಖೆ ಅಧಿಕಾರಿ ಬಿ.ವಿ.ಹೆಗಡೆ, ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ರೂಪಾ ಅಂಗಡಿ, ಪೂರ್ಣಿಮಾ ದೊಡ್ಡಮನಿ, ಡಾ. ಎನ್.ಎಚ್.ಹಿರೇಮಠ, ಡಾ. ಸುರೇಶ ದೊಡ್ಡಗೌಡರ, ಶರಣಪ್ಪಾ ಉಣಕಲ್ ಉಪಸ್ಥಿತರಿದ್ದರು. ಪ.ಪಂ ಯ ಮಂಚಲಾ ಶೇಟ ಸ್ವಾಗತಿಸಿದರು.ಎಸ್.ವಾಯ್.ಗೋಣೆಪ್ಪನವರ ನಿರೂಪಿಸಿದರು. ಮರಿಯಪ್ಪ ಹಳ್ಳೆಮ್ಮನವರ ವಂದಿಸಿದರು.

RELATED ARTICLES  ಪಕ್ಷ-, ಪಂಗಡ-, ಮತದ ದೃಷ್ಠಿಯನ್ನು ಬದಿಗಿಟ್ಟು, ಸಮಾಜ ಸೇವೆ ಎಂದು ಕೆಲಸ ಮಾಡಬೇಕು :ಸಚಿವ ಕಾಗೋಡು ತಿಮ್ಮಪ್ಪ