ಕುಮಟಾ: ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯು ಕನಕ ಅಧ್ಯಯನ ಕೇಂದ್ರ ಬೆಂಗಳೂರು ಅವರ ಸಹಯೋಗದಲ್ಲಿ ಕನಕ ಸಾಹಿತ್ಯ ಲೋಕದ ಕುರಿತು ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಇತ್ತೀಚೆಗೆ ಡಯಟ್ ಕುಮಟಾದಲ್ಲಿ ಏರ್ಪಡಿಸಿತ್ತು. ಕನಕದಾಸರ ಜೀವನ, ಕಲಿಯಾಗಿ, ಕವಿಯಾಗಿ, ಸಂತನಾಗಿ ಕನಕದಾಸ, ಸಮಾಜಕ್ಕೆ ಕನಕದಾಸರು ನೀಡಿದ ಸಂದೇಶ, ಕನಕದಾಸರು ನಡೆಸಿದ ಕಾವ್ಯ ಕೀರ್ತನೆಗಳ ಬಗ್ಗೆ ತೌಲನಿಕ ಅಧ್ಯಯನ, ಆ ಕಾಲದ ಸಮಕಾಲೀನ ಸಾಮಾಜಿಕ ಸ್ಥಿತಿಗತಿ ಇವೇ ಮೊದಲಾದ ವಿಷಯಗಳ ಆಧಾರದ ಮೇಲೆ ಎರಡು ಗಂಟೆಗಳ ಕಾಲ ಪ್ರಬಂಧ ರಚಿಸಲು ತಿಳಿಸಲಾಗಿದ್ದು, ಜಿಲ್ಲೆಯ ವಿವಿಧ ಪ್ರೌಢಶಾಲೆಗಳಿಂದ 35 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

RELATED ARTICLES  ಮಕ್ಕಳಾಗಲಿಲ್ಲ ಎಂಬ ನೋವಲ್ಲಿ ಆತ್ಮಹತ್ಯೆಗೆ ಶರಣಾದ ಕುಮಟಾ ಯುವಕ?

ಫಲಿತಾಂಶ ಇನ್ನಷ್ಟೇ ನೀಡಬೇಕಾಗಿದೆ. ಆದರೂ ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೆ ಅಭಿನಂದನಾ ಪರ ಪ್ರಶಸ್ತಿ ಪತ್ರವನ್ನು ವಿತರಿಸಿ ಮಾತನಾಡಿದ ಡಯಟ್ ಪ್ರಾಚಾರ್ಯರೂ, ಉಪನಿರ್ದೇಶಕರೂ ಆದ ಈಶ್ವರ ನಾಯ್ಕ ಕನಕರ ಶ್ರೇಷ್ಠ ವ್ಯಕ್ತಿತ್ವದ ಅಧ್ಯಯನ ಈ ಮೂಲಕವಾದರೂ ವಿದ್ಯಾರ್ಥಿಗಳಿಗೆ ಆಗುತ್ತಿರುವುದು ಸಂತೋಷ ಎಂದರು. ಈ ಸಂದರ್ಭದಲ್ಲಿ ಚಿತ್ರಿಗಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎನ್.ಆರ್.ಗಜು ಮಾತನಾಡಿ, ಸಾಹಿತ್ಯಾಧ್ಯಯನದಿಂದ ಹಿಂದೆ ಸರಿಯುವ ಯುವ ಪೀಳಿಗೆ ಕನಕ ಸಾಹಿತ್ಯದಿಂದ ಸ್ಪೂರ್ತಿ ಪಡೆಯಬೇಕೆಂದು ಕರೆ ನೀಡಿದರು. ವೇದಿಕೆಯಲ್ಲಿ ಡಯಟ್‍ನ ಹಿರಿಯ ಉಪನ್ಯಾಸಕ ಬಿ.ಜಿ.ಗುಣಿ, ಕಛೇರಿ ಸಹಾಯಕ ಸುರೇಶ ಮಡಿವಾಳ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES  ಪದೇ ಪದೆ ಕಾಣಿಸಿಕೊಳ್ಳುತ್ತಿರುವ ಮೊಸಳೆ : ಜನರಲ್ಲಿ ಆತಂಕ