ದೀರ್ಘ‌ಕಾಲಿಕ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಲ್ಲಿ ಪೋಷಕಾಂಶಗಳ ಕೊರತೆ ಅನ್ನುವುದು ಬಹಳ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತೊಂದರೆ. ಒಂದು ಬಾರಿ ದೀರ್ಘ‌ಕಾಲಿಕ ಮೂತ್ರಪಿಂಡದ ಕಾಯಿಲೆ ಕಾಣಿಸಿಕೊಂಡಿತು ಅಂದರೆ, ಈಗಾಗಲೆ ಇರುವ ಮಧುಮೇಹ ಮತ್ತು ಅನಿಯಂತ್ರಿತ ರಕ್ತದೊತ್ತಡ ಕಾಯಿಲೆಯ ಜತೆಗೆ ಪ್ರೊಟೀನಿನ ಕೊರತೆ, ರಕ್ತಹೀನತೆ, ದ್ರವಾಂಶ ಸಂಗ್ರಹಣೆ, ಸೋಂಕು, ಹಾರ್ಮೋನ್‌ ಅಸಮತೋಲನ ಮತ್ತು ಇನ್ನಿತರ ಸಂಬಂಧಿತ ಅಸಹಜತೆಗಳ ವಿಷವರ್ತುಲ ಆರಂಭವಾಗುತ್ತದೆ. ಪೋಷಣೆಯ ಕೊರತೆಯಿಂದಾಗಿ ರೋಗಿಯ ಜೀವನ ಗುಣಮಟ್ಟ ಮತ್ತು ಜೀವಿತಾವಧಿ ಕುಸಿಯುತ್ತದೆ.

ಡಯಾಲಿಸಿಸ್‌ನಲ್ಲಿ ಇರುವ ರೋಗಿಗಳಲ್ಲಿ ಪೋಷಣೆಯ ಮಟ್ಟವು ವ್ಯತ್ಯಾಸಗೊಳ್ಳಲು ಕಾರಣ ಆಗುವ ಅಂಶಗಳು ಎಂದರೆ
ಯುರೇಮಿಯಾ – ಹಸಿವನ್ನು ತಗ್ಗಿಸುತ್ತದೆ.

ಡಯಾಲಿಸಿಸ್‌ ಚಿಕಿತ್ಸೆಯ ಕಾರಣದಿಂದಾಗಿ ಶರೀರದಲ್ಲಿನ ಅಮಿನೋ ಆಸಿಡ್‌ ಮತ್ತು ಪ್ರೋಟೀನ್‌ ನಷ್ಟವಾಗುತ್ತದೆ.
ಡಯಾಲಿಸಿಸ್‌ ರೋಗಿಗಳು ವಯಸ್ಸಿಗೆ ಮೊದಲೆ ಮುಪ್ಪಾಗುವುದು ಮತ್ತು ಅವರಲ್ಲಿ ಕಾಣಿಸಿಕೊಳ್ಳುವ ಸಹ-ರೋಗಸೂಚಕ ಅಂಶಗಳು ದೀರ್ಘ‌ಕಾಲಿಕ ಮೂತ್ರಪಿಂಡ ಕಾಯಿಲೆ ಕಾಣಿಸಿಕೊಳ್ಳಲು ಇರುವ ಬಹುಮುಖ್ಯ ಕಾರಣ.

ಇನ್ನಿತರ ಅಂಶಗಳು ಸಹ ಈ ಪರಿಸ್ಥಿತಿಗೆ ಕಾರಣವಾಗುತ್ತವೆ
ಭಾವನಾತ್ಮಕ ಕಿರಿಕಿರಿ
ಪೋಷಕಾಂಶಗಳು ದೇಹಗತ ಆಗದಿರುವ ಅಸಾಮರ್ಥ್ಯ
ಸೂಚಿಸಿದ ಆಹಾರಗಳು ರುಚಿಕರವಾಗಿಲ್ಲದಿರುವುದು ಇತ್ಯಾದಿ

