ಕುಮಟಾ : ಅಕ್ಟೋಬರ್ 16ರ೦ದು ತ್ರಿಪುರ ರಾಜ್ಯದ ಗಡಿಯಲ್ಲಿ ಗೋವು ಕಳ್ಳಸಾಗಾಣಿಕೆದಾರರಿ೦ದ ತೀವ್ರವಾದ ಹಲ್ಲೆಗೊಳಗಾಗಿ ಹುತಾತ್ಮರಾದ ಗಡಿ ರಕ್ಷಣಾ ಸೇನೆಯ ಕಮಾ೦ಡರ್ ದೀಪಕ್ ಕುಮಾರ್ ಮ೦ಡಲ್ ಅವರಿಗೆ ಶ್ರದ್ಧಾ೦ಜಲಿ ಸಮರ್ಪಣೆ ಹಾಗೂ ಗೋಪ್ರೇಮಿ ಹಾಗೂ ಗೊ ರಕ್ಷರ ಮೇಲೆ ನಿರ೦ತರವಾಗಿ ನಡೆಯುತ್ತಿರುವ ಹಲ್ಲೆಯನ್ನು ಖ೦ಡಿಸಿ ಯುವಾಬ್ರಿಗೇಡ್ ಕುಮಟಾ ಮತ್ತು ಕುಮಟಾ ಗೋ ಪರಿವಾರದವರು ಸೋಮವಾರ ಸಾಯಂಕಾಲ 6 ಗಂಟೆಗೆ ಕುಮಟಾದ ನೆಲ್ಲಿಕೇರಿ ದೇವಸ್ಥಾನದಿಂದ ಕುಂಭೇಶ್ವರ ದೇವಸ್ಥಾನದವರೆಗೆ ಬೆಳಗುವ ಹಣತೆ ಹಿಡಿದು ಪ್ರತಿಭಟನಾ ಪಾದಯಾತ್ರೆ ನಡೆಸಿದರು.
ಗೋವಿನ ಕುರಿತಾದ ಘೋಷಣೆಗಳು ಮೊಳಗಿದವು. ಇದಕ್ಕೂ ಪೂರ್ವದಲ್ಲಿ ಗುರು ವಂದನೆ ನಡೆಯಿತು. ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್ ನ ಕಾರ್ಯಕರ್ತರು .ಕುಮಟಾ ಗೋ ಪರಿವಾರದ ಅಧ್ಯಕ್ಷ ಕಿಶನ್ ವಾಳ್ಕೆ, ಮಂಡಲಾಧ್ಯಕ್ಷ ಮಂಜುನಾಥ ಸುವರ್ಣಗದ್ದೆ. ಗೋ ಪರಿವಾರದ ಜಿಲ್ಲಾ ಸಮೀತಿಯ ಸುಬ್ರಾಯ ಭಟ್ಟ, ಪ್ರಕಾಶ ಭಟ್ಟ , ವಿಶ್ವನಾಥ ನಾಯ್ಕ, ಇನ್ನಿತರ ಪ್ರಮುಖರು ಹಾಜರಿದ್ದರು.