ಕಾರವಾರ: ಇಲ್ಲಿನ ನೌಕಾನೆಲೆಯ ಒಳ ಪ್ರದೇಶದಲ್ಲಿ ಮೊಸಳೆ ಪತ್ತೆಯಾಗಿದ್ದು ಕೆಲ ಸಮಯ ಆತಂಕದ ವಾತಾವರಣ ನಿರ್ಮಾಣ ಮಾಡಿತ್ತು.

ಅರ್ಗಾದಲ್ಲಿರುವ ನೌಕಾನೆಲೆಯ ಕಾಮತ್ ಕಡಲತೀರದ ಪಕ್ಕದಲ್ಲಿ ಇಂದು ಮಧ್ಯಾಹ್ನದ ಸಮಯದಲ್ಲಿ ಭಾರೀ ಗಾತ್ರದ ಮೊಸಳೆ ಕಾಣಿಸಿಕೊಂಡಿತ್ತು.

RELATED ARTICLES  ಬೈಕ್ ಹಾಗೂ ಖಾಸಗಿ ಬಸ್ ನಡುವೆ ಅಪಘಾತ : ಬೈಕ್‌ ಸವಾರ ಸಾವು

ಅಲ್ಲಿನ ಕೌಂಪೌಂಡ ಪಕ್ಕದಲ್ಲಿ ಮೊಸಳೆ ಇರೋದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ಮುಟ್ಟಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಮತ್ತು ವನ್ಯಜೀವಿ ಸಂರಕ್ಷಣಾ ತಂಡದವರು ಸುರಕ್ಷಿತವಾಗಿ ಮೊಸಳೆಯನ್ನು ಹಿಡಿದು ಗಂಗಾವಳಿ ನದಿಗೆ‌ ಬಿಟ್ಟಿದ್ದಾರೆ. ಇದರಿಂದ ಇದೀಗ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.

RELATED ARTICLES  ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ ಮಂಜುನಾಥ ಎಂ.ನಾಯ್ಕ ಆಯ್ಕೆ