ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ ಇಷ್ಟು ದಿನ ಕರ್ನಾಟಕ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಇಬ್ಬರು ಸ್ಥಾನ ಪಡೆದಿದ್ದು ಅದಕ್ಕೆ ಈಗ ಮತ್ತೊಂದು ಹೆಸರು ಸೇರ್ಪಡೆಗೊಳ್ಳುವ ಮುಖೇನಾ ಬಿಜೆಪಿ ಪಾಳಾಯದಲ್ಲಿ ಹೊಸ ಸಂಚಲನ ಉಂಟುಮಾಡಿದೆ.

ಯಸ್ ಇಷ್ಟು ದಿನ ತಮ್ಮೊಳಗಿನ ಬಿನ್ನಮತ ಆದಷ್ಟು ಬೇಗ ಸರಿಪಡಿಸಿಕೊಳ್ಳಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಖಡಕ್ ಸೂಚನೆ ಕೊಟ್ಟರು ರಾಜ್ಯ ನಾಯಕರು ಅದನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ ಪರಿಣಾಮ ಅಮಿತ್ ಶಾ ಇದರ ವಿರುದ್ಧ ಬಹು ದೊಡ್ಡ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರೆ ಎಂದು ಬಿಜೆಪಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

RELATED ARTICLES  ಕುಮಟಾದಲ್ಲಿ ಶಿಕ್ಷಕರಿಗಾಗಿ ಸಹಪಠ್ಯಚಟುವಟಿಕೆ ಸ್ಪರ್ಧೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ರೇಸನಲ್ಲಿ ಇರುವ ಬಿಎಸ್,ಯಡಿಯೂರಪ್ಪ ಅವರ ಮೇಲೆ ರಾಜ್ಯದಾದ್ಯಂತ ಆಕ್ರೋಶ ಇದ್ದು ಬಿಜೆಪಿ ಕಾರ್ಯಕರ್ತರೆ ಬಿಎಸ್ ವೈ ಅವರನ್ನು ವಿರೋಧಿಸುತ್ತಾ ಇದ್ದು ಅಮಿತ್ ಶಾ ಅವರಿಗೆ ತಲೆನೋವು ಹೆಚ್ಚುವಂತೆ ಮಾಡಿತ್ತು ಆದರೆ ಈಗ ಆ ಸಮಸ್ಯೆ ಗೆ ಸೂಕ್ತ ಪರಿಹಾರ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ . ಹೌದು ಯಡಿಯೂರಪ್ಪ ವಿರೋಧಿ ಅಲೆ ದಿನದಿಂದ ದಿನಕ್ಕೆ ಹೆಚ್ಚುತಿದ್ದಂತೆ ಎಚ್ಚರಗೊಂಡ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬದಲಿ ಅಭ್ಯರ್ಥಿ ಹುಡುಕಾಟ ಆರಂಬಿಸಿದರು ಅದರಲ್ಲಿ ಈಗ ಬಹುದೊಡ್ಡ ಯುಶಸ್ಸು ಸಿಕ್ಕಿದ್ದು ಉತ್ತರಕನ್ನಡ ಸಂಸದ ಸದ್ಯ ಬಿಜೆಪಿಯ ಪೈಯರ್ ಬ್ರಾಂಡ್ ಅನಂತ್ ಕುಮಾರ್ ಹೆಗ್ಡೆ . ಅಪ್ಪಟ ಹಿಂದುವಾದಿ ,ಯುವ ನಾಯಕ, ಯುವಜನತೆಯ ರೋಲ್ ಮಾಡಲ್ ಖ್ಯಾತಿಯ ಹೆಗ್ಡೆ ಅವರಿಗೆ ಪಟ್ಟ ಕಟ್ಟಲು ಹೈಕಾಮಾಂಡ್ ನಿರ್ಧರಿಸಿದ್ದು ರಾಜ್ಯದ ಬಿಜೆಪಿ ಕಾರ್ಯಕರ್ತರಿಗೆ ಸಿಹಿಸುದ್ದಿ‌ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ. ಇದರಿದಾಗಿ ಅನಂತಕುಮಾರ ಹೆಗಡೆಯವರಿಗೆ ಮುಖ್ಯಮಂತ್ರಿ ಪಟ್ಟ ಸಿಗಲಿದೆಯೇ ಎಂಬ ಬಗ್ಗೆ ಸುದ್ದಿ ದಟ್ಟವಾಗುತ್ತಿದ್ದು. ಉತ್ತರ ಕನ್ನಡ ಜನತೆಗೂ ಇದು ಸಂತಸದ ವಿಷಯವಾಗಿದೆ.

RELATED ARTICLES  ಆಟೋದಲ್ಲಿ ಗೋ ಮಾಂಸ ಸಾಗಾಟ : ಭಟ್ಕಳದ ವ್ಯಕ್ತಿ ಅಂದರ್..!

ಸದ್ಯ ಈ ಸುದ್ದಿ ಬಿಜೆಪಿ ವಲಯದಲ್ಲಿಯೇ ಗಾಡವಾಗಿ ಹಬ್ಬುತ್ತಿದ್ದು ಮುಂದಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ಸಿಗಬೇಕಾಗಿದೆ.