ಮೊಬೈಲ್ ಕಳ್ಳತನವಾಗುವುದು ಇಲ್ಲವೇ ಹಾಳು ಮಾಡಿಕೊಳ್ಳುವುದು ಇಂದಿನ ದಿನಗಳಲ್ಲಿ ಕಾಮನ್ ಆಗಿದೆ, ಆದರೆ ಹೀಗೆ ಕಳೆದು ಹೋದ ಮತ್ತು ಹಾಳದ ಆಂಡ್ರಾಯ್ದ್ ಫೋನಿನಲ್ಲಿ ಹಲವಾರು ಅಂಕಿ-ಅಂಶಗಳು ಸೇರಿದಂತೆ ನಿಮ್ಮ ವೈಯಕ್ತಿಕ ದಾಖಲೆಗಳು ಇರಬಹುದು. ಇಲ್ಲವೇ ನಿಮ್ಮ ಕಚೇರಿಯ ದಾಖಲಾತಿಗಳು ಆಗಿರಬಹುದು.
ಈ ದಾಖಲೆಗಳನ್ನು ಹಾಳಾದ ಇಲ್ಲವೇ ಕಳ್ಳತನವಾದ ಸ್ಮಾರ್ಟ್ ಫೋನಿನಿಂದ ಅಳಿಸುವುದು ಹೇಗೆ ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದವೆ. ಇದಕ್ಕಾಗಿ ಆಂಡ್ರಾಯ್ಡ್ ಡಿವೈಸ್ ನಲ್ಲಿ ಫೈಂಡ್ ಮೈ ಡಿವೈಸ್ ಎನ್ನುವ ಆಯ್ಕೆಯನ್ನು ನೀಡಲಾಗಿದ್ದು, ಗೂಗಲ್ ಆಕೌಂಟ್ ನೊಂದಿಗೆ ಫೋನ್ ಲಾಂಗ್ ಆಗಿರಬೇಕಾಗಿದೆ. ಇದು ನಿಮ್ಮ ಫೋನಿನ ಲೋಕೆಷನ್ ಅನ್ನು ತೋರಿಸಲಿದೆ.
ಹಂತ 01: ಮೊದಲು android.com/find ಗೆ ಭೇಟಿ ನೀಡಿ.
02: ನಿಮ್ಮ ಗೂಗಲ್ ಆಕೌಂಟ್ ನೊಂದಿಗೆ ಸೈನ್ ಇನ್ ಆಗಿರಿ.
03:ನಂತರ ಅಲ್ಲಿ ನೀವು ಬಳಕೆ ಮಾಡುತ್ತಿದ್ದ ಡಿವೈಸ್ ಗಳ ಪಟ್ಟಿಯನ್ನು ತೋರಿಸಲಿದೆ. ಅದರಲ್ಲಿ ನಿಮ್ಮದು ಯಾವ ಫೋನ್ ಹಾಳಾಗಿರುವುದೋ ಅದನ್ನು ಸೆಲೆಕ್ಟ್ ಮಾಡಿಕೊಳ್ಳಿ.
04: ನಂತರ ಮ್ಯಾಪ್ ನಲ್ಲಿ ನಿಮ್ಮ ಫೋನ್ ಯಾವ ಲೋಕೆಷನ್ ನಲ್ಲಿದೆ ಎಂಬುದನ್ನು ತೋರಿಸಲಿದೆ.
05: ನಂತರ ನಿಮ್ಮ ಮೊಬೈಲ್ ಎಲ್ಲಿದೆ ಎಂಬುದನ್ನು ತೋರಿಸಲಿದೆ. ಅಲ್ಲಿಯೇ ಹಲವು ಆಯ್ಕೆಗಳು ಇರಲಿದೆ.
06: ನಂತರ ಅಲ್ಲಿಯೇ ಹಲವು ಆಯ್ಕೆಗಳು ದೊರೆಯಲಿದ್ದು, ಸೌಂಡ್, ಲಾಕ್ , ಎರೆಜ್ ಅಂತ ಇದರಲ್ಲಿ ಯಾವುದು ಬೇಕಾದರು ಆಯ್ಕೆ ಮಾಡಿಕೊಳ್ಳಬಹುದು.