ಹೊನ್ನಾವರ:ಅಂತರಾಷ್ಟ್ರೀಯ ಗಡಿಯಲ್ಲಿ ಗೋಸಾಗಾಣಿಕೆ ತಡೆದುದಕ್ಕಾಗಿ ಹತ್ಯೆಗೊಂಡ ಬಿಎಸ್ಎಫ್ ಕಮಾಂಡರ್ ದೀಪಕ್ ಮಾಂಡೇಲ್, ಕುಂದಾಪುರದಲ್ಲಿ ಅಕ್ರಮ ಗೋಸಾಗಾಣಿಕೆ ತಡೆದ ಪೋಲಿಸ್ ನಾಗಣ್ಣ, ಕಸಾಯಿಖಾನೆಯ ಅಕ್ರಮವನ್ನು ಬಯಲಿಗೆಳೆದ ನಂದಿನಿಯವರು, ಅಕ್ರಮ ಕಸಾಯಿಖಾನೆಯನ್ನು ಮುಚ್ಚಿಸಲು ನ್ಯಾಯಾಲಯದಿಂದ ನಿರ್ದೇಶಿತರಾಗಿ ಹೋದ ಕೋರ್ಟ್ ಕಮಿಷನರ್, ಪೋಲೀಸ್ ಅಧಿಕಾರಿಗಳು ಮತ್ತು ದೂರುದಾರರಾದ ಕವಿತಾ ಜೈನ್ ಮತ್ತು ಆಂಥೋನಿಯವರು; ಹೀಗೆ ದಾಳಿಗೆ ಒಳಪಟ್ಟ ಈ ಎಲ್ಲ ವ್ಯಕ್ತಿಗಳು ಸಮಾಜದ ಬೇರೆ ಬೇರೆ ಸ್ಥರದವಾರದರೂ, ಕಾರಣ ಮಾತ್ರ ಒಂದೇ ಎನ್ನುವುದು ಆತಂಕಕಾರಿ. ಹೌದು ಇವರು ಗೋರಕ್ಷಣೆ ಮಾಡುವವರು, ಕಸಾಯಿಖಾನೆಯ ಅಕ್ರಮವನ್ನು ಬಯಲಿಗೆಳೆಯುತ್ತಾರೆ ಎಂಬ ಒಂದೇ ಒಂದು ಕಾರಣಕ್ಕೆ ಇವರನ್ನು ಟಾರ್ಗೆಟ್ ಮಾಡಲಾಗಿದೆ.! ಇದನ್ನು ಅರಿತ ಯುವ ಬ್ರಿಗೇಡ್ ಹಾಗೂ ರಾಮಚಂದ್ರಾಪುರ ಮಠದ ಗೋ ಪರಿವಾರ ಹೊನ್ನಾವರದಲ್ಲಿ ದೀಪದ ಮೆರವಣಿಗೆ ಹಮ್ಮಿಕೊಂಡಿತ್ತು.
ನಮಗೂ ಬದುಕುವ ಹಕ್ಕಿದೆ ಎಂಬ ಘೋಷವಾಕ್ಯದೊಂದಿಗೆ ಹಣತೆಹಚ್ಚಿ ಮೆರವಣಿಗೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. , ಶ್ರೀ ವೆಂಕಟರಮಣ ದೇವಸ್ಥಾನದಿಂದ ಹೊರಟು ಶರಾವತಿ ಸರ್ಕಲ್-ವೆಂಕಟರಮಣ ದೇವಸ್ಥಾನದ ವರೆಗೆ ಮೆರವಣಿಗೆಯನ್ನ ಮಾಡಲಾಯಿತು. ಮೆರವಣಿಗೆಯಲ್ಲಿ ಯುವ ಬ್ರಿಗೇಡ್ನ ಕಾರ್ಯಕರ್ತರು, ಗೋ ಪರಿವಾರದ ಕಾರ್ಯಕರ್ತರು ಹಾಗೂ ಸಾಮಾಜಿಕ ಹೋರಾಟಗಾರರು ಮತ್ತು ಗೋ ಪ್ರೇಮಿಗಳು ಭಾಗವಹಿಸಿದ್ದರು.
ನಮ್ಮ ದೇಶವನ್ನು ರಕ್ಷಿಸುವ ಸೈನಿಕರು, ನಮ್ಮನ್ನು ರಕ್ಷಿಸುವ ಪೋಲೀಸರು ಅಥವಾ ಗೋವು~ಧರ್ಮ ರಕ್ಷಣೆಗಾಗಿ ಶ್ರಮಿಸುತ್ತಿರುವವರ ಮೇಲೆ ದಾಳಿ ಮಾಡಿದರೆ ನಾವು ಸುಮ್ಮನೇ ಕೂರಲ್ಲ ಎಂಬ ಬೆಳಕಿನ ಸಂದೇಶವನ್ನು ಕೊಡಲಾಯಿತು. ಯಾವುದೇ ಕಾರಣಕ್ಕೂ ನಾವು ಅವರ ಜೊತೆ ನಿಂತು ಧೈರ್ಯ ತುಂಬತ್ತೇವೆ. ಈ ಮೂಲಕ ಗೋರಕ್ಷಣೆಗಾಗಿ ಹುತಾತ್ಮರಾದ ಕಮಾಂಡರ್ ದೀಪಕ್ ಮಾಂಡಲ್ ಅವರ ಆತ್ಮಕ್ಕೆ ಸದ್ಗತಿ ಕೋರಿದರು.