ಢಾಕಾ: ಏಷ್ಯಾ ಹಾಕಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮಲೇಷ್ಯಾ ತಂಡವನ್ನು ಮಣಿಸುವ ಮೂಲಕ ಭಾರತ ತಂಡ 10 ವರ್ಷಗಳ ಬಳಿಕ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಮಲೇಷ್ಯಾ ತಂಡವನ್ನು 2-1 ಗೋಲುಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ 3ನೇ ಬಾರಿ ಏಷ್ಯಾ ಕಪ್ ಜಯಿಸಿದ ಸಾಧನೆ ಮಾಡಿದೆ. ]
ಭಾರತದ ಪರ ರಮಣದೀಪ್ ಸಿಂಗ್ ಹಾಗೂ ಲಲಿತ್ ಉಪಾಧ್ಯಾಯ್ ತಲಾ 1 ಗೋಲು ಬಾರಿಸಿದರು. 1982ರಲ್ಲಿ ಪ್ರಾರಂಭಗೊಂಡ ಏಷ್ಯಾಕಪ್ ಟೂರ್ನಿ ಇಲ್ಲಿಯವರೆಗೆ 10 ಬಾರಿ ನಡೆದಿದೆ. ಭಾರತ ತಂಡ 2003 ಮತ್ತು 2007ರಲ್ಲಿ ಪ್ರಶಸ್ತಿ ಜಯಿಸಿತ್ತು. ಅದಾದ ಬಳಿಕ ಮೊದಲ ಬಾರಿ ಚಾಂಪಿಯನ್ ಆಗಿದೆ. ಇದು ಬಿಟ್ಟರೆ 5 ಬಾರಿ ರನ್ನರ್ ಅಪ್ ಆಗಿದೆ. ಮಲೇಷ್ಯಾ ತಂಡ ಏಷ್ಯಾ ಕಪ್ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಫೈನಲ್ ತಲುಪಿ ಅಚ್ಚರಿ ಮೂಡಿಸಿದೆ.