ಕುಮಟಾ:ಯಂಗ್ ಸ್ಟಾರ ಕ್ರಿಕೆಟ್ ಕ್ಲಬ್ ಕೋಡ್ಕಣಿ ಇವರ ಆಶ್ರಯದಲ್ಲಿ ಕುಮಟಾ ತಾಲೂಕಿನ ಕೋಡ್ಕಣಿಯಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪಂದ್ಯಾವಳಿಯನ್ನು ಉದ್ಯಮಿ ಸುಬ್ರಾಯ ವಾಳ್ಕೆಯವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪಂದ್ಯಾವಳಿಗಳ ಧ್ಯೇಯೋದ್ದೇಶಗಳ ಕುರಿತು ವಿವರಿಸಿ ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಬಿಜೆಪಿ ಮುಖಂಡರೂ ಆದ ನಾಗರಾಜ ನಾಯಕ ತೊರ್ಕೆಯವರು ಮಾತನಾಡಿ ಸುದೀರ್ಘವಾಗಿ 31 ವರ್ಷಗಳ ಕಾಲ ಇಂತಹ ಕ್ರಿಕೆಟ್ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿರುವ ಸಂಘಟಕರ ಸಂಘಟನಾ ಚಾತುರ್ಯ ಶ್ಲಾಘನೀಯವಾದದ್ದು. ಉತ್ತಮ ಪರಿಸರ ಹೊಂದಿರುವ ಈ ಕ್ರೀಡಾಂಗಣದಲ್ಲಿ ಆರೇಳು ದಿನಗಳವರೆಗೆ ಈ ಪಂದ್ಯಾವಳಿ ಜರುಗುತ್ತಿದ್ದು ಈ ಭಾಗದ ಜನರಿಗೆ ಕ್ರೀಡಾ ಮನರಂಜನೆಯನ್ನು ಒದಗಿಸುತ್ತಿದೆ. ಕ್ರೀಡಾಕೂಟಗಳು ಸಂಘಟನೆಯ ಒಂದು ಸಾಧನವಾಗಿದೆ. ಸೋಲು ಗೆಲುವುಗಳು ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದ್ದು ಸೋತಾಗ ಕುಗ್ಗದೇ ಗೆದ್ದಾಗ ಅತಿಯಾಗಿ ಹಿಗ್ಗದೇ ಸೋಲು ಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಪ್ರವೃತ್ತಿಯನ್ನು ಕ್ರೀಡೆಗಳು ಕಲಿಸುತ್ತವೆ. ಅಲ್ಲದೇ ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಒದಗಿಸುತ್ತವೆ ಎಂದು ಕ್ರೀಡೆಗಳ ಮಹತ್ವವನ್ನು ಸಾರಿದರು.

RELATED ARTICLES  ಪ್ರತಿಭಾ ಕಾರಂಜಿಯ 48 ಸ್ಪರ್ಧೆಗಳಲ್ಲಿ 43ರಲ್ಲಿ ಪ್ರಥಮ ಬಹುಮಾನ ಪಡೆದು ಸರಸ್ವತಿ ವಿದ್ಯಾ ಕೇಂದ್ರದ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿಗಳು.

ಗ್ರಾಮ ಪಂಚಾಯತ ಅಧ್ಯಕ್ಷೆ ಸುಮಿತ್ರಾ ನಾಯ್ಕರವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ ಸದಸ್ಯ ಈಶ್ವರ ಎಚ್. ನಾಯ್ಕ, ಮಂಜುನಾಥ ಆರ್. ನಾಯ್ಕ, ಪ್ರಕಾಶ ನಾಯ್ಕ, ವಿನಾಯಕ ಎಚ್. ನಾಯ್ಕ, ಚಂದ್ರಶೇಖರ ಗುನಗ, ದತ್ತಾತ್ರೇಯ ಅಂಬಿಗ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮಹೇಶ ಆಚಾರ್ಯ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

RELATED ARTICLES  ಇಂದು ಉತ್ತರ ಕನ್ನಡದಲ್ಲಿ 120 ಜನರಲ್ಲಿ ಕೊರೋನಾ ಪಾಸಿಟೀವ್