ಪ್ರೋಟೀನ್‌ ಕೊರತೆ: ಅಂತಿಮ ಹಂತದ ಮೂತ್ರಪಿಂಡ ವೈಫ‌ಲ್ಯದಿಂದ ಬಳಲುತ್ತಿರುವ ರೋಗಿಗಳಲ್ಲಿ ಪ್ರೋಟೀನ್‌ ಕೊರತೆ ಬಹಳ ಸಾಮಾನ್ಯವಾಗಿ ಕಂಡುಬರುವ ತೊಂದರೆ. ಈ ಸವಾಲನ್ನು ಎದುರಿಸುವುದು ವೈದ್ಯರುಗಳ ಚಿಕಿತ್ಸೆಯ ಉದ್ದೇಶವಾಗಿರುತ್ತದೆ.
ಸಾಮನ್ಯವಾಗಿ ಪೋಷಣೆಯ ಕೊರತೆಗೆ ಕಾರಣವಾಗುವ ಅಂಶಗಳು
ಆಹಾರಕ್ಕೆ ಸಂಬಂಧಿಸಿದ ನಿರ್ಬಂಧಗಳು
ಹಸಿವಿಲ್ಲದಿರುವಿಕೆ

ಡಯಾಲಿಸಿಸ್‌ ಅವಧಿಯಲ್ಲಿ ಪೋಷಕಾಂಶಗಳು ನಷ್ಟವಾಗುವುದು.
ಸೋಂಕು ಹೆಚ್ಚಳ

ಚಯಾಪಚಯ ಕ್ರಿಯೆ ಮತ್ತು ಹಾರ್ಮೋನಿನಲ್ಲಾಗುವ
ವ್ಯತ್ಯಾಸಗಳು

ಪ್ರೋಟೀನ್‌ ಆವಶ್ಯಕತೆ: ಡಯಾಲಿಸಿಸ್‌ ಮೇಲೆ ಅವಲಂಬಿತರಲ್ಲದ ರೋಗಿಗಳಿಗೆ ಹೋಲಿಸಿದರೆ, ಡಯಾಲಿಸಿಸ್‌ನಲ್ಲಿ ಇರುವ ರೋಗಿಗಳಿಗೆ ಪ್ರೋಟೀನ್‌ ಆವಶ್ಯಕತೆ ಹೆಚ್ಚು. ಹೆಮೋಡಯಾಲಿಸಿಸ್‌ನ ಪ್ರತೀ ಅವಧಿಯಲ್ಲಿ 1-3 ಗ್ರಾಂ ಪ್ರೋಟೀನ್‌ ನಷ್ಟವಾಗುತ್ತದೆ ಮತ್ತು ಪೆರಿಟೋನಿಯಲ್‌ ಡಯಾಲಿಸಿಸ್‌ನಲ್ಲಿ ಪ್ರತಿ 24 ಗಂಟೆಗೆ 5-15 ಗ್ರಾಂ ಪ್ರೋಟೀನ್‌ ನಷ್ಟವಾಗುತ್ತದೆ. ತಟಸ್ಥ ನೈಟ್ರೋಜನ್‌ ಸಂತುಲನೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಹೆಮೋಡಯಾಲಿಸಿಸ್‌ನಲ್ಲಿ ಇರುವ ರೋಗಿಗೆ ಸಾಮಾನ್ಯವಾಗಿ ದಿನಕ್ಕೆ 1.2 g/kg ಪ್ರೋಟೀನ್‌ ಬೇಕಾಗುವುದು. ಪೆರಿಟೋನಿಯಲ್‌ ಡಯಾಲಿಸಿಸ್‌ನಲ್ಲಿ ಇರುವ ರೋಗಿಗೆ ದಿನಕ್ಕೆ 1.2 g/kg ಪ್ರೋಟೀನ್‌ ಬೇಕಾಗುತ್ತದೆ. ಒಂದುವೇಳೆ ಅವರಲ್ಲಿ ಪೋಷಕಾಂಶಗಳ ಕೊರತೆ ಕಾಣಿಸಿಕೊಂಡಲ್ಲಿ, ಅವರಿಗೆ ದಿನಕ್ಕೆ 1.3 g/kg ನ್ನು ಶಿಫಾರಸು ಮಾಡಬೇಕು. ಸುಮಾರು 50% ದಷ್ಟು ಪ್ರೋಟೀನ್‌ ವಿಶೇಷ ಜೈವಿಕಾಂಶದಿಂದ ಕೂಡಿದ್ದಾಗಿರಬೇಕು. ಹಾಲು ಮತ್ತು ಹಾಲಿನ ಉತ್ಪನ್ನಗಳು, ಮೊಟ್ಟೆ, ಮೀನು ಮತ್ತು ಸೋಯಾ ಉತ್ಪನ್ನಗಳು ವಿಶೇಷ ಜೈವಿಕಾಂಶಗಳನ್ನು ಒಳಗೊಂಡಿರುವ ಆಹಾರಗಳು. ಪೆರಿಟೋನೈಟಿಸ್‌ ಎಂಬುದು ವಿಶೇಷ ಕ್ಯಾಟಬಾಲಿಕ್‌ ಸ್ಥಿತಿ, ಇಂತಹ ಪರಿಸ್ಥಿತಿಯಲ್ಲಿ ಇರುವ ರೋಗಿಗಳಿಗೆ ದಿನಕ್ಕೆ ಕನಿಷ್ಠ 1.5A/MAನಷ್ಟು ಪ್ರೋಟೀನ್‌ ಆವಶ್ಯಕತೆ ಇರುತ್ತದೆ.

