ಮಹಾಭಾರತ ಎಂದರೇನೇ ಅದು ಬಹಳ ದೊಡ್ಡ ಪುರಾಣ. ಅದರಲ್ಲಿ ಸಾಕಷ್ಟು ಪಾತ್ರಗಳು ಬರುತ್ತವೆ. ಒಂದೊಂದು ಪಾತ್ರಕ್ಕೂ ಒಂದೊಂದು ಕಥೆ ಇದೆ. ಮುಖ್ಯವಾಗಿ ಹೇಳಿಕೊಳ್ಳುವುದು ಪಾಂಡವರು, ಕೌರವರು, ಶ್ರೀಕೃಷ್ಣನ ಬಗ್ಗೆಯಾದರೂ ಇನ್ನೂ ಸಾಕಷ್ಟು ಪಾತ್ರಗಳಿಗೆ ಕಥೆಗಳಿವೆ. ಆ ರೀತಿಯ ಪಾತ್ರಗಳಲ್ಲಿ ಜರಾಸಂಧ ಕೂಡ ಒಬ್ಬ. ಈತ ಕೌರವರ ಪರವಾಗಿ ನಿಂತ. ಪಾಂಡವರ ಕೈಯಲ್ಲಿ ಪ್ರಾಣ ಕಳೆದುಕೊಂಡ. ಭೀಮನು ಜರಾಸಂಧನನ್ನು ಎರಡು ಭಾಗ ಮಾಡಿ ಸಾಯಿಸಿದ. ಆ ಜರಾಸಂಧನ ಬಗ್ಗೆ ನಾವೀಗ ತಿಳಿದುಕೊಳ್ಳೋಣ.

ಮಗಧ ಸಾಮ್ರಾಜ್ಯದ ರಾಜ ಬೃಹದ್ರತನಿಗೆ ಸಂತಾನಭಾಗ್ಯ ಇರಲ್ಲ. ಆತನಿಗೆ ಇಬ್ಬರು ಪತ್ನಿಯರಿರುತ್ತಾರಾದರೂ ಯಾರಿಗೂ ಸಂತಾನ ಭಾಗ್ಯ ಇರಲ್ಲ. ಇದರಿಂದ ಆತ ಪಶ್ಚಾತ್ತಾಪ ಪಡುತ್ತಾನೆ. ಆದರೆ ಚಂಡಕೌಶಿಕ ಎಂಬ ಮುನಿಯೊಬ್ಬರ ಬಗ್ಗೆ ತಿಳಿದುಕೊಂಡ ಆತನ ಸೇವೆ ಮಾಡುತ್ತಾನೆ ಬೃಹದ್ರತ. ಆ ರೀತಿಯಾಗಿ ಕೆಲವು ದಿನಗಳ ಕಾಲ ಆ ಮುನಿ ಬಳಿ ಇದ್ದು ಆತನನ್ನು ಮೆಚ್ಚಿಸಲು ಪ್ರಯತ್ನಿಸುತ್ತಾನೆ. ಇದರಿಂದ ಚಂಡಕೌಶಿಕನು ಬೃಹತ್‌ದ್ರತನ ಮನಸ್ಸಿನಲ್ಲಿನ ಬಯಕೆಯನ್ನು ಗ್ರಹಿಸಿ ಆತನಿಗೆ ಒಂದು ಹಣ್ಣನ್ನು ಕೊಡುತ್ತಾನೆ. ಆ ಹಣ್ಣನ್ನು ಪತ್ನಿಗೆ ತಿನ್ನಿಸುವಂತೆ ಹೇಳುತ್ತಾನೆ. ಅದಿಂದ ಸಂತಾನಭಾಗ್ಯ ಲಭಿಸುತ್ತದೆ ಎಂದು ಆಶೀರ್ವದಿಸುತ್ತಾನೆ.

RELATED ARTICLES  ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ?ಯಾವ ರಾಶಿಯವರಿಗೆ ಏನು ಫಲ? ಅದೃಷ್ಟ ಸಂಖ್ಯೆ ಯಾವುದು? : ದಿನಾಂಕ 21/09/2018 ರ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ !

