ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷರಾಗಿರುವ ರಾಹುಲ್ ಗಾಂಧಿಗೆ ಪಕ್ಷದ ವರಿಷ್ಠ ಹುದ್ದೆಗೆ ಪಟ್ಟಾಭಿಷೇಕಕ್ಕೆ ಅಕ್ಟೋಬರ್ 30 ಕ್ಕೆ ಮುಹೂರ್ತ ನಿಗದಿಯಾಗಿದೆ ಎನ್ನಲಾಗಿದೆ.
ಇತ್ತೀಚೆಗೆ ಸ್ವತಃ ಕಾಂಗ್ರೆಸ್ ಧುರೀಣೆ ಸೋನಿಯಾ ಗಾಂಧಿ ರಾಹುಲ್ ಗಾಂಧಿಗೆ ಶೀಘ್ರದಲ್ಲೇ ಅಧ್ಯಕ್ಷ ಪಟ್ಟ ನೀಡಲಾಗುವುದು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.
ಅದರಂತೆ ಅಕ್ಟೋಬರ್ 26 ಕ್ಕೆ ಈ ಬಗ್ಗೆ ಅಧಿಕೃತ ಘೋಷಣೆಯಾಗುವ ನಿರೀಕ್ಷೆಯಿದೆ. ಅಕ್ಟೋಬರ್ 30 ಕ್ಕೆ ರಾಹುಲ್ ಅಧ್ಯಕ್ಷ ಹುದ್ದೆಗೇರುವ ಸಂಭವವಿದೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಈಗಾಗಲೇ ಪಕ್ಷದ ವಿವಿಧ ರಾಜ್ಯ ಘಟಕಗಳೂ ರಾಹುಲ್ ಶೀಘ್ರದಲ್ಲಿ ಅಧ್ಯಕ್ಷ ಹುದ್ದೆಗೇರಬೇಕೆಂದು ಒತ್ತಾಯಿಸುತ್ತಿವೆ.