RELATED ARTICLES  ಬೆಂಗಳೂರಿನಲ್ಲಿ BF.7 ಆತಂಕ

ಡಯಾಲಿಸಿಸ್‌ನಲ್ಲಿ ಇರುವ ಮತ್ತು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ರೋಗಿಗಳಿಗೆ ಶರೀರ ತೂಕಕ್ಕೆ ಅನುಗುಣವಾಗಿ ಬೇಕಾಗುವ ಶಕ್ತಿಯ ಆವಶ್ಯಕತೆ 35 kcal/kg ಮತ್ತು 60 ವಯಸ್ಸಿಗಿಂತ ಮೇಲಿನವರಿಗೆ 30-35 kcal/kg. ಡೆಕೊÕ$óàಸ್‌ ಮೂಲದ ಡಯಾಲಿಸಿಸ್‌ನಲ್ಲಿ ಗುಕೋಸ್‌ ಹೀರಿಕೆ ಆಗುವ ಕಾರಣದಿಂದಾಗಿ ಒಟ್ಟು ಪಾಸಿಟಿವ್‌ ಕ್ಯಾಲೊರಿ ಗಳಿಕೆ ಆಗುತ್ತದೆ. ಪೆರಿಟೋನಿಯಲ್‌ ಡಯಾಲಿಸಿಸ್‌ನಲ್ಲಿರುವ ರೋಗಿಗಳು ಹೆಚ್ಚಾಗಿ ಪೆರಿಟೋನಿಯಲ್‌ ಕುಹರದಲ್ಲಿ ಆಗುವ ಡಯಾಲೈಸೇಟ್‌ ಮತ್ತು ಗುÉಕೋಸ್‌ ಹೀರಿಕೆಯ (100-200g/day)ಕಾರಣದಿಂದಾಗಿ ಕಿಬ್ಬೊಟ್ಟೆಯ ಕಿರಿಕಿರಿ ಮತ್ತು ಹಸಿವಿಲ್ಲದಿರುವಿಕೆಯನ್ನು ಅನುಭವಿಸುತ್ತಿರುತ್ತಾರೆ. ಒಟ್ಟು ಕ್ಯಾಲೊರಿ ಸೇವನೆಯನ್ನು ಲೆಕ್ಕಹಾಕುವಾಗ, ಪೆರಿಟೋನಿಯಲ್‌ ಡಯಾಲೈಸೇಟ್‌ ಕ್ಯಾಲೊರಿಯನ್ನು ಗಣನೆಗೆ ತೆಗೆದುಕೊಳ್ಳಬೇಕಾಗುವುದು. ಡಯಾಲೈಸೇಟ್‌ನಿಂದಾಗಿ ಒಬ್ಬ ರೋಗಿಯು ದಿನಕ್ಕೆ 300-350 kcal/ಯನ್ನು ಪಡೆಯುತ್ತಾನೆ.
ಮೂತ್ರಪಿಂಡ ವೈಫ‌ಲ್ಯ ಇರುವ ರೋಗಿಗಳಲ್ಲಿ ಪಾಸೆ#àಟ್‌ ಮತ್ತು ಪೊಟ್ಯಾಷಿಯಂ ವಿಸರ್ಜನೆಯ ಕೊರತೆಯ ಕಾರಣದಿಂದಾಗಿ ಹೈಪರ್‌ ಪಾಸ್ಪೇಟುಮಿಯಾ ಮತ್ತು ಹೈಪರ್‌ ಕಲೆಮಿಯಾ ಕಾಣಿಸಿಕೊಳ್ಳುವ ಅಪಾಯವಿದೆ.

RELATED ARTICLES  ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ತಿಂದರೆ ಫಿಟ್ಸ್ ಬರುವ ಸಂಭವವಿದೆ.!?

