ಅಂಕೋಲಾ : ಉ.ಕ. ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರವನ್ನು ನಡೆಸುತ್ತ ಬಂದಿದ್ದು, 2016-17ನೇ ಸಾಲಿನ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನಿಸಿದ್ದಾರೆ. 7ನೇ ತರಗತಿ, 10ನೇ ತರಗತಿ, ದ್ವಿತೀಯ ಪಿ.ಯು.ಸಿ., ಪದವಿಯಲ್ಲಿ ಪಾಸಾದ ವಿದ್ಯಾರ್ಥಿ ಹಾಗೂ ಜಿಲ್ಲಾ ಮಟ್ಟದಿಂದ ಮೇಲ್ಪಟ್ಟ ಕ್ರೀಡೆ ಮತ್ತು ಕಲೆಯಲ್ಲಿ ಸಾಧನೆ ಮಾಡಿದವರಿಗೆ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ.

RELATED ARTICLES  ‘ತುರುಬ ಕಟ್ಟುವ ಹದನ’ ನಾಟಕ ಪ್ರದರ್ಶನ ನಾಳೆ

ವಿದ್ಯಾರ್ಥಿಗಳು ಜಾತಿ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿಯೊಂದಿಗೆ ತಮ್ಮ ದೂರವಾಣಿ ಸಂಖ್ಯೆ ಹಾಗೂ ಅರ್ಜಿಯನ್ನು ನ. 15ರ ಒಳಗಾಗಿ ‘ಹನುಮಂತ ಬಿ. ಗೌಡ, ಅಧ್ಯಕ್ಷರು, ಉ.ಕ. ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘ, ಬೆಳಂಬಾರ, ಅಂಕೋಲಾ’ ದೂರವಾಣಿ ಸಂಖ್ಯೆ 9242121337 ಅಥವಾ ‘ಕಾರ್ಯದರ್ಶಿ, ವಸಂತ ಎನ್. ಗೌಡ, ಅಂಬಾರಕೊಡ್ಲ, ಅಂಕೋಲಾ’ ದೂರವಾಣಿ ಸಂಖ್ಯೆ 9480033086ಗೆ ಸಲ್ಲಿಸಲು ಹನುಮಂತ ಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಶಿರಸಿಯಲ್ಲಿ ಡೇರೆ ಮೇಳ: ಅವಕಾಶದ ಸದುಪಯೋಗ ಪಡೆದುಕೊಳ್ಳಲು ಯೋಜಕರ ಮನವಿ