ಆ ಹಣ್ಣನ್ನು ತೆಗೆದುಕೊಂಡ ಬೃಹದ್ರತ ಸಂತೋಷದಿಂದ ಮನೆಗೆ ಹೊರಡುತ್ತಾನೆ. ಆದರೆ ಇಬ್ಬರು ಪತ್ನಿಯರಿದ್ದ ಕಾರಣ ಯಾರ ಮನಸ್ಸನ್ನೂ ನೋಯಿಸುವುದು ಬೇಡ ಎಂದು ಅದನ್ನು ಕತ್ತರಿಸಿ ತಲಾ ಅರ್ಧ ಇಬ್ಬರಿಗೂ ಕೊಡುತ್ತಾನೆ. ಅವರಿಬ್ಬರೂ ಅರ್ಧ ದೇಹ ಇರುವ ಇಬ್ಬರು ಮಗುವನ್ನು ಹಡೆಯುತ್ತಾರೆ. ಬಾಲಕನ ಎರಡು ಭಾಗಗಳಿಗೆ ಅವರಿಬ್ಬರೂ ಜನ್ಮ ನೀಡುತ್ತಾರೆ. ಆ ರೀತಿ ಜನಿಸಿದ ಬಾಲಕನನ್ನು ನೋಡಿ ರಾಜ ಮತ್ತವರ ಪತ್ನಿಯರು ತುಂಬಾ ದುಃಖಿಸುತ್ತಾರೆ. ತುಂಬಾ ವ್ಯಥೆಪಟ್ಟ ರಾಜ ಆ ಎರಡು ದೇಹಗಳನ್ನು ತೆಗೆದುಕೊಂಡು ಹೋಗಿ ಕಾಡಿನಲ್ಲಿ ಬಿಸಾಕುತ್ತಾನೆ. ಕೂಡಲೆ ಹಿಂತಿರುಗುತ್ತಾನೆ. ಆದರೆ ಆ ದೇಹದ ಭಾಗಗಳನ್ನು ಜರಾ ಎಂಬ ರಾಕ್ಷಸಿ ನೋಡುತ್ತದೆ.

ಜರ ಆ ಎರಡು ಭಾಗಗಳನ್ನು ಜೋಡಿಸಿ ತನ್ನ ಮಂತ್ರಶಕ್ತಿಯಿಂದ ಪ್ರಾಣ ತುಂಬುತ್ತಾಳೆ. ಆಗ ಬಾಲಕ ಜೋರಾಗಿ ಅಳುತ್ತಾನೆ. ಆ ಅಳು ಕೇಳಿದ ರಾಜ ಮತ್ತೆ ಹಿಂತಿರುಗಿ ಬಂದು ನೋಡಿದಾಗ ಆ ಬಾಲಕ ಬದುಕಿರುತ್ತಾನೆ. ಇದು ಹೇಗೆ ಸಾಧ್ಯವಾಯಿತೆಂದು ಜರಳಾನ್ನು ಕೇಳುತ್ತಾನೆ. ನಡೆದದ್ದನ್ನು ಹೇಳುತ್ತಾಳೆ. ಆಗ ರಾಜ ಆಕೆಯ ಹೆಸರಿನಿಂದಲೇ ಬಾಲಕನಿಗೆ ಜರಾಸಂಧ ಎಂದು ಹೆಸರಿಡುತ್ತಾನೆ. ಆ ರೀತಿಯಾಗಿ ಜರಾಸಂಧನು ಮಗಧ ಸಾಮ್ರಾಜ್ಯದ ತಂದೆಯಾಗಿ ರಾಜನಾಗುತ್ತಾನೆ. ಕೌರವರ ಪಕ್ಷ ಸೇರುತ್ತಾನೆ. ಯುದ್ಧದಲ್ಲಿ ಭೀಮನೊಂದಿಗೆ ಹೋರಾಡುತ್ತಾನೆ.

RELATED ARTICLES  ಸೂರ್ಯನನ್ನು ಆರಾಧಿಸುವ ರಥ ಸಪ್ತಮಿ ದಿನ.

ಜರಾಸಂಧನೊಂದಿಗೆ ಭೀಮನು 14 ದಿನಗಳ ಕಾಲ ಮಲ್ಲಯುದ್ಧ ಮಾಡುತ್ತಲೇ ಇರುತ್ತಾನೆ. ಆದರೆ ಯಾರೂ ಸೋಲಲ್ಲ. ಇದರಿಂದ ಕೃಷ್ಣನ ಸಹಾಯವನ್ನು ಭೀಮ ಕೋರುತ್ತಾನೆ. ಆಗ ಕೃಷ್ಣನು ನಿಜವಾದ ರಹಸ್ಯ ಹೇಳುತ್ತಾನೆ. ಇದರಿಂದ ಭೀಮನು ಜರಾಸಂಧನನ್ನು ಎರಡಾಗಿ ಸೀಳುತ್ತಾನೆ. ಒಂದೊಂದು ಭಾಗವನ್ನು ವಿರುದ್ಧ ದಿಕ್ಕಿನಲ್ಲಿ ಬಿಸಾಕುತ್ತಾನೆ. ಜರಾಸಂಧನ ಸಂಹಾರ ಆಗುತ್ತದೆ. ಇದು ಜರಾಸಂಧನ ಕಥೆ! ಭೀಮ ಮತ್ತು ಜರಾಸಂಧ ಯುದ್ಧ ಮಾಡಿದ ಪ್ರದೇಶ ಈಗಲೂ ಇದೆಯಂತೆ. ಅದು ಬಿಹಾರ್‌ನ ರಾಜ್‌ಗಿರಿ ಪಟ್ಟಣದಲ್ಲಿದೆಯಂತೆ. ಆ ಪ್ರದೇಶವನ್ನು ಜರಾಸಂಧ್ ಕ ಅಕರಾ ಎಂದು ಕರೆಯುತ್ತಾರೆ..!