ಹೈಪರ್‌ ಪಾಸ್ಪೇಟುಮಿಯಾವನ್ನು ತಡೆಯುವುದಕ್ಕಾಗಿ ಆಹಾರದ ಮೂಲಕ ಪಾಸ್ಫರಸ್‌ ಸೇವನೆಯನ್ನು ತಡೆಯುವುದಕ್ಕಾಗಿ ದಿನಕ್ಕೆ 800-1000mg ಮಿತಿಯಲ್ಲಿರಬೇಕು. ಪೊಟ್ಯಾಷಿಯಂ ಸೇವನೆಯ ಮಿತಿಯು ದಿನಕ್ಕೆ 1mEq/kd ನಷ್ಟು ಇರಬೇಕು. ಹೆಚ್ಚಿನ ಪ್ರಮಾಣದಲ್ಲಿ ಪಾಸ್ಫರಸ್‌ ಇರುವ ಆಹಾರವನ್ನು ವರ್ಜಿಸಬೇಕು. ಅಧಿಕ ಪೊಟ್ಯಾಷಿಯಂ ಇರುವ ಹಣ್ಣು ಮತ್ತು ತರಕಾರಿಗಳನ್ನು ವರ್ಜಿಸಬೇಕು. ಪೊಟ್ಯಾಷಿಯಂ ಅಂಶ ಕಡಿಮೆ ಇರುವ ಹಣ್ಣುಗಳನ್ನು ಸೇವಿಸಬೇಕು.
ಕ್ಯಾಲ್ಸಿಯಂ ಸೇವನೆಯು ದಿನಕ್ಕೆ 2 ಗ್ರಾಂಗಿಂತ ಕಡಿಮೆ ಇರಬೇಕು, ಪೂರಣಗಳೂ ಸೇರಿದಂತೆ ದಿನಕ್ಕೆ 1,000-1,500 ಮಿ. ಗ್ರಾಂ ಸೂಕ್ತ. ಅಂಗಾಂಶಗಳಲ್ಲಿ ನೀರು ತುಂಬಿಕೊಳ್ಳುವುದನ್ನು (ಈಡಿಮಾ) ತಡೆಯುವುದಕ್ಕಾಗಿ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದಕ್ಕಾಗಿ ಉಪ್ಪನ್ನು ಬಹಳ ಮಿತವಾಗಿ ಸೇವಿಸಬೇಕು. ಪ್ರತಿ ದಿನದ ಉಪ್ಪಿನ ಸೇವನಾ ಪ್ರಮಾಣ 2 ಗ್ರಾಂಗಿಂತಲೂ ಕಡಿಮೆ ಇರಬೇಕು.

ಪ್ರತಿದಿನದ ಕೊಲೆಸ್ಟ್ರಾಲ್‌ ಸೇವನೆ 200 ಮಿ. ಗ್ರಾಂ ಗಿಂತಲೂ ಕಡಿಮೆ ಇರಬೇಕು, ಈ ಕಾರಣಕ್ಕಾಗಿ ಕೊಲೆಸ್ಟ್ರಾಲ್‌ ಹೆಚ್ಚು ಇರುವ ಆಹಾರಗಳನ್ನು ವರ್ಜಿಸಬೇಕು.

ಸಾಮಾನ್ಯವಾಗಿ ನೀರಿನಲ್ಲಿ ಕರಗುವ ವಿಟಮಿನ್‌ಗಳು, ಝಿಂಕ್‌, ಖನಿಜಾಂಶ ಇತ್ಯಾದಿ ಪೂರಣಗಳನ್ನು ಸೂಚಿಸುತ್ತಾರೆ.

ರಕ್ತಹೀನತೆಯನ್ನು ಆಹಾರದ ಮೂಲಕ ಸರಿಪಡಿಸುವುದು ಅಸಾಧ್ಯ ಹಾಗಾಗಿ ರೋಗಿಗಳಿಗೆ ಫಾಲಿಕ್‌ ಆಸಿಡ್‌ ಮತ್ತು ವಿಟಮಿನ್‌ ಬಿ12 ವನ್ನು ಶಿಫಾರಸು ಮಾಡುತ್ತಾರೆ. ಚಿಕಿತ್ಸೆ ನೀಡುವ ಮೂತ್ರಪಿಂಡ ತಜ್ಞರು ಕಬ್ಬಿಣಾಂಶದ ಪೂರಣ ಮತ್ತು ಎರಿಥ್ರೋಪ್ರೋಟೀನ್‌ ಪ್ರಚೋದಕ ಏಜೆಂಟ್‌ ಅನ್ನು ಸೂಚಿಸುತ್ತಾರೆ.