ಮುರ್ಡೇಶ್ವರ : ಇಲ್ಲಿನ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನ ಹಾಗೂ ‘ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತೆ ಹಾಗೂ ಸಾಲ ಸಮಾಲೋಚನಾ ಟ್ರಸ್ಟ್ ಭಟ್ಕಳ ಸಂಯುಕ್ತ ಆಶ್ರಯದಲ್ಲಿ, “ಉಚಿತ ಗೋಯಿಂಗ್ ಡಿಜಿಟಲ್ ತರಬೇತಿ” ಕಾರ್ಯಕ್ರಮವನ್ನು “ಗೀತಾ” ಸಭಾಭವನದಲ್ಲಿ ಆಯೋಜಿಸಲಾಗಿದೆ.
ಇದೇ ಅಕ್ಟೋಬರ್ 25ರ ಬುಧವಾರ ಮಧ್ಯಾಹ್ನ: 2.00 ರಿಂದ ಸಂಜೆ: 5.00 ಘಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ. ಈ ತರಬೇತಿಯಲ್ಲಿ ಮೊಬೈಲ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್, ಸೋಶಿಯಲ್ ಸೆಕ್ಯುರಿಟಿ ಯೋಜನೆಗಳೂ, ಅಟಲ್ ಪಿಂಚಣಿ ಯೋಜನೆ ಹಾಗೂ ಸ್ವ- ಸಹಾಯ ಗುಂಪುಗಳಿಗೆ ಎನ್. ಆರ್. ಎಮ್. ಎಮ್. ವಿಷಯದ ಬಗ್ಗೆ ಮಾಹಿತಿ ನೀಡಲಾಗುವುದು.
ಯುವಕ- ಯುವತಿಯರು, ಮಹಿಳೆಯರು ಹಾಗೂ ಸ್ವ- ಸಹಾಯ ಗುಂಪಿನ ಮಹಿಳೆಯರು ಈ ತರಬೇತಿಯಲ್ಲಿ ಭಾಗವಹಿಸಿ, ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.