ಟಿಪ್ಪುವಿನಂತೆ ಅನ್ಯಾಯಕ್ಕೆ ಒಳಗಾದ ವ್ಯಕ್ತಿ ನಮಗೆ ಇತಿಹಾಸದಲ್ಲಿಯೇ ಸಿಕ್ಕುವುದಿಲ್ಲ. ಅವನಂತೆ ಬ್ರಿಟಿಷರೊಂದಿಗೆ ಅವಿರತ ಹೋರಾಟ ಮಾಡಿದ ಇನ್ನೊಬ್ಬ ವ್ಯಕ್ತಿ ನಮಗೆ ಸಿಕ್ಕುವುದಿಲ್ಲ. ನಮ್ಮಲ್ಲಿ ಜಾತಿಯ ಭಾವನೆ ಇಲ್ಲದಿದ್ದರೆ ಮಾತ್ರವೇ ಅದು ಸಾಧ್ಯವಾಗುತ್ತದೆ ಎಂದು ನಾಡೋಜ ಡಾ| ಪಾಟೀಲ ಪುಟ್ಟಪ್ಪ ಹೇಳಿದ್ದಾರೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಟಿಪ್ಪು ಸುಲ್ತಾನನು ತನ್ನ ಇಡೀ ರಾಜ್ಯದಲ್ಲಿ ಪಾನ ನಿರೋಧವನ್ನು ಜಾರಿಗೆ ತಂದಿದ್ದನ್ನು. ಉದ್ದಿಮೆಗಳನ್ನು ತನ್ನ ರಾಜ್ಯದಲ್ಲಿ ಆರಂಭಿಸಿದ್ದ. ಬೆಂಗಳೂರಿನಲ್ಲಿರುವ ಲಾಲಬಾಗ್‌ವನ್ನು ಅವನೇ ಎಲ್ಲರೂ ನೋಡಿ ಅಭಿಮಾನ ಪಡುವಂತೆ ಅದನ್ನು ಕಟ್ಟಿ ಬೆಳೆಸಿದ್ದಾನೆ. ಇಂಥ ಟಿಪ್ಪು ಸುಲ್ತಾನನ ಜಯಂತಿಯನ್ನು ವೈಭವದಿಂದ ಆಚರಿಸಬೇಕೆನ್ನುವ ಬುದ್ಧಿ ನಮ್ಮ ಜನರಿಗೆ ಯಾವಾಗ ಬರುತ್ತದೆ. ನಾವು ಆತನ ಜಯಂತಿಯನ್ನು ಆಚರಿಸದೇ ಹೋದರೆ ನಾವು ತುಂಬಾ ಸಣ್ಣ ಜನರು ಎಂದೆನಿಸುತ್ತೇವೆ ಎಂದು ತಿಳಿಸಿದ್ದಾರೆ.

ಟಿಪ್ಪು ಸುಲ್ತಾನನ ಅಂತ್ಯಕ್ರಿಯೆ ನಡೆದಾಗ ಲಾರ್ಡ್ ವೆಲ್ಲೆಸ್ಲಿ ಆ ಸಮಾರಂಭಕ್ಕೆ ಹೋಗಿದ್ದ. ಆ ಅಂತ್ಯಕ್ರಿಯೆ ಸಮಾರಂಭದಲ್ಲಿ ಭಾಗವಹಿಸಿದ್ದ ವೆಲ್ಲೆಸ್ಲಿ ನಾನು ಅಷ್ಟೊಂದು ಜನ ಸಮೂಹವನ್ನು ಭಾರತದಲ್ಲಿ ಆಗಲಿ, ಐರೋಪ್ಯ ದೇಶಗಳಲ್ಲಾಗಲಿ ಎಲ್ಲಿಯೂ ಕಂಡಿರಲಿಲ್ಲ ಎಂದು ಹೇಳುತ್ತಾ ಅದು ಟಿಪ್ಪುವಿನ ಜನಪ್ರಿಯತೆಗೆ ಸಾಕ್ಷಿಯಾಗಿದ್ದಿತು ಎಂದು ಬರೆದಿದ್ದಾನೆ ಎಂದು ಹೇಳಿದ್ದಾರೆ.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 01-01-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?

