ಇವತ್ತು ಜಗತ್ತಿನಾದ್ಯಂತ ಮಹಿಳೆಯರು ಟ್ವೀಟ್ ಮಾಡುವುದಿಲ್ಲವೆಂದು ನಿರ್ಧಾರ ಮಾಡಿದ್ದಾರೆ. #WomenBoycottTwitter ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಟ್ವೀಟ್ ಮಾಡಿ ಟ್ವಿಟರ್ ವಿರುದ್ಧ ಸಮರ ಸಾರಿದ್ದಾರೆ. ಇಷ್ಟಕ್ಕೂ ಈ ಪ್ರತಿಭಟನೆ ಯಾಕಾಗಿ? ಟ್ವಿಟರ್ ನಿಂದ ಮಹಿಳೆಯರಿಗೆ ಏನು ಅನ್ಯಾಯವಾಯಿತು?

ಅಮೆರಿಕದ ಪ್ರಸಿದ್ಧ ನಟಿ, ನಿರ್ದೇಶಕಿ, ನಿರ್ಮಾಪಕಿ ಮತ್ತು ಗಾಯಕಿ ರೋಸ್ ಮ್ಯಾಕ್ ಗೊವನ್ ಅವರ ಟ್ವಿಟ್ಟರ್ ಖಾತೆಯನ್ನು ಟ್ವಿಟ್ಟರ್ ಆಡಳಿತ ಮಂಡಳಿ ಅಮಾನತು ಮಾಡಿರುವುದೇ ಮಹಿಳೆಯರು ಈ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಕಾರಣ.

ಆದದ್ದೇನು?

ಅಮೆರಿಕದ ಖ್ಯಾತ ಚಿತ್ರ ನಿರ್ದೇಶಕ ಹಾರ್ವಿ ವಿನ್ ಸ್ಟೇನ್ ಮೇಲೆ ರೋಸ್ ಮ್ಯಾಕ್ ಗೊವನ್ ಸಾರ್ವಜನಿಕವಾಗಿ ಟ್ವಿಟರ್ ನಲ್ಲಿ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ಈ ಟ್ವೀಟ್ ಹಲವಾರು ಜನ ಪ್ರತಿಕ್ರೀಯಿಸಿದ್ದರು, ಈ ರೀ ಟ್ವೀಟ್ ಗಳಲ್ಲಿ ಟ್ವಿಟರ್ ನಿಯಮಗಳಿಗೆ ವಿರುದ್ಧವಾದ ಆಕ್ಷೇಪನೀಯ ಪದಗಳನ್ನು ಬಳಕೆ ಮಾಡಲಾಗಿತ್ತು. ಅಷ್ಟೇ ಅಲ್ಲದೆ, ಈ ಆರೋಪದ ಜೊತೆಗೆ ರೋಸ್ ಮ್ಯಾಕ್ ಯಾರೋ ಒಬ್ಬ ವ್ಯಕ್ತಿಯ ಫೋನ್ ನಂಬರ್ ನ್ನು ಪೋಸ್ಟ್ ಮಾಡಿದ್ದರು. ಯಾರದ್ದೇ ವೈಯುಕ್ತಿಕ ದಾಖಲೆಗಳನ್ನು ಬಹಿರಂಗಪಡಿಸುವುದೂ ಟ್ವಿಟರ್ ಸಂಸ್ಥೆಯ ನಿಯಮಗಳಿಗೆ ವಿರುದ್ಧವಾದುದರಿಂದ ರೋಸ್ ಮ್ಯಾಕ್ ಅವರ ಟ್ವಿಟರ್ ಖಾತೆಯನ್ನು ಸ್ವಲ್ಪ ದಿನಗಳ ಮಟ್ಟಿಗೆ ಅಮಾನತು ಮಾಡಲಾಗಿತ್ತು.

RELATED ARTICLES  ಪ್ರದೋಷ ಮಹಿಮೆ

ಇದರಿಂದ ಆಕ್ರೋಶಗೊಂಡ ರೋಸ್ ಅಭಿಮಾನಿಗಳು ಮತ್ತು ಇತರ ಮಹಿಳಾಪರರು ಟ್ವಿಟರ್ ವಿರುದ್ಧ ಪ್ರತಿಭಟನೆ ನಡೆಸುವ ನಿರ್ಧಾರಕ್ಕೆ ಬಂದರು. ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವವರ ಧ್ವನಿಯನ್ನು ಅಡಗಿಸುವ ಟ್ವಿಟರ್ ನ ಪ್ರಯತ್ನದ ವಿರುದ್ಧ ದಂಗೆ ಎದ್ದ ಮಹಿಳಾವಾದಿಗಳು #WomenBoycottTwitter ಎಂಬ ಹ್ಯಾಶ್ ಟ್ಯಾಗ್ ಬಳಸಿ ಇವತ್ತಿನ ದಿನ ಬೆಳಗ್ಗೆ 9:30 ಯಿಂದ ನಾಳೆ ಬೆಳಗ್ಗೆ 9:30ರವರೆಗೆ ಟ್ವೀಟ್ ಮಾಡದಿರಲು ನಿರ್ಧರಿಸಿದ್ದಾರೆ.

RELATED ARTICLES  ಮಂಗನ ಖಾಯಿಲೆಗೆ ಇನ್ನೊಂದು ಬಲಿ : ಹೆಚ್ಚಿದ ಭಯ