ಕರಿಬಸಪ್ಪ( 51 ) ಎಂ.ಜಿ. ಮಲೆಬೆನ್ನೂರು ಮೂಲತಃ ದಾವಣಗೆರೆ ಜಿಲ್ಲೆಯವರಾಗಿದ್ದು ಓದಿದ್ದು ಎಸ್ ಎಸ್ ಎಲ್ ಸಿ. ವೃತ್ತಿಯಲ್ಲಿ ರೈತ ಸೇವಕರಾಗಿದ್ದು . ಬತ್ತ ಕಟಾವು ಯಂತ್ರದಿಂದ ಸತತ ಎಂಟು ವರ್ಷಗಳಿಂದ ಇತರೆ ರೈತರ ಸೇವೆಯೊಂದಿಗೆ ಕೃಷಿ ಮಾಡುತ್ತಿದ್ದಾರೆ . ನಾಲ್ಕು ವರ್ಷಗಳ ಹಿಂದೆ ದಾಳಿಂಬೆ ಬೆಳೆಯುವ ಇಚ್ಛೆಯಂತೆ ದಾಳಿಂಬೆ ಬೆಳೆಸಿದರು . ಅತೀ ಹೆಚ್ಚು ಕೀಟ ಬಾಧೆಯಿಂದ ಬೇಸತ್ತ ಕರಿಬಸಪ್ಪ ಅವರು ಏನಾದರೂ ಮಾಡಲೇಬೇಕೆಂಬ ತೀವ್ರ ಹಂಬಲದ ಹುಡುಕಾಟವೇ ಸಾಧನೆಯೇ ಸೋಲಾರ್ ಕೀಟ ನಾಶಕ ಯಂತ್ರದ ಸಂಶೋಧನೆ ಇವರ ಸಾಧನೆಯಾಯಿತು .

ರೈತ ಕರಿಬಸಪ್ಪ ಹೇಳುವ ಪ್ರಕಾರ ಮೊದಲು ನಾವು ತೋಟದಲ್ಲಿ ಬಳಸಿ ಪರೀಕ್ಷಿಸಿ ಇತರರಿಗೆ ಕೊಡಲು ತಯಾರಿ ನಡೆಸಿದ್ದೆವು . ಪೇಟೆಂಟ್ ಗೆ ಸಹ ಅರ್ಜಿ ಸಲ್ಲಿಸಿದ್ದೆವು . ಆಂಧ್ರಪ್ರದೇಶ ದ ಇಕ್ರಿಸ್ಯಾಟ್ ಗೆ ಈ ಮೊದಲು ಮಾಡಿದ ಯಂತ್ರ ಒಂದೂವರೆ ವರ್ಷದ ಹಿಂದೆ ಕಳಿಹಿಸಿ . ನಮ್ಮ ಕರ್ನಾಟಕದಲ್ಲೂ ಹಲವಾರು ರೈತರಿಗೆ ಕೊಟ್ಟಿದ್ದೆವು. ಆದರೇ ಈಗ ತಯಾರಿಸಿದ ಯಂತ್ರ ಎರಡು ವರ್ಷಗಳ ನಿರಂತರ ಅಧ್ಯಯನ ದಿಂದ ಅತ್ಯುತ್ತಮವಾಗಿದೆ. ಹೊಸ ಮಾದರಿಯಲ್ಲಿ ಉತ್ತಮ ಗುಣಮಟ್ಟದ ವಸ್ತುಗಳನ್ನು ಬಳಸಿ ತಯಾರಿಸಿರುವುದರಿಂದ ಹಾಗೂ ಐದು ವರ್ಷ ಸೋಲಾರ್ ಪ್ಯಾನೆಲ್ ವಾರಂಟಿ ಇರುವುದರಿಂದ ಹತ್ತಾರು ವರ್ಷ ಬಳಸಬಹುದು. ಎರಡು ವರ್ಷದ ನಂತರ ಬ್ಯಾಟರಿ ಬದಲಿಸಿದರೆ ಸಾಕು.ಎರಡು ಲೀಟರ್ ಔಷಧಿ ಖರ್ಚಿನಲ್ಲಿ ಖರೀದಿಸಿ ಹತ್ತುವರ್ಷ ಬಳಸುವ ಪರಿಸರ ಸ್ನೇಹಿ ಸೋಲಾರ್ ಟ್ರ್ಯಾಪ್ ಬಗ್ಗೆ ರೈತರಿಗೆ ಹೆಚ್ಚಿನ ಮಾಹಿತಿ ಇಲ್ಲ. ಈ ಬಗ್ಗೆ ಜಾಗೃತಿ ಮೂಡಿಸಿದರೆ ಕೀಟನಾಶಕ ಬಳಕೆಯ ಹಣ ಉಳಿಯುವ ಜೊತೆಗೇ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ದೇಶದ ಪ್ರಜೆಗಳಿಗೆ ಕೊಡಬಹುದು. ನಾನು ಒಬ್ಬ ರೈತನಾಗಿರುವುದರಿಂದ ರೈತರು ಎಷ್ಟು ಪ್ರಮಾಣದಲ್ಲಿ ಔಷಧಿ ಸಿಂಪರಣೆ ಮಾಡುತ್ತಾರೆ ಎಂಬ ಮಾಹಿತಿ ಇದೆ.

