ನವದೆಹಲಿ: ಚಿತ್ರಮಂದರಿಗಳಲ್ಲಿ ಸಿನಿಮಾ ಆರಂಭಕ್ಕೂ ಮುನ್ನ ಕಡ್ಡಾಯವಾಗಿ ರಾಷ್ಟ್ರಗೀತೆ ಪ್ರದರ್ಶಿಸಬೇಕು ಎಂದು ಆದೇಶಿಸಿದ್ದ ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.

ಆದರೆ ರಾಷ್ಟ್ರಗೀತೆ ನುಡಿಸುವಾಗ ಚಿತ್ರಮಂದಿರದಲ್ಲಿರುವವರೆಲ್ಲರೂ ಎದ್ದು ನಿಂತು ಗೌರವ ಸಲ್ಲಿಸಬೇಕು ಎಂದು ಆದೇಶಿದ್ದ ಸುಪ್ರೀಂ ಕೋರ್ಟ್ ಈ ಆದೇಶದಲ್ಲಿ ಕೊಂಚ ಬದಲಾವಣೆಯನ್ನು ಮಾಡಿದೆ. ಚಿತ್ರ ವೀಕ್ಷಣೆಗಾಗಿ ಚಿತ್ರಮಂದಿರಕ್ಕೆ ತೆರಳುವ ಪ್ರೇಕ್ಷಕರು ದೇಶಭಕ್ತಿ ತೋರಲು ಎದ್ದು ನಿಲ್ಲಬೇಕಿಲ್ಲ. ಅದನ್ನು ಕಡ್ಡಾಯ ಮಾಡುವುದು ಸರಿಯಲ್ಲ. ಈ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಹೇಳಿದೆ.

ಚಿತ್ರಮಂದರಿಗಳಲ್ಲಿ ರಾಷ್ಟ್ರಗೀತೆ ನುಡಿಸುವಾಗ ಪ್ರತಿಯೊಬ್ಬರು ಎದ್ದು ನಿಲ್ಲಬೇಕಿಲ್ಲ. ಹಾಗೇ ಎದ್ದು ಇಲ್ಲದವರಿಗೆ ದೇಶಭಕ್ತಿ ಇಲ್ಲ ಎಂದು ಊಹಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಹೇಳಿಕೆಯನ್ನೇ ನ್ಯಾಯಧೀಶರಾದ ಎಎಂ ಖಾನ್ವಿಕರ್ ಮತ್ತು ಡಿವೈ ಚಂದ್ರಚೂಡ್ ಅವರು ಸಹ ಸಹಮತ ವ್ಯಕ್ತಪಡಿಸಿದ್ದಾರೆ. ಇನ್ನು ಪ್ರಕರಣದ ಮುಂದಿನ ವಿಚಾರಣೆಯನ್ನು ಕೋರ್ಟ್ ಜನವರಿ 9ಕ್ಕೆ ಮುಂದೂಡಿದೆ.

RELATED ARTICLES  ನಿಮ್ಮ ರಾಶಿಯ ಪ್ರಕಾರ ನಿಮ್ಮ ಇಂದಿನ ದಿನ ಹೇಗಿರಲಿದೆ ಗೊತ್ತಾ? ದಿನಾಂಕ 25-10-2018 ರ ರಾಶಿ ಭವಿಷ್ಯ ಇಲ್ಲಿದೆ.

ಜನರು ಚಿತ್ರಮಂದಿರಕ್ಕೆ ಮನರಂಜನೆಗಾಗಿ ಹೋಗುತ್ತಾರೆ. ಸಮಾಜಕ್ಕೆ ಮನರಂಜನೆ ಮಾತ್ರ ಬೇಕಿರುತ್ತದೆ. ಇಂತಹ ಸಮಯದಲ್ಲಿ ಪ್ರೇಕ್ಷಕರಿಗೆ ತಮ್ಮ ದೇಶಭಕ್ತಿಯನ್ನು ತೋರಿಸಲು ಚಿತ್ರಮಂದಿರದಲ್ಲಿ ಎದ್ದು ನಿಲ್ಲಿ ಎಂದು ಹೇಳುವುದು ಸರಿಯಲ್ಲ. ಅಪೇಕ್ಷಣಿಯತೆಯು ಒಂದು ವಿಷಯ ಆದರೆ ಅದನ್ನು ಕಡ್ಡಾಯವಾಗಿ ಮಾಡು ಎಂದು ಹೇಳುವುದು ಮತ್ತೊಂದು ವಿಚಾರ. ನಾಗರೀಕರು ಅವರ ತೋಳುಗಳ ಮೇಲೆ ಬಲವಂತಾಗಿ ದೇಶಭಕ್ತಿ ನಡೆಸಲು ಸಾಧ್ಯವಿಲ್ಲ ಮತ್ತು ನ್ಯಾಯಾಲಯಗಳ ಆದೇಶದ ಮೂಲಕ ಜನರಲ್ಲಿ ದೇಶಭಕ್ತಿಯನ್ನು ಹುಟ್ಟುಹಾಕಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

RELATED ARTICLES  ರಾಜ್ಯದಲ್ಲಿ ದೀಪಾವಳಿಗೆ ಪಟಾಕಿ ನಿಷೇಧ

ಕಳೆದ ವರ್ಷ ಶ್ಯಾಮ್ ನಾರಾಯಣ್ ಚೌಕ್ಸಿ ಎಂಬುವರು ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದರು.
2016ರ ಡಿಸೆಂಬರ್ 1ರಂದು ಸುಪ್ರೀಂಕೋರ್ಟ್ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಮಾಡುವ ಮುನ್ನ ರಾಷ್ಟ್ರಗೀತೆಯನ್ನು ನುಡಿಸಬೇಕು ಮತ್ತು ಪರದೆಯಲ್ಲಿ ರಾಷ್ಟ್ರಧ್ವಜ ಮೂಡಿಬರಬೇಕು. ಇನ್ನು ಚಿತ್ರಮಂದಿರದಲ್ಲಿರುವ ಪ್ರೇಕ್ಷಕರೆಲ್ಲರೂ ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ಸಲ್ಲಿಸಬೇಕು ಎಂದು ಆದೇಶಿಸಿತ್ತು.