ಟಿಪ್ಪು ಸುಲ್ತಾನನು ಮತಾಂಧನಾಗಿದ್ದನೆಂದು ಟೀಕಿಸುವವರು ಇದ್ದಾರೆ. ಅವನು ಮತಾಂಧನಾಗಿದ್ದರೆ, ತನ್ನ ಆಸ್ಥಾನಕ್ಕೆ ಪೂರ್ಣಯ್ಯನನ್ನು ಅದೇಕೆ ದಿವಾನನ್ನಾಗಿ ಮಾಡಿಕೊಳ್ಳುತ್ತಿದ್ದ. ಶ್ರೀರಂಗನಾಥ ದೇವಾಲಯ ಪಕ್ಕದಲ್ಲಿ ತನ್ನ ಅರಮನೆಯನ್ನೇಕೆ ಇಟ್ಟುಕೊಳ್ಳುತ್ತಿದ್ದನು. ಶೃಂಗೇರಿಯ ಶಾರದಾ ಮಾತೆ ದೇವಸ್ಥಾನವನ್ನು ಅದರ ಕೆಳಗೆ ದ್ರವ್ಯ ಇದೆ ಎನ್ನುವ ಹುಚ್ಚು ಭಾವನೆಯಿಂದ ಪೇಶ್ವೆಗಳು ಅದನ್ನು ಕೆಡವಿ ಹಾಕಿದರು. ಶೃಂಗೇರಿಯ ಜಗದ್ಗುರು ಕೆಳದಿ ರಾಜ್ಯವಾದ ಮಂಗಳೂರಿಗೆ ಓಡಿ ಹೋಗಿದ್ದರು. ಟಿಪ್ಪು ಸುಲ್ತಾನನು ಮತಾಂಧನಾಗಿದ್ದರೆ, ಶಾರದಾ ಮಾತೆಯ ದೇವಾಲಯವನ್ನು ಪುನಃ ಕಟ್ಟಿ ಶಾರದಾ ಮಾತೆಯ ವಿಗ್ರಹವನ್ನು ಅಲ್ಲಿ ಏಕೆ ಪುನಃ ಸ್ಥಾಪಿಸುತ್ತಿದ್ದ. ಕೆಳದಿ ರಾಜ್ಯಕ್ಕೆ ಓಡಿ ಹೋಗಿದ್ದ ಶೃಂಗೇರಿಯ ಜಗದ್ಗುರುಗಳನ್ನು ಮೇನೆ ಕೊಟ್ಟು ಶೃಂಗೇರಿಗೆ ಕರೆಸಿಕೊಂಡು ಅವರ ಸಿಂಹಾಸನದ ಮೇಲೆ ಅವರನ್ನು ಏಕೆ ಕೂರಿಸುತ್ತಿದ್ದನು. ಟಿಪ್ಪು ಸುಲ್ತಾನನು ಶೃಂಗೇರಿ ಮಠಕ್ಕೆ ಏನೇನು ಕೊಟ್ಟಿರುವನೆಂದು ೩೭ ತಾಮ್ರ ಪಟಗಳು ಸಿಕ್ಕಿವೆ ಎಂದು ಹೇಳಿದ್ದಾರೆ.

RELATED ARTICLES  ಅಫ್ಘಾನಿಸ್ತಾನದಿಂದ ವಾಪಸ್ ಮನೆಗೆ ಮರಳಿದ ಉತ್ತರಕನ್ನಡದ ಯುವಕ

ಟಿಪ್ಪು ಮತಾಂಧನಾಗಿದ್ದರೆ, ತನ್ನ ರಾಜ್ಯಕ್ಕೆ ಸೇರಿದ್ದ ಹುಬ್ಬಳ್ಳಿ-ಧಾರವಾಡಗಳನ್ನೇಕೆ ಮುಸಲ್ಮಾನರನ್ನಾಗಿ ಮಾಡಲಿಲ್ಲ. ಏನಾದರೂ ಕಾಗವ್ವ-ಗುಬ್ಬವ್ವ ಕಥೆಯನ್ನು ಹೇಳಿದರೆ ಜನರು ನಂಬುತ್ತಾರೆಂದು ಚಿದಾನಂದ ಮೂರ್ತಿಯಂಥವರು ಇಲ್ಲದ ಕಥೆಯನ್ನು ಸೃಷ್ಟಿಸಿ ಟಿಪ್ಪು ಹೆಸರಿಗೆ ಕಳಂಕ ಬಳೆಯಲು ಹೊರಟ್ಟಿದ್ದಾರೆ. ಟಿಪ್ಪು ಸುಲ್ತಾನನೇನಾದರೂ ೧೭೯೯ ರಲ್ಲಿ ಯುದ್ಧದಲ್ಲಿ ಗೆದ್ದಿದ್ದರೆ, ಈಗ ಇರುವುದಕ್ಕಿಂತಲೂ ಹಿಂದಿನ ಬ್ರಿಟಿಷ್ ವ್ಯಾಪ್ತಿಯ ಕರ್ನಾಟಕವೂ ನಮ್ಮದಾಗಿ ಇರುತ್ತಿತ್ತು. ಟಿಪ್ಪುವಿನ ಪುಣ್ಯದಿಂದ ನಾವು ಮಹಾದಾಯಿ ನೀರು ನಮಗೆ ಬೇಕೆಂದು ಪರಿತಪಿಸುವುದು ತಪ್ಪುತ್ತಿತ್ತು ಎಂದು ಪಾಪು ಪ್ರಕಟಣೆಯಲ್ಲಿ ಹೇಳಿದ್ದಾರೆ