RELATED ARTICLES  ಸಮುದಾಯಭವನದ ಜಾಗ ಖರೀದಿಗೆ 5 ಲಕ್ಷ ರೂ. ನೀಡಿದ ಶಾಸಕ ದಿನಕರ ಶೆಟ್ಟಿ.

ಸಾವಯವ ಕೃಷಿಗೆ ಹೆಚ್ಚಿನ ಒಲವು ತೋರದ ರೈತ ಸಮೂಹ ರಾಸಾಯನಿಕ ಕೃಷಿ ಬಳಸಿ ಭೂಮಿಯನ್ನು ಬರಡಾಗಿಸುತ್ತಿದೆ. ಔಷಧಿ ಬಳಕೆಯಿಂದ ವಿಶ್ವ ಮಾರುಕಟ್ಟೆಯಲ್ಲಿ ನಮ್ಮ ದೇಶದ ಹಣ್ಣು ತರಕಾರಿಗಳು ಎಷ್ಟೋ ಸಲ ತಿರಸ್ಕೃತವಾಗಿವೆ. ಕಾರಣ ಔಷಧಿ ಸಿಂಪರಣೆ ಮಹಿಮೆ. ಈ ಸೋಲಾರ್ ಟ್ರ್ಯಾಪ್ ಬಳಸಲು ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಎಲ್ಲಾ ಬಗೆಯ ಬೆಳೆಗಳಿಗೆ ಬಳಸಬಹುದು. ಪತಂಗ ಜಾತಿಯ ಕೀಟಗಳು ಇಲ್ಲಿ ಬಂದು ಬೀಳುತ್ತವೆ. ಜೇನುನೊಣಗಳು ಮಾತ್ರ ಒಂದೂ ಇದುವರೆಗೂ ನಡೆಸಿದ ಪರೀಕ್ಷೆಯಲ್ಲಿ ಬಿದ್ದಿಲ್ಲ. ಪ್ರತಿದಿನ ಕತ್ತಲಾದ ನಂತರ ತಾನೇ ಆನ್ ಆಗಿ ನಾಲ್ಕು ಘಂಟೆ ನಂತರ ಆಫ್ ಆಗುತ್ತದೆ. ವಿಶೇಷ ಬೆಳಕಿನ ಕಿರಣಗಳು ಕೀಟಗಳನ್ನು ಆಕರ್ಷಿಸುತ್ತವೆ. ಎರಡು ಮೂರು ದಿನಕ್ಕೊಮ್ಮೆ ನೀರು ಬದಲಿಸಿ ಅದಕ್ಕೇ ಸ್ವಲ್ಪ ಸೋಪ್ ಆಯಿಲ್ ಹಾಕಿದರೆ ಆಯಿತು ಅಷ್ಟೇ. ಬೇಸಿನ್ ಪಕ್ಕದ ಸ್ಟ್ಯಾಂಡಿನಲ್ಲಿ ಕೊಳೆತ ಒಂದು ಬಾಳೆಹಣ್ಣು ಇಟ್ಟರೆ ಇನ್ನೂ ಹೆಚ್ಚು ಕೀಟಗಳು ಬೀಳುತ್ತವೆ. ಬೇರುಹುಳಗಳು ಕೂಡ ಬಿದ್ದಿರುವುದು ಆಶ್ಯರ್ಯ ಮೂಡಿಸಿದೆ .ಕೀಟನಾಶಕ ಸಿಂಪರಣೆಯ ವಿರೋಧದ ಮನಸ್ಥಿತಿಯೇ ಈ ಸೋಲಾರ್ ಟ್ರ್ಯಾಪ್ ಸಂಶೋಧನೆ ಗೆ ಮೂಲ ಕಾರಣ ಎನ್ನುತ್ತಾರೆ ಕರಿಬಸಪ್ಪ . ನಿಮಗೂ ಸೋಲಾರ್ ಕೀಟನಾಶಕ ಯಂತ್ರದ ಬಗ್ಗೆ ಹೆಚ್ಚಿನ ಮಾಹಿತಿ ಬೇಕೇ ಹಾಗಾದರೆ ಸಂಪರ್ಕಿಸಿ 9880973218 ( ಕರಿಬಸಪ್ಪ ಎಂ.ಜಿ. )

RELATED ARTICLES  ಭಾರತ್ ಜೋಡೋ ಪಾದಯಾತ್ರೆ ದೇಶದಲ್ಲಿ ಒಡೆದ ಮನಸ್ಸುಗಳನ್ನು ಪುನಃ ಬೆಸೆಯುವಲ್ಲಿ ಯಶಸ್ವಿಯಾಗಿದೆ : ತೆಂಗೇರಿ.